ವೇಗವಾಗಿ ತಿರುಗುವ 57 ಫ್ಯಾನ್ಗಳನ್ನು ಕೇವಲ ಒಂದು ನಿಮಿಷ (60 ಸೆಕೆಂಡ್)ದಲ್ಲಿ ವ್ಯಕ್ತಿಯೊಬ್ಬ ತನ್ನ ನಾಲಿಗೆಯಿಂದಲೇ ನಿಲ್ಲಿಸಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆಲಂಗಾಣದ ಸೂರ್ಯಪೇಟೆಯ ಕ್ರಾಂತಿ ಕುಮಾರ್ ಪಣಿಕೇರ ಅವರು ಈ ದಾಖಲೆ ನಿರ್ಮಿಸಿದ್ದಾರೆ. ಆ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ಹಂಚಿಕೊಂಡಿದೆ. ಕ್ರಾಂತಿ ಕುಮಾರ್ ಅವರನ್ನು ‘ಡ್ರಿಲ್ಮನ್’ ಎಂದು ಕರೆದಿದೆ. “ಕ್ರಾಂತಿ ಡ್ರಿಲ್ಮನ್ ಅವರು ಒಂದು ನಿಮಿಷದಲ್ಲಿ 57 ಫ್ಯಾನ್ಗಳ ತಿರುಗುತ್ತಿದ್ದ ಬ್ಲೇಡ್ಗಳನ್ನು ನಾಲಿಗೆಯಿಂದ ನಿಲ್ಲಿಸಿದ್ದಾರೆ” ಎಂದು ಜಿಡಬ್ಲ್ಯೂಆರ್ ಹೇಳಿದೆ.
ಕಾಂತ್ರಿ ಕುಮಾರ್ ಅವರ ಸಾಧನೆಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಏನಾದರೂ ತರಬೇತಿ ಇದೆಯೇ ಎಂದು ನೆಟ್ಟಿಗರು ಹೇಳಿದ್ದಾರೆ. ಕೆಲವರು ಕಾಂತ್ರಿ ಕುಮಾರ್ ಅವರದ್ದು ‘ಕಬ್ಬಿಣದ ನಾಲಿಗೆ’ ಎಂದಿದ್ದಾರೆ.
Most electric fan blades stopped using the tongue in one minute 👅 57 by Kranthi Drillman 🇮🇳 pic.twitter.com/dsH8FULHxW
— Guinness World Records (@GWR) January 2, 2025
ಮಾನವನ ನಾಲಿಗೆ ಎಂಟು ಸ್ನಾಯುಗಳಿಂದ ಮಾಡಲ್ಪಟ್ಟಿದೆ. ನಾಲಿಗೆಯ ಆಕಾರವನ್ನು ಬದಲಾಯಿಸಲು ಮತ್ತು ಹಲವಾರು ಕೆಲಸಗಳನ್ನು ನಿರ್ವಹಿಸಲು ಸ್ನಾಯುಗಳು ಒಟ್ಟಿಗೆ ಕೆಲಸ ಮಾಡುತ್ತವೆ. ದೇಹದ ಅತ್ಯಂತ ಶಕ್ತಿಶಾಲಿ ಸ್ನಾಯುಗಳಲ್ಲಿ ನಾಲಿಗೆಯೂ ಒಂದು ಎಂದು ಹೇಳಲಾಗಿದೆ. ಆದರೂ, ಯಾರು ಇಂತಹ ದುಸ್ಸಾಹನಕ್ಕೆ ಪ್ರಯತ್ನ ಮಾಡಬಾರದು.