ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಸಾಮಾಜಿಕ ಮೌಲ್ಯಗಳನ್ನು ವಿಶ್ವದಲ್ಲೆಡೆ ಪಸರಿಸುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ʼಬಸವ ಉತ್ಸವʼ ಆಚರಣೆಗೆ ಮುಂದಾಗಬೇಕು ಬಸವಕಲ್ಯಾಣ ಬಸವತತ್ವ ಪ್ರಸಾರ ಕೇಂದ್ರದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಗುರುವಾರ ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬಸವಕಲ್ಯಾಣ ಸಹಾಯಕ ಆಯುಕ್ತ ಹಾಗೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಆಯುಕ್ತರಾದ ಜಗನಾಥ ರೆಡ್ಡಿ ಅವರಿಗೆ ಸಲ್ಲಿಸಿದರು.
ʼರಾಜ್ಯ ಸರಕಾರದಿಂದ ʼನವರಸೋತ್ಸವ, ಆನೆಗುಂದಿ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ, ಜಲಪಾತೋತ್ಸವ, ಜನಪದೋತ್ಸವ, ಕನ್ನಡ ಸಾಹಿತ್ಯೋತ್ಸವ, ಕನಕೋತ್ಸವ, ಕದಂಬೋತ್ಸವ, ಬನಶಂಕರಿ ಉತ್ಸವ, ಕಿತ್ತೂರು ಉತ್ಸವ, ರಾಷ್ಟ್ರಕೂಟ ಉತ್ಸವ, ಬೀದರ ಉತ್ಸವ ಮುಂತಾದ ಆಚರಿಸಲಾಗುತ್ತಿದೆ. ಆದರೆ ಬಸವಾದಿ ಶರಣರ ಕಾಯಕ ಚಳವಳಿ, ಅನುಭವ ಮಂಟಪ ಪರಿಕಲ್ಪನೆ ಸೇರಿದಂತೆ ಶರಣರ ವೈಶಿಷ್ಟತೆ ಇಡೀ ಜಗತ್ತಿಗೆ ಮಾದರಿಯಾಗಿದ್ದರೂ ರಾಜ್ಯ ಸರ್ಕಾರ ಬಸವ ಉತ್ಸವ ಆಚರಣೆಗೆ ಮುಂದಾಗುತ್ತಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದರು.
ʼಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿದ್ದ ʼಬಸವ ಉತ್ಸವʼ ಪ್ರತಿವರ್ಷ ಆಚರಿಸಿದರೆ ಸಕಲ ಜೀವಾತ್ಮರಿಗೆ ಲೇಸು ಬಯಸಿದ ಬಸವಾದಿ ಶರಣರ ಜೀವನ-ಹೋರಾಟ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬಲ್ಲದು. ಹೀಗಾಗಿ ಪ್ರಸಕ್ತ ವರ್ಷದಿಂದ ಸರ್ಕಾರ ಬಸವ ಉತ್ಸವ ಆಚರಣೆಗೆ ಮುಂದಾಗಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಬಂದ್ ಯಶಸ್ವಿ | ಅಮಿತ್ ಶಾ ರಾಜೀನಾಮೆ ನೀಡದಿದ್ದರೆ ‘ಚಲೋ ಪಾರ್ಲಿಮೆಂಟ್’ ಎಚ್ಚರಿಕೆ
ಈ ಸಂದರ್ಭದಲ್ಲಿ ಪ್ರಮುಖರಾದ ಜಯಪ್ರಕಾಶ ಸದಾನಂದೆ, ಮಹಾದೇವಪ್ಪಾ ಇಜಾರೆ, ಗಣಪತಿ ಕಾಸ್ತೆ, ಶಂಕರ ಕರುಣೆ, ಲಕ್ಷ್ಮೀಬಾಯಿ ಹೂಗಾರ, ವಿಜಯಲಕ್ಷ್ಮಿ ಗಡ್ಡೆ, ಸುಮಿತ್ರಾ ದಾವಣಗಾಂವೆ, ಸಂಗೀತಾ ಅಂಬಣ್ಣಾ, ಜಗನ್ನಾಥ ಕುಸನೂರೆ, ಈಶ್ವರ ಶೀಲವಂತ, ರವೀಂದ್ರ ಕೋಳಕುರ, ಶಿವಕುಮಾರ ಬಿರಾದಾರ, ಸಂಗಮೇಶ ತೊಗರಖೇಡೆ, ಚಂದ್ರಪ್ಪಾ ಗುಂಗೆ, ಬಸವರಾಜ ನರಶೆಟ್ಟಿ, ಚನ್ನಪ್ಪಾ ಇಜಾರೆ, ರಾಜಶೇಖರ ಬಿರಾದರ, ಶಾಮರಾವ ಪಂಡರಗೆರೆ ಮತ್ತಿತರಿದ್ದರು.