ಶಾಸಕ ಅಶೋಕ ಪಟ್ಟಣ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಶಾಲಾ ಮಕ್ಕಳು, ಪಂಚಾಯತಿ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಬ್ಯಾಗ್ ಮೇಲಿದ್ದ ಶಾಸಕರ ಪೋಟೊವನ್ನು ಕೆಲವು ಶಿಕ್ಷಕರು ಕಿತ್ತುಹಾಕಿದ್ದರು. ಈ ವಿಷಯವಾಗಿ ಶಾಸಕ ಅಶೋಕ ಪಟ್ಟಣ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಶಂಕರಪ್ಪ ಈರಪ್ಪ ಆದರಗಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದಲ್ಲಿ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾರಂಭದಲ್ಲಿ ಶಿಕ್ಷಕ ಸಿಬ್ಬಂದಿಯೊಬ್ಬರು ಮಾತನಾಡಿ, ಈ ಹಿಂದಿನ ಅಧಿಕಾರಾವಧಿಯಲ್ಲಿ ಶಾಸಕರು ಒಂದೊಳ್ಳೆ ಉದ್ದೇಶದ ಮೂಲಕ ಎಲ್ಲ ಶಿಕ್ಷಕರಿಗೂ ಬ್ಯಾಗ್ ನೀಡಿದ್ದರು. ಅದರಲ್ಲಿ ಕೆಲವು ಶಿಕ್ಷಕರು ಬ್ಯಾಗ್’ನ ಮೇಲಿದ್ದ ಶಾಸಕರ ಫೋಟೊ ಕಿತ್ತು ಹಾಕಿದ್ದಾರೆ. ನಾನಿನ್ನೂ ಸಹಿತ ಉಳಿಸಿಕೊಂಡಿದ್ದೆನೆ. ಏಕೆಂದರೆ ಅದು ನನ್ನ ಜೀವವನ್ನು ಕಾಪಾಡಿತು ಎಂದು ಘಟನೆಯೊಂದನ್ನು ನೆನಪಿಸಿಕೊಂಡರು.
ನಂತರ ಶಾಸಕ ಅಶೋಕ ಪಟ್ಟಣ ಮಾತನಾಡಿ, ಒಳ್ಳೆಯ ಉದ್ದೇಶದಿಂದ ನಾನು ಬ್ಯಾಗ್ ನೀಡಿದ್ದೆ. ಅದರ ಮೆಲಿದ್ದ ನನ್ನ ಪೋಟೊ ಕಿತ್ತು ಹಾಕಿದವರು ಎಷ್ಟರ ಮಟ್ಟಿಗೆ ದ್ವೇಷ ಕಾರಿರಬಹುದು! ಎಂಬುದು ಗೊತ್ತಾಗುತ್ತದೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಶಿಕ್ಷಕರಿಗೂ ಬ್ಯಾಗ್ ನೀಡಿದ್ದೆ. ಕೆಲವರು ನನ್ನ ಪೋಟೊ ಕಿತ್ತು ಹಾಕಿದ್ದಾರೆ, ಪೋಟೊ ಕಿತ್ತು ಹಾಕಿದವರ ನಡೆ ಯಾವ ರೀತಿ ಇರಬಹುದು! ಅದೇ ಅವಧಿಯಲ್ಲಿ ಶಾಲಾ ಮಕ್ಕಳಿಗೂ ಬ್ಯಾಗ್ ಕೊಟ್ಟಿದ್ದೇನೆ. ಮಕ್ಕಳು ಕಿತ್ತು ಹಾಕಿಲ್ಲ. ಈ ವಿಚಾರದಲ್ಲಿ ಮಕ್ಕಳನ್ನು ನೋಡಿ ಶಿಕ್ಷಕರು ಕಲಿತುಕೊಳ್ಳಬೇಕು. ಯಾವ ಶಿಕ್ಷಕರು ನನ್ನ ಪೋಟೊ ಕಿತ್ತು ಹಾಕಿದ್ದಿರೊ ಅವರು ದಯವಿಟ್ಟು ನನ್ನ ಬ್ಯಾಗ್ ವಾಪಸ್ ತಂದು ಕೊಟ್ಟುಬಿಡಿ. ಅದನ್ನು ಮಕ್ಕಳಿಗಾದರೂ ಕೊಡುತ್ತೇನೆ ಎಂದು ಬೇಸರಪಟ್ಟರು.
ಈ ವರದಿ ಓದಿದ್ದೀರಾ? ಧಾರವಾಡ | ಆಸ್ತಿಗಾಗಿ ತಂದೆ, ತಾಯಿಯನ್ನು ಕೊಂದ ಮಗ; ಬೆಚ್ಚಿಬಿದ್ದ ಜನ
ಈ ಸಮಾರಂಭದಲ್ಲಿ ಸಾಲಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಿಕೆಪಿಎಸ್ ಅಧ್ಯಕ್ಷ, ಸದಸ್ಯರು, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಕ ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.