ಕೊಪ್ಪಳ ಜಿಲ್ಲೆಯ ಗಂಗಾವತಿ ಸೇಂಟ್ ಪಾಲ್ಸ್ ಸಂಸ್ಥಯಿಂದ ಜನವರಿ 12ರಂದು ʼಕೃಷಿ ಹಬ್ಬ-2025ʼ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಮಾರಂಭದಲ್ಲಿ ರೈತ ಬಾಂಧವರೇ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಗರದ ಸೇಂಟ್ ಪಾಲ್ಸ್ ಮಹಿಳಾ ಸಂಸ್ಥೆ, ಸೇಂಟ್ ಪಾಲ್ಸ್ ಆಂಗ್ಲ ಭಾಷೆ ಶಾಲೆ, ಸೇಂಟ್ ಪಾಲ್ಸ್ ಡಿಫಾರ್ಮಸಿ ಕಾಲೇಜ್, ಕಾರುಣ್ಯ ಪಿಯು ಕಾಲೇಜ್, ಸೇಂಟ್ ಪಾಲ್ಸ್ ಪ್ಯಾರಾಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಸ್ತುತ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಯುವಜನರಿಗೆ ಕೃಷಿ ಆಸಕ್ತಿ ಕಡಿಮೆಯಾಗುತ್ತಿದೆ. ಶಿಕ್ಷಣದಲ್ಲಿ ಕೃಷಿಯ ವಿಷಯ ಕುರಿತು ಪಠ್ಯಗಳು ಬರಬೇಕು. ಕಲಿಯುವ ಮಕ್ಕಳಲ್ಲಿ ಕೃಷಿ ಮಣ್ಣಿನ ಫಲವತ್ತತೆ, ಬಿತ್ತನೆ, ಒಕ್ಕಲುಗೊಳ್ಳುವ ಪದ್ದತಿ, ಹೈನುಗಾರಿಕೆ ಹೀಗೆ ಹಲವಾರು ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಿ ಅದರ ಕುರಿತು ಅರಿವು ಮೂಡಿಸಬೇಕು. ಆ ನಿಟ್ಟಿನಲ್ಲಿ ʼಕೃಷಿ ಸಂತೆʼ ಎಂಬ ವಿನೂತನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ‘ನಿರ್ಮಲ ತುಂಗಭದ್ರಾ ಜಲಜಾಗೃತಿ ಅಭಿಯಾನ’ ಪಾದಯಾತ್ರೆಯಲ್ಲಿ ಶಾಲಾ ಮಕ್ಕಳ ಬಳಕೆ; ಸಾರ್ವಜನಿಕರ ಆಕ್ರೋಶ
“ಕೃಷಿ ಸಂತೆಯಲ್ಲಿ ರೈತರು ಉಪಯೋಗಿಸುವ ವಸ್ತುಗಳು, ತಂತ್ರಜ್ಞಾನಗಳ ಪ್ರದರ್ಶನ ನಡೆಯಲಿದೆ. ಸಂಜೆ ವೇಳೆಗೆ ವಿದ್ಯಾರ್ಥಿಗಳಿಂದ ಕೃಷಿ ವೇಷ ಭೂಷಣ ಕಾರ್ಯಕ್ರಮ ಜರುಗಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ನಡೆಯುತ್ತದೆ” ಎಂದು ಸೇಂಟ್ ಪಾಲ್ಸ್ ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸ್ತ್ರದ್ ತಿಳಿಸಿದ್ದಾರೆ.
