ಚಲಿಸುತ್ತಿದ್ದ ಕ್ರೂಸರ್ ವಾಹನದಿಂದ ಬಿದ್ದು ವಿದ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ಬಸವಕಲ್ಯಾಣ ತಾಲ್ಲೂಕಿನ ಹಾಮುನಗರ ತಾಂಡಾ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಕೈಲಾಸ ರವಿಕುಮಾರ್ ರಾಠೋಡ್ (14) ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಮುಡುಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕೈಲಾಸ ತಾಂಡಾದಿಂದ ಕ್ರೂಸರ್ ವಾಹನದಲ್ಲಿ ಹಿಂಬದಿ ಕುಳಿತು ಶಾಲೆಗೆ ತೆರಳುತ್ತಿದ್ದ ವೇಳೆ ವೇಗದ ರಭಸಕ್ಕೆ ಕ್ರೂಸರ್ ಹಿಂಬದಿ ಕಿಟಕಿ ತೆರೆದುಕೊಂಡ ಪರಿಣಾಮ ವಿದ್ಯಾರ್ಥಿ ವಾಹನದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಇದೇ ವಾಹನದಲ್ಲಿ ಚಲಿಸುತ್ತಿದ್ದ ಇನ್ನೋರ್ವ ವಿದ್ಯಾರ್ಥಿ ದಿಲ್ಸಾನ್ ಚವ್ಹಾಣ ಗಂಭಿರವಾಗಿ ಗಾಯಗೊಂಡಿದ್ದು, ಆತನನ್ನು ಬಸವಕಲ್ಯಾಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಗುತ್ತಿಗೆದಾರರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದೇ ರಾಜ್ಯ ಸರ್ಕಾರ?
ಘಟನಾ ಸ್ಥಳಕ್ಕೆ ಮುಡುಬಿ ಪೊಲೀಸ್ ಠಾಣೆ ಪಿಎಸ್‌ಐ ಜಯಶ್ರೀ ನೇತ್ರತ್ವದ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.