ಬೆಂಗಳೂರು | ನಗರಗಳಲ್ಲಿ ಸಮಾನ ಪಾಲುದಾರಿಕೆ ಕಣ್ಮರೆ : ಬಂಜಗೆರೆ ಜಯಪ್ರಕಾಶ್ 

Date:

Advertisements

 ನಗರಗಳಲ್ಲಿ ಸಮಾನ ಪಾಲುದಾರಿಕೆಯ ಕಣ್ಮರೆ ಮಾಡಿ ನಗರೀಕರಣಕ್ಕೆ ವಿಪುಲವಾದ ಅವಕಾಶ ನೀಡಿ ಒಟ್ಟಾರೆ ಲಾಭಕ್ಕಾಗಿ ಹೆಚ್ಚಿನ ಜನರ ಸಮೂಹಕ್ಕೆ ಮಾರುಕಟ್ಟೆ ವ್ಯವಸ್ಥೆಯ ವಿಸ್ತರಣೆ ಮಾಡಿ ತಮ್ಮ ಉತ್ಪಾದನೆಗೆ ಗ್ರಾಹಕರನ್ನಾಗಿಸುವ ನಾಗರೀಕತೆಯನ್ನು ಪ್ರೋತ್ಸಾಹಿಸುತ್ತದೆ. ಇದಕ್ಕೆ ಹೊಂದಿಕೊಳ್ಳದವರನ್ನು ಅನರ್ಹರೆಂದು ಡಿಸ್‌ಕಾರ್ಡ್ ಮಾಡಲಾಗುತ್ತಿದೆ ಎಂದು ಸಂಸ್ಕೃತಿ ಚಿತಂಕ ಬಂಜಗೆರೆ ಜಯಪ್ರಕಾಶ್  ಅಭಿಪ್ರಾಯಪಟ್ಟರು.

ಬೆಂಗಳೂರಿನ ಗಾಂಧಿ ಭವನದಲ್ಲಿ  ಸ್ಲಂ ಜನಾಂದೋಲನ-ಕರ್ನಾಟಕ ಸಂಘಟನೆಯ 15ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ  ನಡೆದ  ‘ನಗರೀಕರಣದಲ್ಲಿ ಸ್ಲಂ ಜನರು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳ ಕುರಿತು ರಾಜ್ಯಮಟ್ಟದ ದುಂಡು ಮೇಜಿನ ಸಭೆಯನ್ನು’ ಉದ್ಘಾಟಿಸಿ ಮಾತನಾಡಿದ  ಅವರು, ನಗರೀಕರಣ ಕೃಷಿ ಮತ್ತು ಶ್ರಮ ಸಂಸ್ಕೃತಿಯ ಚಟುವಟಿಕೆಗಳನ್ನು ನಾಶ ಮಾಡಿ ದುಡಿಮೆಗೆ ಸಮಾನ ಹಂಚಿಕೆ ನೀಡದೆ ನಗರಗಳ ಮೇಲಿನ ಸಮಾನ ಪಾಲುದಾರಿಕೆಯನ್ನು ತಂತ್ರಜ್ಞಾನ ಇಲ್ಲದಂತಾಗಿಸುತ್ತಿದೆ. ತಂತ್ರಜ್ಞಾನದಿಂದ ಹೆಚ್ಚು ಪ್ರಾಡೆಕ್ಟ್ಗಳ ಉತ್ಪಾದನೆ ಮತ್ತು ಸಂಪನ್ಮೂಲಗಳ ವಿಸ್ತರವಾಗಿರುವ ಕಾರಣ ಪ್ರಾಡೆಕ್ಟ್ಗಳು ಎಕ್ಸ್ಪೈರಿಯಾಗಿ ಚೆಲ್ಲಲ್ಪಡುತ್ತಿವೆ. ಲಾಭಗಳಿಕೆ ತುತ್ತ ತುದಿಯಲ್ಲಿದ್ದು ಸೌಕರ್ಯಗಳು ಉನ್ನತ್ತ ಮಟ್ಟದಲ್ಲಿವೆ, ಆದರೆ ನಗರಗಳಲ್ಲಿ ಬಡಜನರಿಗೆ ಲಭ್ಯತೆಗಳು ಇಲ್ಲದ್ದಂತೆ ಮಾಡಲಾಗಿದೆ. ನಗರಗಳಲ್ಲಿ ಉತ್ಪಾದನೆ ಜಾಸ್ತಿಯಾದಂತೆ ಸ್ಲಂಗಳು ಹೆಚ್ಚಾಗುತ್ತಿವೆ. ನಗರಗಳಲ್ಲಿ ಈಗಾಗಲೇ ಒಳ್ಳೆಯ ಜಾಗಗಳನ್ನು ಶ್ರೀಮಂತರ ಕಂಪನಿಗಳು ಅವಾರಿಸಿವೆ ಸ್ಲಂ ಜನರಿಗೆ ಜೋಗು ಪ್ರದೇಶಗಳನ್ನು ಮಾತ್ರ ನೀಡಲಾಗುತ್ತಿದೆ. ಹಾಗಾಗಿ ಸಂಪತ್ತಿನ ಹಂಚಿಕೆ ವಿಚಾರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ದೀರ್ಫಕಾಲಿಕವಾಗಿ ಆಲೋಚಿಸಿದರೆ ಮಾತ್ರ ಅಸಮಾನತೆ ಅಥವಾ ಅಭಿವೃದ್ಧಿ ತಾರತಮ್ಯ ಸ್ಥಿತ್ಯಾಂತರವಾಗಲು ಸಾಧ್ಯ ಎಂದರು.

