ಗುಬ್ಬಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಜ.10 ರಂದು ವೈಭವದ ವೈಕುಂಠ ಏಕಾದಶಿ ಮಹೋತ್ಸವ ನಡೆಯಲಿದೆ.
ಪುಷ್ಯಮಾಸದಲ್ಲಿ ಬರುವ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಯವರಿಗೆ ವಿಶೇಷ ಅಲಂಕಾರ, ಬೆಳಿಗ್ಗೆ ಸುಪ್ರಭಾತ ಸೇವೆಯ ಜೊತೆಗೆ ವಿಶ್ವರೂಪ ದರ್ಶನ, ವೈಕುಂಠ ದ್ವಾರ ಪ್ರವೇಶ, ಮಹಾಮಂಗಳಾರತಿ ಹಾಗೂ ನಿರಂತರ ಪ್ರಸಾದ ವಿನಿಯೋಗ ನಡೆಯಲಿದೆ.
ಭಕ್ತರ ಸೇವಾ ಕಾರ್ಯದಲ್ಲಿ ನಡೆಯುವ ಏಕಾದಶಿ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ತಾಲ್ಲೂಕಿನ ವಿವಿಧ ಭಾಗದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬೆಳಿಗ್ಗೆ 7 ಗಂಟೆಯಿಂದ ವೈಕುಂಠ ದ್ವಾರ ದರ್ಶನ ನಡೆದು ರಾತ್ರಿ 8 ಗಂಟೆಗೆ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.