17 ವರ್ಷದ ಹುಡುಗನೊಬ್ಬ ತನ್ನ ಗೆಳತಿಯ ನಗ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಕದ್ದು ತನ್ನನ್ನು ಚುಡಾಯಿಸುತ್ತಿದ್ದ ಆಪ್ತ ಸ್ನೇಹಿತನನ್ನು ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ಶನಿವಾರ ಉತ್ತರಪ್ರದೇಶದ ಮೇರಠ್‌ನಲ್ಲಿ ಜರುಗಿದೆ.
ಆರೋಪಿ ತನ್ನ ಅಪರಾಧ ಒಪ್ಪಿಕೊಂಡಿದ್ದು ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “16 ವರ್ಷ ವಯಸ್ಸಿನ ಮೃತನು ಆರೋಪಿಯ ಗೆಳತಿಯ ಕೆಲವು ನಗ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಹೊಂದಿದ್ದ. ಸಂತ್ರಸ್ತೆಯ ಫೋನ್‌ನಿಂದ ಆ ವೀಡಿಯೊಗಳು ಮತ್ತು ಚಿತ್ರಗಳನ್ನು ಕದ್ದು ಆರೋಪಿಯನ್ನು ಕೀಟಲೆ ಮಾಡುತ್ತಿದ್ದ. ತನ್ನ ಗೆಳತಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾರ್ವಜನಿಕಗೊಳಿಸುತ್ತಾನೆಂದು ಭಾವಿಸಿ ತನ್ನ ಸ್ನೇಹಿತನನ್ನು ಕೊಲ್ಲಲು ಯೋಜಿಸಿದ್ದ,” ಎಂದು ಮೇರಠ್ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವಸತಿ ಶಾಲೆ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ ಐದು ಸಾವಿರ ನಗ್ನ ಫೋಟೋ, ವಿಡಿಯೋ ಪತ್ತೆ!
ಮೃತ ಮತ್ತು ಆರೋಪಿ ಇಬ್ಬರೂ ಕ್ರಮವಾಗಿ 11 ಮತ್ತು 12 ನೇ ತರಗತಿಗಳಲ್ಲಿ ಓದುತ್ತಿರುವ ನೆರೆಹೊರೆಯವರಾಗಿದ್ದು, ಕೋಚಿಂಗ್ ಸೆಂಟರ್‌ನಲ್ಲಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಒಟ್ಟಿಗೆ ತಯಾರಿ ನಡೆಸುತ್ತಿದ್ದರು. ಕೋಚಿಂಗ್ ಸೆಂಟರ್‌ಗೆ ಸ್ಕೂಟಿಯಲ್ಲಿ ಒಟ್ಟಿಗೆ ಹೋಗುತ್ತಿದ್ದರು” ಎಂದು ಅವರು ತಿಳಿಸಿದ್ದಾರೆ.
ಮೃತನು ನಗ್ನಚಿತ್ರಗಳು ಮತ್ತು ವಿಡಿಯೋಗಳನ್ನು ನನ್ನ ಫೋನಿನಿಂದ ತನ್ನ ಫೋನಿಗೆ ವರ್ಗಾವಣೆ ಮಾಡಿಕೊಂಡು ಚುಡಾಯಿಸುತ್ತಿದ್ದ ಎಂದು ಆರೋಪಿ ಹೇಳಿದ್ದಾನೆ.
ಶನಿವಾರ ಇಬ್ಬರೂ ಕೋಚಿಂಗ್ ಕ್ಲಾಸ್‌ಗೆ ತೆರಳಿದ್ದರು. ಆದರೆ ಮೃತನು ಸಂಜೆಯಾದರೂ ಹಿಂತಿರುಗಲಿಲ್ಲವಾದ ಕಾರಣ ಅವನ ಪೋಷಕರು ಆರೋಪಿಯನ್ನು ವಿಚಾರಿಸಿದ್ದಾರೆ. ತನ್ನ ಸ್ನೇಹಿತ ಎಲ್ಲಿದ್ದಾನೆ ಎಂದು ತಿಳಿದಿಲ್ಲ ಎಂದು ಆರೋಪಿ ಹೇಳಿದ್ದಾನೆ. ಮೃತನ ಕುಟುಂಬವು ಮಗ ಕಾಣೆಯಾಗಿದ್ದಾನೆಂದು ದೂರು ದಾಖಲಿಸಿದೆ ಮತ್ತು ಆರೋಪಿಯನ್ನು ಶಂಕಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಫುಟ್ಬಾಲ್ ಪಂದ್ಯದ ದ್ವೇಷ; ವಿದ್ಯಾರ್ಥಿಗಳನ್ನು ಅಪಹರಣಗೈದು ಅರೆನಗ್ನಗೊಳಿಸಿ ಹಲ್ಲೆ; ಇಬ್ಬರ ಬಂಧನ
ಮೃತನು ತನ್ನ ಫೋನ್‌ನಲ್ಲಿ ತನ್ನ ಗೆಳತಿಯ ನಗ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಒಮ್ಮೆ ನೋಡಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಆ ನಂತರ ಅವುಗಳನ್ನು ತನ್ನ ಫೋನ್‌ಗೆ ವರ್ಗಾಯಿಸಿಕೊಂಡು ತನ್ನನ್ನು ಕೀಟಲೆ ಮಾಡಲು ಆರಂಭಿಸಿದ. ವೀಡಿಯೊಗಳನ್ನು ಇತರರಿಗೆ ವರ್ಗಾಯಿಸುತ್ತಾನೆ ಎಂಬ ಭಯದಿಂದ ಕೊಲ್ಲಲು ಯೋಚಿಸಿದ್ದಾನೆ ಎಂದು ಎಸ್‌ಪಿ ಹೇಳಿದರು.
ಆರೋಪಿಯು ತನ್ನ ಫೋನನ್ನು 8,000 ರೂ.ಗೆ ಮಾರಿದ್ದಾನೆ. ಅದಕ್ಕೆ ಮುನ್ನ ಕೆಎಫ್‌ಸಿ ಔಟ್‌ಲೆಟ್‌ನಲ್ಲಿ ಗೆಳೆಯರಿಬ್ಬರೂ ತಿಂದು, ಮದ್ಯವನ್ನೂ ಖರೀದಿಸಿದ್ದಾರೆ. ವಾಪಸ್ ಬರುವಾಗ ಸಂಜೆ 5.30ರ ಸುಮಾರಿಗೆ ಕೊಳವೆ ಬಾವಿಯೊಂದರ ಬಳಿ ನಿಂತಿದ್ದಾರೆ. ಆರೋಪಿಯು ತನ್ನ ಬ್ಯಾಗ್‌ನಿಂದ ಸುತ್ತಿಗೆಯನ್ನು ಹೊರತೆಗೆದು ಗೆಳೆಯನನ್ನು ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
ಪೊಲೀಸರು ಮೃತನ ಫೋನ್‌ನಿಂದ ಯಾವುದೇ ವಿಡಿಯೋಗಳನ್ನು ವಶಪಡಿಸಿಕೊಂಡಿಲ್ಲ. ಆರೋಪಿಯನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳನ್ನೂ ಸಂಗ್ರಹಿಸುತ್ತಿದ್ದಾರೆ.
