ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಹೆಚ್ಚಳವಾಗಿದೆ. 2014– 15 ರಲ್ಲಿ 47.15 ಕೋಟಿ ಉದ್ಯೋಗ ಸೃಜನೆಯ ದರವಿತ್ತು, 2023–24 ರ ಅವಧಿಗೆ ಶೇ 36 ರಷ್ಟು ಏರಿಕೆಯಾಗಿ 64.33 ಕೋಟಿಗೆ ತಲುಪಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸೂಖ್ ಮಾಂಡವೀಯಾ ಗುರುವಾರ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2004 ರಿಂದ 2014ರವರೆಗಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ 2.9 ಕೋಟಿ ಉದ್ಯೋಗ ಸೃಷ್ಟಿಯಾಗಿತ್ತು, ಆದರೆ ಮೋದಿ ಸರ್ಕಾರದ ಅವಧಿಯಲ್ಲಿ 2014 ರಿಂದ 2024ರವರೆಗೆ 17.19 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಕಳೆದ ಒಂದೇ ವರ್ಷದಲ್ಲಿ (2023–24)ಮೋದಿ ಸರ್ಕಾರ 4.6 ಕೋಟಿ ಉದ್ಯೋಗವನ್ನು ಸೃಷ್ಟಿಸಿದೆ ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ: ಫೈನಲ್‌ಗೆ ಭಾರತ – ಪಾಕ್ ಜೊತೆಯಾದರೆ ಎರಡು ಸ್ಥಳ ನಿಗದಿ!
ಉದ್ಯೋಗ ಜಗತ್ತಿಗೆ ಕಾಲಿಡುತ್ತಿರುವ ಯುವ ಜನರ ಕುರಿತು ಮಾಹಿತಿ ಹಂಚಿಕೊಂಡ ಅವರು. ಕಳೆದ 7 ವರ್ಷಗಳಲ್ಲಿ (ಸೆ.2017 ರಿಂದ ಸೆ.2024) 18 ರಿಂದ 28 ವರ್ಷದವರೆಗಿನ 4.7 ಕೋಟಿಯುವ ಜನತೆಗೆ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರು. ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ನಡುವೆ ಈ ಅಂಕಿ ಅಂಶ ಮಹತ್ವ ಪಡೆದುಕೊಂಡಿದೆ ಎಂದರು.
