ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗಾಂಗ ದಾನ ಮಾಡಿದ್ದು, ಸಾವಿನ ನೋವಿನಲ್ಲೂ ಕುಟುಂಬವೊಂದು ಸಾರ್ಥಕತೆ ಮೆರೆದಿದೆ. ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆ 176 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯ ಅಂಗಾಂಗ ದಾನ ಪ್ರಕ್ರಿಯೆ ಮಾಡಿ ಇತಿಹಾಸ ನಿರ್ಮಿಸಿದೆ.
ಮಹಿಳೆಯ ಎರಡು ಕಣ್ಣುಗಳನ್ನು ಕೆಎಂಸಿ ಆಸ್ಪತ್ರೆಗೆ ಹಾಗೂ ಪಿತ್ತಜನಕಾಂಗ(ಲಿವರ್)ವನ್ನು ಮೈಸೂರಿನ ಆಸ್ಪತ್ರೆಯೊಂದಕ್ಕೆ ರವಾನೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಪೆಟ್ರೋಲ್ ಬಂಕ್‌ನಲ್ಲಿ ಕ್ಯೂಆರ್ ಕೋಡ್ ಬದಲಿಸಿ ಮಾಲೀಕರಿಗೆ ವಂಚನೆ; ಕೊನೆಗೂ ಸಿಕ್ಕಿಬಿದ್ದ ಕಿಲಾಡಿ!

ಶಿವಮೊಗ್ಗದ ರಾಗಿಗುಡ್ಡೆಯ ರೇಖಾ(41) ಎಂಬುವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದರು. ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿದುಬಂದಿತ್ತು.
