ಮುಖ್ಯವಾಹಿನಿಗೆ ನಕ್ಸಲರು | ನಿರುದ್ಯೋಗ, ಮಹಿಳಾ ದೌರ್ಜನ್ಯ ತಡೆ; 18 ಹಕ್ಕೊತ್ತಾಯಗಳ ಪತ್ರ ಬರೆದ ಮಾವೋವಾದಿ ಹೋರಾಟಗಾರರು!

Date:

Advertisements
ಸಶಸ್ತ್ರ ಹೋರಾಟದಲ್ಲಿ ತೊಡಗಿದ್ದ ಆರು ಮಂದಿ ನಕ್ಸಲ್‌ ಹೋರಾಟಗಾರರಾದ ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಅವರು ಮುಖ್ಯವಾಹಿನಿಗೆ ಬರುವುದಾಗಿ ಘೋಷಿಸಿದ್ದಾರೆ. ತಾವು ಸರ್ಕಾರದ ಮುಂದೆ ಶರಣಾಗಲು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಮ್ಮ ನಿಲುವು ಮತ್ತು ಹಕ್ಕೊತ್ತಾಯಗಳ ಬಗ್ಗೆ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಅವರ ಪತ್ರ ಹೀಗಿದೆ; 

ಕಳೆದ 25 ವರ್ಷಗಳಿಂದ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ, ಅಲ್ಲದೆ ಕೇರಳ ಮತ್ತು ತಮಿಳುನಾಡುಗಳಲ್ಲಿ ನಿರಂತರವಾಗಿ ಒಜರೊಂದಿಗಿದ್ದು, ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವರ ಬವಣೆಯನ್ನು ನಿವಾರಿಸಲು ಜನರೊಂದಿಗೆದ್ದು ಚಳವಳಿಯಲ್ಲಿ ತೊಡಗಿದ್ದೆವು. ಈಗ, ನಾವು ಮುಖ್ಯವಾಹಿನಿಗೆ ಬರುತಿರುವುದರಿಂದ ಜನರ ಸಮಸ್ಯೆಗಳನ್ನು ಈ ಕಳೆಕಂಡಂತೆ ಹಕ್ಕೊತ್ತಾಯಗಳಾಗಿ ಸರ್ಕಾರದ ಮುಂದೆ ಇಡುತ್ತಿದ್ದೇವೆ.

ಹಕ್ಕೊತ್ತಾಯಗಳು;

