ಕೆನಡಾ ಅಧ್ಯಕ್ಷ ಸ್ಥಾನಕ್ಕೆ ಟ್ರುಡೊ ರಾಜೀನಾಮೆ: ಮತ್ತೆ ಶುರು ಟ್ರಂಪ್ ತಿಕ್ಕಲುತನ; ನೆಲದ ದಾಹ

Date:

ಕೆನಡಾ ಅಧ್ಯಕ್ಷ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿರುವ ಎರಡು ವಾರಗಳಲ್ಲೇ ಟ್ರುಡೊ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಟ್ರಂಪ್ ಕೆನಡಾವನ್ನೇ ಅಮೆರಿಕ ಜೊತೆ ಸೇರಿಸಿಕೊಳ್ಳುವ ತನ್ನ ಸಾಮ್ರಾಜ್ಯಶಾಹಿ ವಹಿವಾಟಿಗೆ ಇಳಿದಿದ್ದಾರೆ. ಕೆನಡಾದ ಮೇಲೆ ಆರ್ಥಿಕ ಒತ್ತಡವನ್ನು ಹೇರಿ ಈಗ ತನ್ನ ತಿಕ್ಕಲುತನವನ್ನು ಟ್ರಂಪ್ ಪ್ರದರ್ಶಿಸುತ್ತಿದ್ದಾರೆ.

- Advertisement -

ಡೊನಾಲ್ಡ್ ಟ್ರಂಪ್ ತಾನು ಅಧಿಕಾರವನ್ನು ಸ್ವೀಕರಿಸಿದ ಬಳಿಕ ಕೆನಡಾದ ಮೇಲೆ ಅಧಿಕ ಆಮದು ಸುಂಕವನ್ನು ಹೇರುವ ಬೆದರಿಕೆಯನ್ನು ಹಾಕಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಟ್ರುಡೋ ರಾಜೀನಾಮೆ ನೀಡುತ್ತಿದ್ದಂತೆ ಕೆನಡಾ ಯುಸ್‌ನೊಂದಿಗೆ ವಿಲೀನವಾದರೆ ಸುಂಕದ ಹೊರೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಬಾಲಿಶ ಆಫರ್ ಅನ್ನು ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಟ್ರುಡೋ ರಾಜೀನಾಮೆ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಕೆನಡಾದ ಹಲವು ಮಂದಿ ಯುಎಸ್‌ನ 51ನೇ ರಾಜ್ಯವಾಗುವ ಒಲವು ಹೊಂದಿದ್ದಾರೆ. ಕೆನಡಾ ಯುಎಸ್‌ನೊಂದಿಗೆ ವಿಲೀನವಾಗಬಹುದು. ಹಾಗಾದರೆ ಕೆನಡಾದ ಮೇಲೆ ಯಾವುದೇ ತೆರಿಗೆ, ಸುಂಕ ಇರಲಾರದು. ಅವರು (ಕೆನಡಾ) ರಷ್ಯನ್ನರ ಮತ್ತು ಚೀನೀಯರ ಉಪಟಳದಿಂದ ತಪ್ಪಿಸಿಕೊಳ್ಳಬಹುದು. ಜೊತೆಯಾಗಿ ನಮ್ಮದು ಉತ್ತಮ ದೇಶವಾಗಲಿದೆ” ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಕೆನಡಾಗೆ ಸುಂಕದ ಬೆದರಿಕೆ ಹಾಕುತ್ತಿದ್ದಾರೆ.

ಇದನ್ನು ಓದಿದ್ದೀರಾ? ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಭಾರೀ ಪರಿಣಾಮ: ಹಮಾಸ್‌ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಇನ್ನು ಕೆನಡಾ ಯುಎಸ್‌ನ ಭಾಗವಾಗಬೇಕು ಎಂದು ಟ್ರಂಪ್ ಹೇಳಿರುವುದೇ ಇದೇ ಮೊದಲೇನಲ್ಲ. ಟ್ರುಡೊ ಜೊತೆ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ನಡೆದ ಸಭೆಯ ಸಂದರ್ಭದಲ್ಲಿ, “ಯುಎಸ್‌ನ ಸುಂಕದಿಂದಾಗಿ ಕೆನಡಾದ ಆರ್ಥಿಕತೆ ಕುಸಿಯುವುದಾದರೆ ಯುಎಸ್‌ನೊಂದಿಗೆ ಕೆನಡಾವನ್ನು ವಿನೀನಗೊಳಿಸಬಹುದು” ಎಂದು ಟ್ರಂಪ್ ಹೇಳಿಕೊಂಡಿದ್ದರು.

