ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮುಸ್ಲಿಂ ಸಮುದಾಯದ ಯುವಕರೊಬ್ಬರು ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಗಮನ ಸೆಳೆದಿದ್ದಾರೆ.
ದೇವದುರ್ಗದ ಗೌರಂಪೇಟ ವಾರ್ಡ್ ನಿವಾಸಿಯಾಗಿರುವ ಬಾಬು ಮಾಲೆ ಧರಿಸಿದ ಯುವಕ. ಬಾಬು ಅವರು ತಮ್ಮ ವಾರ್ಡ್‌ನ ಗೆಳೆಯರ ಬಳಗದ ಜತೆ 2014ರಿಂದ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿದ್ದಾರೆ.
“ಬಾಬು ಅವರು 2014ರಿಂದ ಪ್ರತಿ ವರ್ಷ ಅಯ್ಯಪ್ಪಸ್ವಾಮಿ ಮಾಲೆ ಧರಿಸುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ಭಾವೈಕ್ಯತೆಯ ಸಂದೇಶ ನೀಡುತ್ತಿದ್ದಾರೆ” ಎಂದು ಗೆಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ರಾಷ್ಟ್ರದ್ರೋಹಿ ಅಮಿತ್ ಶಾನನ್ನು ದೇಶದಿಂದ ಗಡಿಪಾರು ಮಾಡಿ: ಸಂವಿಧಾನ ಸಂರಕ್ಷಣಾ ಒಕ್ಕೂಟ ಒತ್ತಾಯ
ಜಾತಿ, ಧರ್ಮದ ತಿಕ್ಕಾಟಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿರುವ ಹೊತ್ತಿನಲ್ಲಿ ಭಾವೈಕ್ಯಕ್ಕೆ ನಾಂದಿ ಹಾಡಿದ್ದಾರೆ. ಪ್ರತಿ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ.
“ಸರದಿಯಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತನಾಗುತ್ತೇನೆ. ಎಲ್ಲರಂತೆ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ ಎಲ್ಲರೊಡನೆ ಕೂಡಿ ಪಾದಯಾತ್ರೆ ನಡೆಸುತ್ತೇನೆ. ಡಿಸೆಂಬರ್ 28ರಂದು ಶಬರಿಮಲೆಗೆ ತೆರಳಿ ಭಕ್ತಿ ಸಮರ್ಪಿಸಿ ಗುರುವಾರ ವಾಪಸಾಗಿದ್ದೇನೆ” ಎಂದು ಬಾಬು ತಿಳಿಸಿದ್ದಾರೆ.
