ಲಘು ಜೆಟ್ ವಿಮಾನವೊಂದು ಪತನವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕೆ.ಮೂಕಹಳ್ಳಿ ಸಮೀಪ ನಡೆದಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ಮಧ್ನಾಹ್ನ ಹಾರಾಟ ನಡೆಸುತ್ತಿದ್ದ ಜೆಟ್‌ನಲ್ಲಿ ದೋಷಗಳು ಕಾಣಿಸಿಕೊಂಡು ಪತನವಾಗಿದೆ ಎನ್ನಲಾಗಿದೆ. ಪತನಕ್ಕೆ ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಸದ್ಯ, ಜೆಟ್‌ನಲ್ಲಿದ್ದ ಪೈಲಟ್‌ಗಳು ಪ್ಯಾರಾಚೂಟ್ ಬಳಸಿ, ಕೆಳಗೆ ಜಿಗಿದು, ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.