ಕಲಬುರಗಿ ಜಿಲ್ಲೆಯ ಸೇಡಂನ ಬಿಜೆಪಿಯ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿ.ಬಿ.ಪಾಟೀಲ್ ತಲ್ವಾರ್‌ನಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿರುವ ಘಟನೆ ವರದಿಯಾಗಿದೆ. ಹುಟ್ಟುಹಬ್ಬ ಆಚರಣೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ವೈರಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಘಟನೆಯನ್ನು ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಸಚಿವ ಖರ್ಗೆ, “ಇದು ʼಕಲಬುರಗಿ ರಿಪಬ್ಲಿಕ್ʼ ಮಾಡುವ ಪ್ರಯತ್ನವೇ? ಬಿಜೆಪಿಗರ ಪ್ರಕಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ?ಕಲಬುರಗಿ ರಿಪಬ್ಲಿಕ್ ಎನ್ನುತ್ತಿದ್ದ ಬೆಂಗಳೂರಿನ ಬಿಜೆಪಿ ನಾಯಕರು ತಮ್ಮದೇ ಪಕ್ಷದವರ ಈ ಕೃತ್ಯಕ್ಕೆ ಯಾವ ಸಮಜಾಯಿಷಿ ನೀಡುತ್ತೀರಿ?” ಎಂದು ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಗೆ ಸಂಸದೀಯ ವ್ಯವಸ್ಥೆಯ ಇತಿಹಾಸ ತಿಳಿಸುವ ತುರ್ತು ಅಗತ್ಯವಿದೆ
“ಡಾ.ಅಂಬೇಡ್ಕರ್ ಅವರ ಫೋಟೋ ಕಾಲಿನ ಬುಡದಲ್ಲಿಟ್ಟು ತಲ್ವಾರ್ ಹಿಡಿದು ಕೇಕೆ ಹಾಕುತ್ತಿರುವ ಬಿಜೆಪಿಗರು ಗೂಂಡಾಗಿರಿ ಪ್ರದರ್ಶಿಸಿರುವುದಲ್ಲದೆ, ಬಾಬಾ ಸಾಹೇಬರ ಘನತೆಗೆ ಚ್ಯುತಿ ತಂದಿದ್ದಾರೆ. ಈ ತರಹ ಮಾಡಿ ಅಂಬೇಡ್ಕರ್ ವಿರೋಧಿ ಅಮಿತ್ ಶಾ ಅವರನ್ನು ಮೆಚ್ಚಿಸುವ ಪ್ರಯತ್ನ ಮಾಡ್ತಿದ್ದಾರಾ” ಎಂದು ಪ್ರಶ್ನೆ ಎತ್ತಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿ ಬಿ ಪಾಟೀಲ್ ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಜೃಂಭಣೆ ನಡೆಸಿದ್ದಾರೆ, ಇದು “ಕಲಬುರಗಿ ರಿಪಬ್ಲಿಕ್“ ಮಾಡುವ ಪ್ರಯತ್ನವೇ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 30, 2024
ಬಿಜೆಪಿಗರ ಪ್ರಕಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ?
ಕಲಬುರಗಿ ರಿಪಬ್ಲಿಕ್ ಎನ್ನುತ್ತಿದ್ದ ಬೆಂಗಳೂರಿನ ಬಿಜೆಪಿ ನಾಯಕರು ತಮ್ಮದೇ… pic.twitter.com/3tESNb2hOA
“ಈ ಕೃತ್ಯಕ್ಕೆ ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರಾ ಅಥವಾ ಇಂತಹ ಘೋರ ಅಪರಾಧ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರಾ? ಎಂದ ಅವರು,ಇದಕ್ಕಾಗಿ ಒಂದು ಸತ್ಯ ಶೋಧನ ಸಮಿತಿ ರಚಿಸಿಕೊಂಡು, ನಕಲಿ ಅಂಬೇಡ್ಕರ್ ವಾದಿಗಳಾದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರ ಜೊತೆಗೆ ಯಾವಾಗ ಕಲಬುರಗಿಗೆ ಬರುತ್ತೀರಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.