ಟ್ರುಡೊ ಪಕ್ಷದ ಆಂತರಿಕ ವಿಭಜನೆಯ ನಡುವೆ ಒಂದು ದಶಕದ ಅಧಿಕಾರದ ನಂತರ ತನ್ನ ಅಧಿಕಾರವನ್ನು ತೊರೆದಿದ್ದಾರೆ. ಲಿಬರಲ್ ಪಕ್ಷವು ಹೊಸ ನಾಯಕತ್ವವನ್ನು ಆಯ್ಕೆ ಮಾಡಿದ ನಂತರ ಪಕ್ಷದಲ್ಲಿರುವ ತನ್ನ ನಾಯಕತ್ವದಿಂದ ಕೆಳಗಿಳಿಯುವುದಾಗಿಯೂ ಹೇಳಿದ್ದಾರೆ. ಹೊಸ ನಾಯಕತ್ವ ಬರುವವರೆಗೂ ಟ್ರುಡೊ ಹಂಗಾಮಿ ಪ್ರಧಾನಿಯಾಗಿರಲಿದ್ದಾರೆ.

ಡೊನಾಲ್ಡ್

ಸದ್ಯ ಕೆನಡಾ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಹೆಚ್ಚಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಮೆಲಾನಿ ಜೋಲಿ ಮತ್ತು ಹಣಕಾಸು ಸಚಿವ ಡೊಮಿನಿಕ್ ಲೆಬ್ಲಾಂಕ್ ಸೇರಿದಂತೆ ಹಲವು ನಾಯಕರು ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ.

ಇದನ್ನು ಓದಿದ್ದೀರಾ? ಡಾಲರ್ ಎದುರು ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಇಬ್ಬರೂ ಕೂಡಾ ಡಿಸೆಂಬರ್ ಅಂತ್ಯದಲ್ಲಿ ಟ್ರಂಪ್‌ ಅವರ ಮಾರ್-ಎ-ಲಾಗೊ ರೆಸಾರ್ಟ್‌ಗೆ ಪ್ರಯಾಣಿಸಿದ್ದು ಒಟ್ಟಾವಾದ ಯೋಜನೆಯ ಬಗ್ಗೆ ಅವರಿಗೆ ತಿಳಿಸಿದ್ದರು. ಈ ವೇಳೆ ಟ್ರಂಪ್ ಮತ್ತು ಅವರ ನಡುವೆ ಸುಂಕದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಏನೇ ಆದರೂ ಟ್ರಂಪ್ ಸುಂಕ ಹೆಚ್ಚಳದ ಬೆದರಿಕೆಯನ್ನು ಹಾಕಿ ಒಂದು ದೇಶವನ್ನೇ ಯುಎಸ್‌ಗೆ ಸೇರಿಸುವ ಕೀಳು ರಾಜಕಾರಣ ನಡೆಸುತ್ತಿರುವುದು ಖಂಡನೀಯ.

ಟ್ರಂಪ್ ಹುಚ್ಚಾಟಕ್ಕೆ ಕೊನೆಯಿಲ್ಲ

ಇನ್ನು ಟ್ರಂಪ್ ತನ್ನನ್ನು ತಾನು ಹುಚ್ಚಾಟದ ಅಧ್ಯಕ್ಷನಾಗಿಯೇ ಜನರ ಮುಂದೆ ಪ್ರಚಾರ ಮಾಡುತ್ತಾ ಅಧ್ಯಕ್ಷಗಾದಿಯನ್ನು ಏರಿದವರು. 2016ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗಲೂ ತನ್ನ ಪ್ರಚಾರದಲ್ಲಿ ತಾನೊಬ್ಬ ಹಠವಾದಿ ಎಂಬಂತೆ ಬಿಂಬಿಸಿಕೊಂಡವರು. ಅದಾದ ಬಳಿಕ ತನ್ನ ತಿಕ್ಕಲುತನವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಾ ಬಂದವರು ಡೊನಾಲ್ಡ್ ಟ್ರಂಪ್. ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೂ ಹೆಚ್ಚಾಗಿ ಸುದ್ದಿಯಾಗಿರುವ ಟ್ರಂಪ್ ಯುಎಸ್‌ ಹೊರತುಪಡಿಸಿ ಉಳಿದ ದೇಶಗಳನ್ನು ಕೀಳಾಗಿ ಕಾಣುವ ಹೇಳಿಕೆಗಳನ್ನು ನೀಡಿ ಚರ್ಚೆಗೆ ಗ್ರಾಸರಾದವರು.

