ಕ್ಷುಲ್ಲಕ ಕಾರಣಕ್ಕೆ ಎರಡು ಅಕ್ಕಪಕ್ಕದ ಮನೆಯವರು ಪರಸ್ಪರ ಬಡಿದಾಡಿಕೊಂಡ ಘಟನೆ ಧಾರವಾಡದ ಸವದತ್ತಿ ರಸ್ತೆಯ ಗೊಲ್ಲರ ಕಾಲನಿಯಲ್ಲಿ ಜನೆವರಿ 1ರ ರಾತ್ರಿ ನಡೆದಿದೆ.
ಆಟೋರಿಕ್ಷಾ ಹೊರಟಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಡ್ಡವಾಗಿದ್ದ ಕ್ಷುಲ್ಲಕ ಕಾರಣದಿಂದ ಜಗಳ ಶುರುವಾಗಿ ಇಟ್ಟಂಗಿಯಿಂದ ಹೊಡೆದಾಡಿಕೊಂಡಿದ್ದಾರೆ. ಜಗಳದಲ್ಲಿ ಇಬ್ಬರು ಗಾಯವಾಗಿದ್ದು ತದನಂತರ ಪೊಲೀಸ್ ಠಾಣೆಗೆ ಎರೆಊ ಕಡೆಯವರು ದೂರು ಪ್ರತಿದೂರು ನೀಡಿದ್ದಾರೆ.
ಅಕ್ಕಪಕ್ಕದ ಮನೆಯವರ ನಡುವೆ ಜಗಳವಾಗಿದ್ದು, ಜಗಳದಲ್ಲಿ ಇಟ್ಟಿಗೆಗಳಿಂದ ತೂರಾಡಿಕೊಂಡಿದ್ದಾರೆ. ಘಟನೆಯಲ್ಲಿ ರಾಜು ಮುಧೋಳ ಮತ್ತು ಸಂತೋಷ ಗೊಲ್ಲರ ಎಂಬುವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರು ದಾಖಲಾಗಿದೆ.
ಈ ವರದಿ ಓದಿದ್ದೀರಾ? ಧಾರವಾಡ | ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪ ಮೂರ್ತಿ ದಿಢೀರ್ ಪ್ರತ್ಯಕ್ಷ
ಗೊಲ್ಲರ ಕುಟುಂಬದ ಹುಲಗಪ್ಪ, ವಿಠಲ, ಕುಮಾರ, ಭೀಮಪ್ಪ, ಮಣಿಕಂಠ ಮತ್ತು ಸಂತೋಷನನ್ನು ಬಂಧಿಸಲಾಗಿದೆ ಎಂದು ಧಾರವಾಡ ಶಹರ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.