  1. ಮೂರು ರಾಜ್ಯದಲ್ಲಿ ಭೂಮಿ ಇಲ್ಲದ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಯೋಗ್ಯ ಭೂಮಿ ಕೊಡಬೇಕು.
    > ಹಾಲಿ ಈಗ ಭೂಮಿ ಇರುವವರಿಗೆ ಶಾಶ್ವತ ಹಕ್ಕು ಪತ್ರ ಕೊಡಬೇಕು.
    > ಅದರಲ್ಲೂ ಮುಖ್ಯವಾಗಿ ಎಲ್ಲ ಆದಿವಾಸಿಗಳಿಗೆ ಭೂಮಿ ಮತ್ತು ಶಾಶ್ವತ ಹಕ್ಕು ಪತ್ರ ನೀಡಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸೇಕು.
    > ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂಹೀನರಿಗೆ ಹಂಚಬೇಕು.
  2. ಆಹಾರ ಬೆಳೆ ಅದರಲ್ಲೂ ಮುಖ್ಯವಾಗಿ ಭತ್ತ ಬೆಳೆಯುವ ರೈತರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ, ಸರ್ಕಾರ ಅವರಿಗೆ ಸಂಪೂರ್ಣ ಬೆಂಬಲವಾಗಿರಬೇಕು.
  3. ಕಸ್ತೂರಿ ರಂಗನ್ ವರದಿಯನ್ನು ರದ್ದುಗೊಳಸಬೇಕು.
  4. ಪಶ್ಚಿಮ ಘಟ್ಟದಲ್ಲಿ ಟೂರಿಸಂ ಮಾಡುವ ಮೂಲಕ ಪರಿಸರ ನಾಶ ಮಾಡುವುದನ್ನು ನಿಲ್ಲಿಸಬೇಕು.
  5. ನಿರುದ್ಯೋಗಿ ಯುವ ಜನಾಂಗಕ್ಕೆ ಅವರ ಅರ್ಹತೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ಕೊಡಬೇಕು. ಅದರಲ್ಲೂ ದಲಿತ ಮತ್ತು ಆದಿವಾಸಿಗಳಿಗೆ ಆದ್ಯತೆ ಮೇರೆಗೆ ಕೊಡಬೇಕು.
  6. ಆದಿವಾಸಿಗಳಿಗೆ ಕಾಡಿನ ಮೇಲಿನ ಎಲ್ಲ ರೀತಿಯ ಅಧಿಕಾರಿವಿರಬೇಕು. ಅವರಿಗೆ ಕಾಡುತ್ಪತ್ತಿ ಸಂಗ್ರಹಿಸಲು ಅರಣ್ಯ ಇಲಾಖೆಯ ಕಿರುಕುಳ ನಿಲ್ಲಬೇಕು.
  7. ಸಾಂಸ್ಕೃತಿಕವಾಗಿ ಬರುತ್ತಿರುವ ಬದಲಾವಣೆಗಳ ಪರಿಣಾಮದಿಂದ ಮಹಿಳೆಯರ ಮೇಲೆ ಆಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟಲು ಅದಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು. ಮತ್ತು, ನಾಮಕಾವಸ್ಥೆಗಾಗಿ ನಡೆಸುವ ಕ್ರಮಗಳನ್ನು ನಿಲ್ಲಿಸಬೇಕು.
  8. ಹವಾಮಾನ ಬದಲಾವಣೆಯಿಂದ ಬರುತ್ತಿರುವ ಕೃಷಿ ಬೆಳೆ, ಮನುಷ್ಯನ ಬದುಕಿನ ಮೇಲೆ ಮತ್ತು ಪ್ರಾಕೃತಿಯ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಜನರಿಗೆ ವೈಜ್ಞಾನಿಕ ವಾಗಿ ಕಾರಣವನ್ನು ಅರ್ಥಪಡಿಸಬೇಕು. ಮತ್ತು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು.
  9. ಕುದುರೆಮುಖ ರಾಷ್ಟ್ರೀಯ ಉದ್ಯಾನವಲ ರದ್ದಾಗಬೇಕು.
    > ಇಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬಾರದು
    > ಅವರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಲ್ಲಿಯೇ ಒದಗಿಸಬೇಕು.