1000872618

ವಿಪರಿತವಾದ ಶ್ರಮ ಸಂಸ್ಕೃತಿಯಿಂದ ಜೀವಿತವಾಧಿ ಕುರಿತುಯಾಗಿ ಸ್ಲಂ ನಿವಾಸಿಗಳು ಚಿಕ್ಕವಯಸ್ಸಿಗೆ ಸಾವಿನ ಏಕ್ಸ್ಪೇರಿಗೆ ಸಿಲುಕುತ್ತಿದ್ದಾರೆ. ಜಾಗತೀಕರಣ ಸಾಮ್ರಾಜ್ಯ ಶಾಹಿಯ ಅತೀಯಾದ ಲಾಭ ಮಾಡುವ ದೃಷ್ಟಿಯಿಂದ ಜೀವನಾಧಾರ ಭದ್ರತೆ ಸಂಕುಚಿತಗೊಳ್ಳುತ್ತಿದೆ. ಇದ್ದರಿಂದಾಗಿ ಆರೋಗ್ಯ, ಶಿಕ್ಷಣ, ವಸತಿಗಾಗಿ ಬಡವರ ಜೀವನ ಮುಗಿಯುತ್ತಿದೆ. ಏಕೆಂದರೆ ಹಳ್ಳಿಗಳಿಂದ ಭೂಮಿ ಮಾರಿಕೊಂಡು ಸಾಲದ ಸಂಘಗಳಿಗೆ ಮರುಪಾವತಿ ಮಾಡಲು ಸಾಧ್ಯವಾಗದೇ ಅನಿವಾರ್ಯವಾದ ಒತ್ತಡಕ್ಕೆ ಒಳಗಾಗಿ ಪಟ್ಟಣಗಳಿಗೆ ಅಥವಾ ಬೆಂಗಳೂರಿಗೆ ಬರುವವರು ಸ್ಲಂಗಳಲ್ಲಿ ನೆಲೆಸುತ್ತಾರೆ. ಈ ಜನರು ಹಾಗೆಯೇ ಇರಬೇಕೆಂದೇ ವಿನ್ಯಾಸಗೊಳಿಸಲಾಗಿದೆ. ಏಕೆಂದರೆ ನಗರಗಳ ಆರ್ಥಿಕತೆಯ ಚಲನೆಯೇ ಸ್ಲಂಗಳು. ನಗರಗಳಲ್ಲಿ ಬಡತನವನ್ನು ವಿನ್ಯಾಸಗೊಳ್ಳಿಸಲಾಗಿದೆ. ಇದು ಗೊತ್ತಿಲ್ಲದೆ ಸಂಭವಿಸುವ ಪ್ರಕ್ರಿಯೆಯಲ್ಲಿ. ಬಡವರಿಗೆ ಅಗತ್ಯಕ್ಕಿಂತ ಜಾಸ್ತಿಕೊಟ್ಟರೆ ಸಂಪತ್ತಿನಲ್ಲಿ ಸಮಾನ ಹಂಚಿಕೆ ಕೇಳುತ್ತಾರೆ ಎನ್ನುವುದು ಪ್ರಭುತ್ವದ ಭಯವಾಗಿದೆ ಎಂದರು.

