ಪೆಟ್ರೋಲ್ ಬಂಕ್‌ನಲ್ಲಿ ತನ್ನದೇ ಕ್ಯೂಆರ್ ಕೋಡ್ ಇಟ್ಟು ಮಾಲೀಕರಿಗೆ ವಂಚಿಸುತ್ತಿದ್ದ ಖತರ್ನಾಕ್ ಸಿಬ್ಬಂದಿಯೊಬ್ಬ ಸಿಕ್ಕಿಬಿದ್ದಿದ್ದು, ಮಂಗಳೂರು ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಮಾಲೀಕರ ದೂರಿನ ಮೇರೆಗೆ ಆತನ ಬಂಧನವಾಗಿದೆ.
ಬಂಗ್ರಕುಳೂರು ಬಳಿಯ ರಿಲಯನ್ಸ್ ಔಟ್‌ಲೆಟ್‌ನಲ್ಲಿ 15 ವರ್ಷಗಳಿಂದ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ಬಜ್ಪೆ ನಿವಾಸಿ ಮೋಹನದಾಸ್ ಬಂಧಿತ ಆರೋಪಿ. ಈತ 2 ವರ್ಷಗಳಿಂದ ಕ್ಯೂಆರ್ ಕೋಡ್ ಬದಲಿಸಿದ್ದ. ಪರಿಣಾಮ ಗ್ರಾಹಕರ ಪಾವತಿ ಹಣವೆಲ್ಲಾ ಆತನ ಖಾತೆಗೆ ಜಮೆಯಾಗುತ್ತಿತ್ತು.
ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ; ಸಮಸ್ಯೆ ಹೇಳಿಕೊಳ್ಳಿ
2020ರ ಮಾರ್ಚ್ 10ರಿಂದ 2022ರ ಜುಲೈ 31ರವರೆಗೆ ಸುಮಾರು ₹58 ಲಕ್ಷ ರೂಪಾಯಿ ವಂಚಿಸಿದ್ದಾನೆಂದು ಮ್ಯಾನೇಜರ್ ಸಂತೋಷ್ ಮ್ಯಾಥ್ಯೂ, ಮಂಗಳೂರಿನ ಸೈಬರ್ ಕ್ರೈಂ ಮತ್ತು ಎಕನಾಮಿಕ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
