- ಬೆಂಗಳೂರಿನ ನೆಲಮಂಗಲದ ಸುಭಾಷ್‌ನಗರದಲ್ಲಿ ಈ ಘಟನೆ ನಡೆದಿದೆ
- ವಿನೀಶ್ ಮೂಲತಃ ಕೇರಳದ ಕಣ್ಣೂರು ಜಿಲ್ಲೆಯ ಪೆರಂದಟ್ಟದವರು
ರಾಜಧಾನಿ ಬೆಂಗಳೂರಿನಲ್ಲಿ ಡೆತ್‌ನೋಟ್ ಬರೆದಿಟ್ಟು, ವ್ಯಕ್ತಿಯೊಬ್ಬ ಟವೆಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಬೆಂಗಳೂರಿನ ನೆಲಮಂಗಲದ ಸುಭಾಷ್‌ನಗರದಲ್ಲಿ ನಡೆದಿದೆ. ಎ.ವಿ ವಿನೀಶ್ ಮೃತ ದುರ್ದೈವಿ. ಈತನಿಗೆ 37 ವರ್ಷ ವಯಸ್ಸಾಗಿತ್ತು. ವಿನೀಶ್ ಮೂಲತಃ ಕೇರಳದ ಕಣ್ಣೂರು ಜಿಲ್ಲೆಯ ಪೆರಂದಟ್ಟದವರು. ಇವರು ನಗರದ ನೆಲಮಂಗಲದಲ್ಲಿರುವ ಪವರಿಕ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಅಪ್ಪ-ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ವಿನೀಶ್ ಡೆತ್‌ನೋಟ್ ಬರೆದಿಟ್ಟು, ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಭಾಷನಗರದಲ್ಲಿ ಮನೆ ಮಾಡಿದ್ದರು. ಮನೆಯ ಮೇಲುಗಡೆ ಇವರು ವಾಸಿಸುತ್ತಿದ್ದರು. ವಿನೀಶ್ ನನ್ನು ಆತನ ಸ್ನೇಹಿತರು ಭೇಟಿ ಮಾಡಲು ಮನೆ ಬಳಿ ಬಂದಾಗ ವಿನೀಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯತ್ ಹೃದಯಾಘಾತದಿಂದ ನಿಧನ
ವಿನೀಶ್ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.