ಲಾಸ್ ವೇಗಾಸ್‌ನಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿ, 7 ಮಂದಿ ಗಾಯಗೊಂಡಿದ್ದರು. ಎಲೆಕ್ಟ್ರಿಕ್ ವಾಹನ ಸ್ಫೋಟಗೊಳ್ಳುವ ಮೊದಲು ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್ ಗಾಜಿನ ಪ್ರವೇಶದ್ವಾರಕ್ಕೆ ಡಿಕ್ಕಿಯೊಡೆದಿತ್ತು.
ಘಟನೆಯನ್ನು ಖಂಡಿಸಿರುವ ಉದ್ಯಮಿ ಇಲಾನ್ ಮಸ್ಕ್, ಇಂದು ಲಾಸ್ ವೇಗಾಸ್ ಹಾಗೂ ನ್ಯೂ ಒರ್ಲಿಯನ್ಸ್ ದಾಳಿಗಳ ನಡುವೆ ಹೋಲಿಕೆಯಿದೆ. ವಾಹನಗಳಲ್ಲಿ ನಡೆಸಲಾಗಿರುವ ಎರಡು ದಾಳಿಗಳಲ್ಲಿ ಒಂದೇ ಸ್ಥಳದಿಂದ ಕಾರನ್ನು ಬಾಡಿಗೆಗೆ ಪಡೆಯಲಾಗಿದೆ. ಇದೊಂದು ಭಯೋತ್ಪಾದನಾ ಕೃತ್ಯವಾಗಿರುವ ಸಾಧ್ಯತೆಯಿದೆ. ಆತ್ಮಹತ್ಯೆ ದಾಳಿಗೆ ಬಳಸಲಾದ ಸೈಬರ್ ಟ್ರಕ್ ಹಾಗೂ ಎಫ್ 150 ವಾಹನಗಳನ್ನು ನ್ಯೂ ಒರ್ಲಿಯನ್ಸ್‌ನಲ್ಲಿನ ಟುರೊದಿಂದ ಬಾಡಿಗೆಗೆ ಪಡೆಯಲಾಗಿದೆ. ಎರಡೂ ಘಟನೆಗಳಿಗೂ ಸಂಬಂಧವಿದೆ” ಎಂದಿದ್ದಾರೆ.
“ದುಷ್ಟರು ತಮ್ಮ ಭಯೋತ್ಪಾದನಾ ಕೃತ್ಯಕ್ಕೆ ತಪ್ಪಾದ ವಾಹನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಕಂಪನಿಯಿಂದ ತಯಾರಿಸಲ್ಪಟ್ಟ ಸೈಬರ್ ಟ್ರಕ್‌ನಲ್ಲಿ ಸ್ಫೋಟಕಗಳನ್ನು ತುಂಬಿಸಿ ದಾಳಿ ನಡೆಸಲಾಗಿದೆ. ಕಟ್ಟಡದ ಲಾಬಿಯ ಗಾಜು ಕೂಡ ಹಾನಿಗೊಳಗಾಗಿಲ್ಲ. ಎಲೆಕ್ಟ್ರಿಕ್ ವಾಹನದ ವಿನ್ಯಾಸವು ಸ್ಫೋಟದ ಹಾನಿಯನ್ನು ಕಡಿಮೆ ಮಾಡಿದ ಕಾರಣ ಹೆಚ್ಚು ದುರಂತ ಸಂಭವಿಸಿಲ್ಲ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ದಲಿತ ಅಸ್ಮಿತೆಯ ಕತೆಯನ್ನು ಬಲ್ಲಿರಾ?
ಸೈಬರ್ ಟ್ರಕ್ ವಾಹನದ ಸದೃಢತೆಯಿಂದ ಹೋಟೆಲ್ ಕಟ್ಟಡದ ಬಳಿ ಹೆಚ್ಚು ಹಾನಿಯಾಗಿಲ್ಲ. ವಾಹನದಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಬರಲಾಗಿತ್ತು ಎಂದು ಲಾಸ್ ವೇಗಾಸ್ ಪೊಲೀಸರು ಕೂಡ ಸ್ಪಷ್ಟಪಡಿಸಿದ್ದರು. ಎರಡು ದಾಳಿಗಳನ್ನು ಎಫ್‌ಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇಂದು ಮುಂಜಾನೆ ನ್ಯೂ ಒರ್ಲಿಯನ್ಸ್‌ನಲ್ಲೂ ಕೂಡ ದಾಳಿ ನಡೆದಿದ್ದು, ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಗುಂಪಿನ ಮೇಲೆ ಅಪರಿಚಿತನೊಬ್ಬ ಟ್ರಕ್‌ನಿಂದ ಅಪಘಾತ ನಡೆಸಿದ ಪರಿಣಾಮ 15 ಜನರು ಮೃತಪಟ್ಟು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಟ್ರಕ್ ಚಲಾಯಿಸಿದ ಚಾಲಕ ಅಪಘಾತ ನಡೆದ ಬಳಿಕ ಜನರ ಗುಂಪಿನತ್ತ ಏಕಾಏಕಿ ಗುಂಡು ಹಾರಿಸಿದ್ದು, ಪೊಲೀಸರೊಂದಿಗೂ ಗುಂಡಿನ ಚಕಮಕಿ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