  10. ಮೂರು ರಾಜ್ಯಗಳಲ್ಲೂ ಒಕ್ಕಲೆಬ್ಬಿಸುವ ಎಲ್ಲ ಕ್ರಮಗಳನ್ನು ನಿಲ್ಲಿಸಬೇಕು.
  11. ಬಡ ಮತ್ತು ಮಧ್ಯಮ ವರ್ಗದ ರೈತರ ಒತ್ತುವರಿ ಭೂಮಿಯನ್ನು ತೆರವುಗೊಳಿಸಬಾರದು.
  12. ಅಡಿಕೆಗೆ ಬರುತ್ತಿರುವ ಚುಕ್ಕೆ ರೋಗ ಮತ್ತು ಇತರೆ ಬೆಳೆಗಳಿಗೆ ಬರುತ್ತಿರುವ ರೋಗಗಳ ಬಗ್ಗೆ ಸಂಶೋಧನೆ ನಡೆಸಿ, ರೋಗವನ್ನು ತಡೆಗಟ್ಟಲು ಸರ್ಕಾಋ ಪ್ರಯತ್ನಿಸಬೇಕು. ಹಾಗೂ, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರವನ್ನು ತಕ್ಷಣವೇ ಕೊಡಬೇಕು.
  13. ಆದಿವಾಸಿ ಸಮುದಾಯದಲ್ಲಿ ಅಕಾಲಿಕವಾಗಿ ಮರಣ ಹೊಂದುತ್ತಿರುವ ಜನರ ಕುರಿತು ತಕ್ಷಣವೇ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಸಿ, ಚಿಕಿತ್ಸೆ ಒದಗಿಸಿ ಪರಿಹರಿಸಬೇಕು. ಮತ್ತು 2025ರ ನಂತರ ಮರಣ ಹೊಂದಿದ್ದವರ ಕುಟುಂಬಗಳಿಗೆ ಸೂಕ್ತ ರೀತಿಯ ಪರಿಹಾರ ಕೊಡಬೇಕು. ಅಲ್ಲದೆ, ಮಹಿಳೆಯರಿಗೆ ಬರುತ್ತಿರುವ ಗರ್ಭಕೋಶ ಸಂಬಂಧಿತ ಕಾಯಿಲೆಗೆ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಸಿ ಪರಿಹರಿಸಬೇಕು. ಇದಕ್ಕೆ ಕಾರಣ ಕೊರೊನಾ ವ್ಯಾಕ್ಸಿನ್ ಸಮಸ್ಯೆಯಾ ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕು.
  14. ನಮ್ಮ ಪಕ್ಷದ ಡಿಸಿಎಂ ಸದಸ್ಯರಾದ ಕಾಮ್ರೆಡ್ ವಿಕ್ರಮ್ ಗೌಡ ಅವರನ್ನು ನವೆಂಬರ್ 18/2024ರಂದು ಸಂಜೆ 6:30 ಗಂಟೆಯ ಸಮಯದಲ್ಲಿ ಮಬನೆಯವರ ಸಹಾಯದಿಂದ ಮನೆ ಒಳಗೆ ಕೈಗೆಟಕುವ ಅಂತರದಲ್ಲಿ ಎಎನ್‌ಎಫ್‌ ಪಡೆ ಕ್ರೂರವಾಗಿ ಗುಂಡಿನ ಸುರಿಮಳೆಗರೆದು ಹತ್ಯೆಗೈದಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು.
  15. ಮೂರು ರಾಜ್ಯಗಳ ಜೈನಲ್ಲಿರುವ ನಮ್ಮ ಎಲ್ಲ ಕಾಮ್ರೆಡ್‌ಗಳ ಕೇಸುಗಳನ್ನು ಶೀಘ್ರವಾಗಿ ಮುಗಿಸಬೇಕು. ಅವರನ್ನು ಬಿಡುಗಡೆಗೊಳಿಸಬೇಕು.
  16. ಆದಿವಾಸಿ ಮುಗ್ದ ಮಹಿಳೆಯರಾದ ಶೋಭಾ, ಕನ್ಯಾಕುಮಾರಿ, ಸಾವಿತ್ರಿ, ಶ್ರೀಮತಿ ಇವರ ಮೇಲಿನ ಕೇಸುಗಳನ್ನು ಶೀಘ್ರವೇ ಮುಗಿಸಿ ಅವರಿಗೂ ನಕ್ಸಲ್ ಪ್ಯಾಕೇಜಿನಡಿಯಲ್ಲಿ ಪುನರ್‌ವಸತಿ ಮತ್ತು ಸಹಾಯಧನವನ್ನು ಕಲ್ಪಿಸಬೇಕು.
  17. ಆಯಾ ಪ್ರದೇಶಗಳಲ್ಲಿ ಸ್ಥಳೀಯವಾಗಿ ಬೆಳೆಯುತ್ತಿರುವ ಅಕ್ಕಿಯನ್ನು ರೇಷನ್ ಕಾರ್ಡಿನ ಅಕ್ಕಿಯಾಗಿ ವಿತರಿಸಬೇಕು.
  18. ಮುಖ್ಯವಾಹಿನಿಗೆ ಬಂದು 15 ದಿನಗಳೊಳಗೆ ನಮ್ಮ ಎಲ್ಲ ಕಾಮ್ರೇಡ್‌ಗಳ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X