ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿರುದ್ಧ ಭಾರತ ತಂಡದ ಮಾಜಿ ಕೋಚ್ ಹಾಗೂ ರವಿ ಶಾಸ್ತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಸಿಸಿ ಪರಿಶೀಲನಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, “ಅವರಿಗೆ ಟೆಸ್ಟ್‌ನಲ್ಲಿ ಹೆಚ್ಚು ಅಂತರವಿದ್ದರೆ ಅವರು ದೇಶೀಯ ಕ್ರಿಕೆಟ್‌ಗೆ ಹಿಂತಿರುಗಿ ಅಲ್ಲಿ ಕೆಲವು ಪಂದ್ಯಗಳನ್ನು ಆಡಬೇಕು. ನೀವು ಹೆಚ್ಚು ಸಮಯವಿರುವ ಟೆಸ್ಟ್ ಕ್ರಿಕೆಟ್ ಆಡುವಾಗ ಎರಡು ಕಾರಣಗಳಿಗೆ ದೇಶೀಯ ಕ್ರಿಕೆಟ್ ಮುಖ್ಯವಾಗುತ್ತದೆ. ನೀವು ಇಂದಿನ ಪೀಳಿಗೆಯ ಆಟಗಾರರ ಜೊತೆ ಇರುತ್ತೀರಿ. ನಿಮ್ಮ ಅನುಭವದೊಂದಿಗೆ ಕಿರಿಯರಿಗೆ ಮಾರ್ಗದರ್ಶನ ನೀಡಲು ಅನುಕೂಲವಾಗುತ್ತದೆ” ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನು ಟೀಂ ಇಂಡಿಯಾ ಸೋತಾದ ಹಲವು ಹಿರಿಯ ಆಟಗಾರರ ವಿರುದ್ದ ಟೀಕೆಗಳು ವ್ಯಕ್ತವಾದವು. ಈ ಸರಣಿಯಲ್ಲಿ ಕೊಹ್ಲಿ 5 ಟೆಸ್ಟ್‌ಗಳಲ್ಲಿ 190 ರನ್ ಮಾತ್ರ ಪೇರಿಸಿದ್ದರೆ, ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಸರಾಸರಿ 6.2 ಮಾತ್ರ ಇತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ
“ಎದುರಾಳಿ ತಂಡದಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳಿದ್ದರೆ, ಅವರು ಬ್ಯಾಟರ್‌ಗಳಿಗೆ ತೊಂದರೆ ನೀಡುತ್ತಾರೆ. ಹಾಗೆಯೇ ಟಿಂ ಇಂಡಿಯಾಗೂ ಮಾರಕವಾಗಿ ಪರಿಣಮಿಸುತ್ತಾರೆ. ಇಬ್ಬರು ಆಟಗಾರರಿಗೆ ರನ್‌ಗಳ ಬರ ಎಷ್ಟಿದೆಯೆಂದು ತಿಳಿಯುತ್ತದೆ. ಒಬ್ಬರಿಗೆ 36 ವರ್ಷವಾಗಿದ್ದರೆ, ಮತ್ತೊಬ್ಬರಿಗೆ 38 ವರ್ಷವಾಗಿದೆ. ನೀವು ತೆಂಡೂಲ್ಕರ್ ಅವರ ಕೊನೆಯ ಆಟದ ವರ್ಷಗಳನ್ನು ಗಮನಿಸಿ, ಅವರು ಉತ್ತಮ ಆಟವಾಡದಿದ್ದರೂ ಮುಂದಿನ ಪೀಳಿಗೆಯ ಆಟಗಾರರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು” ಎಂದು ರವಿಶಾಸ್ತ್ರಿ ಹೇಳಿದ್ದಾರೆ.
“ವಿರಾಟ್ ಕೊಹ್ಲಿ ಅವರಂತಹ ಹಿರಿಯರಿಂದ ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ರಿಷಭ್ ಪಂತ್‌ರಂಥ ಕಿರಿಯರು ಮಾರ್ಗದರ್ಶನ ಪಡೆಯಬೇಕಿದೆ. ಈ ಇಬ್ಬರು ಆಟಗಾರರು ಕಿರಿಯರಿಗೆ ತಮ್ಮ ವೃತ್ತಿ ಜೀವನದ ಅನುಭವವನ್ನು ಧಾರೆ ಎರೆಯಬೇಕಿದೆ” ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.