Advertisements

 ಶ್ರಮ ಸಂಸ್ಕೃತಿಯ ಸ್ಲಂ ಶಕ್ತಿಯನ್ನು ವ್ಯವಸ್ಥೆ ಮೇಂಟೇನ್ ಮಾಡಲಿಲ್ಲವೆಂದರೆ ಅಥವಾ ಅವರ ಕೊರತೆಗಳನ್ನು ಕಾಪಾಡದಿದ್ದರೆ ನಗರೀಕರಣದ ಸಿದ್ದಾಂತಕ್ಕೆ ಅಪಾಯ. ಹಾಗಾಗಿ ಶಿಕ್ಷಣ, ಕೆಲಸ, ಕೂಲಿ, ವಸತಿ ಸೌಕರ್ಯಗಳನ್ನು ವಿನ್ಯಾಸಗೊಳಿಸಲಾಗಿದೆ. ಅಂದರೆ ಸ್ಲಂಗಳನ್ನು ಚೀಪ್ ಲೇಬರ್ ಪ್ಯಾಕೇಟ್‌ಗಳಾಗಿ ನಗರೀಕರಣ ನಿರ್ವಹಿಸುತ್ತಿದೆ. ಹಾಗಾಗಿ ಕೆಲವು ಜನರ ಬಿಕ್ಕಟ್ಟಗಳನ್ನು ಪ್ರಭುತ್ವ ಸೃಷ್ಟಿಸಿ ಸ್ಲಂ ನಿವಾಸಿಗಳನ್ನು ಅಸಹಾಯಕವನ್ನಾಗಿಸಿದೆ ಎಂದು ಪ್ರತಿಪಾಧಿಸಿದರು.

ನಗರೀಕರಣದಲ್ಲಿ ಸ್ಲಂ ನಿವಾಸಿಗಳು ಎದುರಿಸುತ್ತಿರುವ ಸವಾಲುಗಳ ಎಂಬ ವಿಷಯ ಕುರಿತು  ಮಾತನಾಡಿದ ರಾಷ್ಟ್ರೀಯ ಕಾನೂನು ಶಾಲೆಯ ಡಾ. ಕ್ಷಿತಿಜ್ ಅರಸ್,  ನೈಸರ್ಗಿಕ ಸಂಪನ್ಮೂಲಗಳನ್ನು ಜನರು ಹಣಕೊಟ್ಟು ಪಡೆಯುವ ಯಾಜಮಾನಿಯನ್ನು ನಾವೇ ಒಪ್ಪಿಕೊಳ್ಳುವಂತೆ ನಗರೀಕರಣ ಪ್ರಕ್ರಿಯೆಯಲ್ಲಿ ಮಾಡಲಾಗಿದೆ. ಇಂದು ಅತೀವೇಗವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ನಗರೀಕರಣ ಬೆಳೆದು ಅಲ್ಲಿನ ಕೃಷಿ ಚಟುವಟಿಕೆಯನ್ನೇ ನಾಶವಾಗಿ ಹವಮಾನ ವೈಪರಿತ್ಯದಿಂದ ಹಾಗೂ ಅತೀಯಾದ ಗ್ರಾಹಕೀಕರಣದಿಂದ ನಗರಗಳಲ್ಲಿ ಜನರು ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದರು.