ಯುಎಸ್‌ನ ಸಾಮ್ರಾಜ್ಯಶಾಹಿ ಧೋರಣೆ

ವಿಶ್ವದ ದೊಡ್ಡಣ್ಣ ಇತರೆ ದೇಶಗಳ ಮೇಲೆ ತನ್ನ ಹಿಡಿತವನ್ನು ಕಾಪಾಡಿಕೊಳ್ಳಲು ಇದೇ ಮೊದಲು ಪ್ರಯತ್ನಿಸುತ್ತಿರುವುದಲ್ಲ. ಈ ಹಿಂದೆಯೂ ಹಲವು ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಯತ್ನ ಅಮೆರಿಕ ಮಾಡಿದೆ. ಅಮೆರಿಕದ ಸಾಮ್ರಾಜ್ಯಶಾಹಿ ದಾಹಕ್ಕೆ ಹಲವು ಪುಟ್ಟ ದೇಶಗಳು ಬಲಿಯಾಗಿವೆ. ಯುದ್ಧ ಪಿಪಾಸು, ರಕ್ತದಾಹಕ್ಕೆ ಸಿಲುಕಿ ನಲುಗಿದ ರಾಷ್ಟ್ರಗಳಿಗಿಲ್ಲ ಲೆಕ್ಕ.

ಯುಎಸ್‌ನ ಸಾಮ್ರಾಜ್ಯಶಾಹಿ ಧೋರಣೆಯಿಂದಾಗಿ ಅದೆಷ್ಟೋ ಬಾರಿ ಯುದ್ಧ ಘೋಷಣೆ ಮಾಡಿದೆ. ಮೆಕ್ಸಿಕೋ, ಸ್ಪೇನ್, ಗ್ರೇಟ್ ಬ್ರಿಟನ್, ಜರ್ಮನಿ, ಆಸ್ಟ್ರಿಯಾ, ಹಂಗೇರಿ, ಇಟಲಿ, ಜಪಾನ್, ಬಲ್ಗೇರಿಯಾ, ರೋಮಾನಿಯಾ – ಹೀಗೆ ಹಲವು ದೇಶಗಳು ಯುಎಸ್‌ ದಾಳಿಗೆ ನಲುಗಿದೆ. ಕೆಲವು ದೇಶ ಮತ್ತೆ ಅಭಿವೃದ್ಧಿಯಾಗಿ ಪುಟ್ಟಿದೆದ್ದರೆ, ಇನ್ನು ಅವೆಷ್ಟೋ ದೇಶಗಳು ದೊಡ್ಡಣ್ಣನ ಬೂಟಿನಡಿ ಸಿಲುಕಿ ತತ್ತರಿಸುತ್ತಿವೆ. ಆದರೂ ಭೂಮಿಯ ದಾಹ ದೊಡ್ಡಣ್ಣನಿಗೆ ಬಿಟ್ಟಿಲ್ಲ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...

ಹಾರ್ಮುಜ್ ಜಲಸಂಧಿಯಲ್ಲಿ ಕುವೈತ್ ಹಡಗಿನ ಮೇಲೆ ದಾಳಿ: ಐವರು ಭಾರತೀಯರ ರಕ್ಷಣೆ

ಹಾರ್ಮುಜ್ ಜಲಸಂಧಿಯಲ್ಲಿ ಕುವೈತ್ ಧ್ವಜವಿದ್ದ ತೈಲ ಹಡಗಿನ ಮೇಲೆ ಸ್ಫೋಟಕ ವಸ್ತುವಿನಿಂದ...