ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗೆ ಸೇಡಂ ತಾಲ್ಲೂಕು ಘಟಕದ ರೈತ ಸಂಘಟನೆಯ ಪದಾಧಿಕಾರಿಗಳ ನೇಮಕ ನಡೆಯಿತು.
ಯಾದಗಿರಿ ಜಿಲ್ಲೆಯ ಗುರಮಿಠಕಲ್ ಪಟ್ಟಣದ ಅತಿಥಿ ಗೃಹದಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀ ಎಂ. ಪಾಟೀಲ ಮದ್ದರಕಿ ಆದೇಶದ ಅನ್ವಯ ಪದಾಧಿಕಾರಿಗಳಿಗೆ [ಆದೇಶ ಪತ್ರ ವಿತರಿಸಿದರು.
ಗುರಮಿಠಕಲ್ ತಾಲ್ಲೂಕು ಅಧ್ಯಕ್ಷ ಬಸಂತರೆಡ್ಡಿ ಮಾತಾನಾಡಿ, ʼಗಡಿ ತಾಲೂಕಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ನ್ಯಾಯಕ್ಕಾಗಿ ಬೀದಿಗಳಿದು ಹೋರಾಟ ನಡೆಸಿ ಅವರಿಗೆ ನ್ಯಾಯ ಒದಗಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾದಂತೆ ನೋಡಿಕೊಳ್ಳಬೇಕುʼ ಎಂದು ಹೇಳಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಸೇಡಂ ತಾಲೂಕು ಅಧ್ಯಕ್ಷರಾಗಿ ಕೆ.ಮೊಗುಲಪ್ಪ ಇಟಕಾಲ್, ಪ್ರಧಾನ ಕಾರ್ಯದರ್ಶಿ ಭೀಮಶಪ್ಪ, ಉಪಾಧ್ಯಕ್ಷರಾಗಿ ಅನೀಲ ಪಿ, ಗುರುನಾಥ ಹೆಚ್, ಕಾರ್ಯದರ್ಶಿಯಾಗಿ ಮಾರುತಿ, ಖಜಾಂಚಿ ನರಹರಿ, ಸಹ ಕಾರ್ಯದರ್ಶಿಗಳಾಗಿ ಲಾಲಪ್ಪ, ಇಮ್ರಾನ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಭೀಮು, ಕೊಂಕಲ್ ಹೋಬಳಿ ಅಧ್ಯಕ್ಷ ವೆಂಕಟೇಶ್ ಇದ್ದರು.