ಚಿಂದಿ ಆಯುತ್ತಿದ್ದ ಮಕ್ಕಳಿಗೆ 500 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಸಿಕ್ಕಿದ್ದು, ಮಕ್ಕಳು ನೋಟುಗಳ ಕತೆಗಳನ್ನು ಹಿಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ, ಮಕ್ಕಳಿಗೆ ಸಿಕ್ಕಿರುವ ನೋಟುಗಳು ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಲ್ಲ. 2016ರ ನವೆಂಬರ್‌ನಲ್ಲಿ ಮೋದಿ ಸರ್ಕಾರ ಅಮಾನ್ಯಗೊಳಿಸಿದ ನೋಟುಗಳಾಗಿವೆ. ಬರೋಬ್ಬರಿ 8 ವರ್ಷಗಳ ಬಳಿಕ, ಮತ್ತೆ ಆ ನೋಟುಗಳ ಕಂತೆಗಳು ಕಸ ಸುರಿಯುವ ಜಾಗದಲ್ಲಿ ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.
ವಿಡಿಯೋದಲ್ಲಿ, ಇಬ್ಬರು ಮಕ್ಕಳು ನೋಟುಗಳ ಕಂತೆಗಳನ್ನಿಡಿದು ಮುತ್ತಿಕ್ಕುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೆಲವರು, “ಚಿಂದಿ ಹೆಕ್ಕುವ ಮಕ್ಕಳಿಗೆ ಹಲವು ಬ್ಯಾಗ್‌ಗಳಲ್ಲಿ ಹಳೆಯ 500 ರೂ. ನೋಟುಗಳು ಸಿಕ್ಕಿವೆ. ಆ ನೋಟುಗಳನ್ನು ಹೊಸ ನೋಟುಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಲು ಮಕ್ಕಳಿಗೆ ಆರ್‌ಬಿಯ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು, ಅದರಲ್ಲೂ ಹಿಂದುತ್ವ ಕೋಮುವಾದಿಗಳು ಈ ವಿಡಿಯೋ ಪಾಕಿಸ್ತಾನದ್ದು. ಭಾರತದ ನೋಟುಗಳು ಪಾಕಿಸ್ತಾನದಲ್ಲಿ ಪತ್ತೆಯಾಗಿವೆ ಎಂದೆಲ್ಲ ಸುಳ್ಳು ಹಬ್ಬಿಸುತ್ತಿದ್ದಾರೆ.
Trash picker children found many bags full of old demonetized 500 rupees currency notes.
— Woke Eminent (@WokePandemic) December 29, 2024
RBI should give them chance to deposit and take new currency notes 🙂 pic.twitter.com/nEGi4U0OvY
ಆದರೆ, ಈ ವಿಡಿಯೋ ಇತ್ತೀಚಿನದ್ದಲ್ಲ. 2017ರದ್ದು ಮತ್ತು ಭಾರತದಲ್ಲಿಯೇ ಪತ್ತೆಯಾಗಿದ್ದ ಘಟನೆಯದ್ದು ಎಂದು ‘ಕನ್ನಡ ಫ್ಯಾಕ್ಟ್ ಚೆಕ್’ ಪತ್ತೆ ಮಾಡಿದೆ. 2017ರ ಜನವರಿ ತಿಂಗಳಿನಲ್ಲಿ ಉತ್ತರಾಖಂಡದ ಋಷಿಕೇಷ ಪಟ್ಟಣದ ತಪೋವನ ಟ್ರೈ ಜಂಕ್ಷನ್ ಬಳಿ ನೋಟುಗಳು ಪತ್ತೆಯಾಗಿದ್ದ ಘಟನೆಯ ವಿಡಿಯೋ ಇದಾಗಿದೆ. 2017ರಲ್ಲಿಯೂ ಈ ವಿಡಿಯೋ ವೈರಲ್ ಆಗಿತ್ತು ಎಂಬುದನ್ನು ಕಂಡುಕೊಂಡಿದೆ.
ಈ ವರದಿ ಓದಿದ್ದೀರಾ?: ಮೋದಿ ಮಂಕುಬೂದಿಗೆ ಇನ್ನೆಷ್ಟು ದಿನ ಮರುಳಾಗುತ್ತಾರೆ ಯುವಜನರು?
ಈ ಹಿಂದೆ, ಚಲಾವಣೆಯಲ್ಲಿದ್ದ 500 ಮತ್ತು 1,000 ಮುಖ ಬೆಲೆಯ ನೋಟುಗಳನ್ನು 2016ರ ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ಏಕಾಏಕಿ ಅಮಾನ್ಯಗೊಳಿಸಿ ಆದೇಶ ಹೊರಡಿಸಿದ್ದರು. ಪರಿಣಾಮ, ನೋಟುಗಳ ಬದಲಾವಣೆಗಾಗಿ ಹಲವಾರು ಮಂದಿ ಬ್ಯಾಂಕುಗಳ ಮುಂದೆ ದಿನಗಟ್ಟಲೆ ಸಾಕುಗಳಲ್ಲಿ ನಿಂತು ಬಸವಳಿದಿದ್ದರು. ನೂರಾರು ಮಂದಿ ಅನಾರೋಗ್ಯಕ್ಕೆ ತುತ್ತಾಗಿ, ಸಾವನ್ನಪ್ಪಿದ್ದರು.