1000872614

 2050ರ ವೇಳೆಗೆ ಪ್ರಪಂಚದಲ್ಲಿ ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ನಗರೀಕರಣದ ಪ್ರಮಾಣ ಶೇ.80 ಕ್ಕೆ ಮುಟ್ಟಿಸುವ ಗುರಿಯನ್ನು ಅಂತರ್ ರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ. ಭಾರತದಲ್ಲಿ ಸ್ಮಾರ್ಟ್ ಸಿಟಿಗಳ ಮೂಲಕ ಹೊಸ ನಗರೀಕರಣದ ಆಯಾಮಕ್ಕೆ ಸ್ಲಂ ನಿವಾಸಿಗಳನ್ನು ಜಿ+ (ಬಹುಮಡಿಗಳ ನಿರ್ಮಾಣ) ಮಾದರಿಯ ಬದುಕಿಗೆ ಹೋಗ್ಗಿಸಿದೆ. ನಗರಗಳ ಪರಿವರ್ತನೆಯ ಸಂದರ್ಭದಲ್ಲಿ ನಮಗೆ ಹುಸಿ ಭರವಸೆಯನ್ನು ತೋರಿಸಿ ಪರ್ಯಾಯ ಅಲೋಚನೆ ಮಾಡದ್ದಂತೆ ಮಾಡಲಾಗುತ್ತಿದೆ. ಇಂತಹ ಸಂಧಿಘ್ನತೆಯಲ್ಲಿ ನಾವು ಸ್ಲಂ ಆಸ್ಮಿತೆಯನ್ನು ಹೇಗೆ ನೋಡಬೇಕು, ನಗರಗಳು ತಾರತಮ್ಯ ಸೃಷ್ಟಿಸುವ ಸಮಯದಲ್ಲಿ ಘನತೆಯ ಕೆಲಸಗಳನ್ನು ನಾಶ ಮಾಡುವಾಗ, ಪ್ರಭುತ್ವ ಸ್ಲಂಗಳನ್ನು ಅನೈರ್ಮಲ್ಯವೆಂದು ನೋಡುವಾಗ ಸಾಮಾಜಿಕ ನ್ಯಾಯದ ನಮ್ಮ ಹೋರಾಟ ಒಂದು ಹೆಚ್ಚೆಗಿಂತ ಜಿಗಿತವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸ್ಲಂ ನಿವಾಸಿಗಳಿಗೆ ನಗರೀಕರಣದಲ್ಲಿ ಎದುರಾಗಿರುವ ಸವಾಲುಗಳ ಪರಿಹಾರಕ್ಕೆ “ರೈಟ್ ಟು ಸಿಟಿ” ತತ್ವಸಿದ್ದಾಂತವನ್ನು ಸ್ಲಂ ಜನರು ಅನುಸಿಸಬೇಕೆಂದು ಹೈಕೋರ್ಟ್ ವಕೀಲ ವಿನಯ್ ಶ್ರೀವಾಸ್ ಅಭಿಪ್ರಾಯಪಟ್ಟರು. 

 ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ವಹಿಸಿದರು.

 ಸಾವಿತ್ರಿಬಾಯಿ ಮಹಿಳಾ ಸಂಘಟನೆಯ ಸಂಚಾಲಕರಾದ ಚಂದ್ರಮ್ಮ ಗೌರವ ಉಪಸ್ಥಿತಿತರಿದ್ದರು.

 ವಿವಿಧ ಜಿಲ್ಲೆಗಳ ಸಂಘಟನಾ ಕಾರ್ಯಕರ್ತ ಮತ್ತು ರಾಜ್ಯ ಸಮಿತಿ ಪದಾಧಿಕಾರಿಗಳು ಭಾಗಿಯಾಗಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ನಿವೃತ್ತ ಉದ್ಯೋಗಿಗಳಿಂದ ಉಪವಾಸ ಸತ್ಯಾಗ್ರಹ

ಸರಕಾರಿ ಬ್ಯಾಂಕ್ ಪಿಂಚಣಿದಾರಿಗೆ ಮತ್ತು ನಿವೃತ್ತಿ ವೇತನದಾರರಿಗೆ ಪಿಂಚಣಿ ಪರಿಷ್ಕರಣೆ ಮಾಡಬೇಕು...

ದ್ವೇಷ, ಸುಳ್ಳಿನ ವಿರುದ್ಧ ಕಾನೂನು ತರುವುದಕ್ಕೂ ಮುನ್ನ ಸರ್ಕಾರ ಸಮಗ್ರವಾದ ಚರ್ಚೆ ನಡೆಸಲಿ: ಶಿವಸುಂದರ್

ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ದ್ವೇಷ, ಸುಳ್ಳು ಸುದ್ದಿಗಳ ಪ್ರಚಾರದ ವಿರುದ್ಧ ಕಾನೂನು ತರಲು...

ಬೆಂಗಳೂರು | ಉದ್ಧಟತನ ತೋರಿದ ಜಿ. ಪಲ್ಲವಿಯವರ ಆಪ್ತ ಕಾರ್ಯದರ್ಶಿ ವರ್ಗ, ನಮ್ಮ ಹೋರಾಟಕ್ಕೆ ಜಯ: ಲೋಹಿತಾಕ್ಷ ಬಿ ಆರ್

ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ....

ಅನೇಕ ಪ್ರಕರಣಗಳಲ್ಲಿ ಸಾಕ್ಷಿಯಿದ್ದರೂ ತದ್ವಿರುದ್ಧ ತೀರ್ಪು: ಮಾಲೆಗಾಂವ್ ತೀರ್ಪಿಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ

ಅನೇಕ ಪ್ರಕರಣಗಳಲ್ಲಿ ಸಾಕ್ಷಿಗಳಿದ್ದರೂ ಕೂಡ ತದ್ವಿರುದ್ಧವಾಗಿ ತೀರ್ಪು ಪ್ರಕಟವಾಗಿರುವ ಉದಾಹರಣೆಗಳು ಇವೆ....

Download Eedina App Android / iOS

X