ವಿಂಡೋಸ್‌ ವಾಟ್ಸಾಪ್; ಡೆಸ್ಕ್‌ಟಾಪ್ ಆ್ಯಪ್‌ ಬಿಡುಗಡೆ ಮಾಡಿದ ಮೆಟಾ

Date:

ಮೆಟಾ ಸಂಸ್ಥೆಯ ಜನಪ್ರಿಯ ಅಪ್ಲಿಕೇಶನ್‌ ವಾಟ್ಸಾಪ್‌, ಪ್ರತಿ ಬಾರಿಯೂ ಹೊಸ ಅಪ್ಡೇಟ್‌ಗಳೊಂದಿಗೆ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ವಾಟ್ಸಾಪ್‌ ಬಳೆಕದಾರರಲ್ಲಿ ಹೆಚ್ಚಿನವರು ತಮ್ಮ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ಗಳಲ್ಲೂ ಸಹ ಮೆಸೇಜಿಂಗ್‌ ಸೇವೆಯನ್ನು ಬಳಸುತ್ತಿದ್ದಾರೆ.

ಮೊಬೈಲ್ ಆ್ಯಪ್‌ನಂತೆ ಇದೀಗ ಡೆಸ್ಕ್‌ಟಾಪ್, ಮ್ಯಾಕ್ ಹಾಗೂ ವೆಬ್‌ಗೂ ಹೊಸ ವಾಟ್ಸಾಪ್‌ ಆ್ಯಪ್‌ ಪರಿಚಯಿಸಿದೆ.  ಇದುವರಗೂ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ಬಳೆಸುವವರಿಗೆ ವೀಡಿಯೊ ಅಥವಾ ಆಡಿಯೋ ಕರೆ  ಮಾಡುವ ಅವಕಾಶ ಇರಲಿಲ್ಲ. ಇದೀಗ ಹೊಸ ಅಪ್ಲಿಕೇಶನ್ ಪರಿಚಯಿಸಿರುವ ವಾಟ್ಸಾಪ್, ಗ್ರೂಪ್‌ ಆಡಿಯೋ ಮತ್ತು ವಿಡಿಯೋ ಕಾಲ್‌ ಮಾಡುವ ಫೀಚರ್‌ ಪರಿಚಯಿಸಿದೆ.

ವಿಂಡೋಸ್‌ ವಾಟ್ಸಾಪ್‌ನ ಗ್ರೂಪ್ ವೀಡಿಯೊ ಕರೆಗಳಲ್ಲಿ ಎಂಟು ಜನರು ಮತ್ತು ಆಡಿಯೊ ಕರೆಗಳಲ್ಲಿ32 ಜನರು ಏಕಕಾಲದಲ್ಲಿ ಮಾತನಾಡಲು ಸಾಧ್ಯವಾಗಲಿದೆ. ಭವಿಷ್ಯದಲ್ಲಿ ಗ್ರೂಪ್ ಕಾಲ್‌ಗಾಗಿ ಅನುಮತಿಸುವ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಕಂಪನಿ ತಿಳಿಸಿದೆ. ಮ್ಯಾಕ್‌ ಡೆಸ್ಕ್‌ಟಾಪ್ ಆವೃತ್ತಿಯು ಇನ್ನೂ ಬೀಟಾ ಪರೀಕ್ಷೆಯಲ್ಲಿದೆ. ವಿಂಡೋಸ್‌ ವಾಟ್ಸಾಪ್ ಅಪ್ಲಿಕೇಶನ್ ಮೊಬೈಲ್ ಆವೃತ್ತಿಯ ಇಂಟರ್‌ಫೇಸ್‌ನೊಂದಿಗೆ ಬರಲಿದೆ ಎಂದು ಮೆಟಾ ಹೇಳಿದೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿರುವ ಮಾರ್ಕ್ ಜುಕರ್‌ಬರ್ಗ್, ಹೊಸ ವಿಂಡೋಸ್ ಆ್ಯಪ್‌ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಗುಂಪು ಕರೆಯನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆ್ಯಪ್‌ನಲ್ಲಿ ಎರಡು ನಂಬರ್ ಅಕೌಂಟ್ ಬಳಸುವ ಆಯ್ಕೆ ಪರಿಚಯಿಸಿದ ವಾಟ್ಸಾಪ್

ನಂಬರ್‌ ಒನ್‌ ಜನಪ್ರಿಯ ಮಾಧ್ಯಮ ವಾಟ್ಸಾಪ್ ಎರಡು ಅಕೌಂಟ್ ಬಳಸುವ ಆಯ್ಕೆಯನ್ನು...

ಪೊಲೀಸರು ದಲಿತರ ಹಿತಾಸಕ್ತಿಗೆ ವಿರುದ್ಧವಿದ್ದಾರೆ: ಮಾಜಿ ಐಎಎಸ್‌ ಅಧಿಕಾರಿ ಆರೋಪ

ತಿರುನಲ್ವೇಲಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ)...

ಜಮ್ಮು-ಕಾಶ್ಮೀರ | ಕಂದಕಕ್ಕೆ ಉರುಳಿದ ಬಸ್‌; 36 ಮಂದಿ ದುರ್ಮರಣ

ಬಸ್‌ವೊಂದು ಕಂದಕಕ್ಕೆ ಉರುಳಿಬಿದ್ದಿದ್ದು 36 ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಮತ್ತು...

ಮ್ಯಾನುಯಲ್ ಸ್ಕ್ಯಾವೆಂಜಿಂಗ್ | ಕೊಳಚೆ ಸ್ವಚ್ಛಗೊಳಿಸಲು ಗುಂಡಿಗೆ ಇಳಿದಿದ್ದ ನಾಲ್ವರು ಕಾರ್ಮಿಕರು ಸಾವು

ಕೈಯಲ್ಲಿ ಮಲ ಬಾಚುವಿಕೆ, ಮಲದ ಗುಂಡಿಗಳಿಗೆ ಪೌರ ಕಾರ್ಮಿಕರನ್ನು ಇಳಿಸುವುದನ್ನು ಕಾನೂನಾತ್ಮಕವಾಗಿ...