ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ತಂಡಕ್ಕೆ ಅಡ್ಡಿಯಾಗಲು ಬಯಸುವುದಿಲ್ಲ ಎಂದು ತಮೀಮ್ ಹೇಳಿದ್ದಾರೆ.
2007ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಅಂತಾರಾಷ್ಟ್ರೀಯ (ಒಡಿಐ) ಮೂಲಕ ತಮೀಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈವರೆಗೆ 243 ಒಡಿಐಗಳು, 70 ಟೆಸ್ಟ್‌ಗಳು ಮತ್ತು 78 ಟ್ವೆಂಟಿ-20 ಅಂತಾರಾಷ್ಟ್ರೀಯ (ಟಿ20ಐ) ಕ್ರಿಕೆಟ್ ಅನ್ನು ಆಡಿದ್ದಾರೆ.
ಇದನ್ನು ಓದಿದ್ದೀರಾ? ಕ್ರಿಕೆಟ್ | ಟೀಂ ಇಂಡಿಯಾ ನಿದ್ದೆಗೆಡಿಸಿದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್!
2023ರಲ್ಲಿ ಭಾರತದಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ಗೆ ಕೆಲವು ತಿಂಗಳುಗಳ ಮುನ್ನವೇ ತಮೀಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಒಂದೇ ದಿನದಲ್ಲಿ ತನ್ನ ನಿರ್ಧಾರವನ್ನು ಹಿಂಪಡೆದಿದ್ದರು. ಬಳಿಕ ಬೆನ್ನು ನೋವು ಕಾಣಸಿಕೊಂಡ ಕಾರಣ ವಿಶ್ವಕಪ್‌ನಲ್ಲಿ ಆಡಿಲ್ಲ.
Tamim Iqbal Confirms Retirement from International Cricket Once Again.
— Cricket Pulse 🇬🇧 – Cricket Beyond Boundaries 🏏 (@MSohailAfzal10) January 11, 2025
Tamim Iqbal has expressed his gratitude towards the captain and selectors for considering him for the upcoming Champions Trophy.
However, the veteran cricketer has reaffirmed that his journey in the… pic.twitter.com/Ua4M0Ud9RU
35 ವರ್ಷದ ತಮೀಮ್ ಈವರೆಗೆ 15,000ಕ್ಕೂ ಹೆಚ್ಚು ರನ್‌ಗಳನ್ನು ಪೇರಿಸಿದ್ದಾರೆ. 25 ಶತಕಗಳನ್ನು ಬಾರಿಸಿದ್ದು, ಬಾಂಗ್ಲಾದೇಶದ ಇತರೆ ದಾಂಡಿಗರಿಗಿಂತ ಅತೀ ಹೆಚ್ಚು ಶತಕ ಬಾರಿಸಿದವರೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಕೊನೆಯ ಬಾರಿಗೆ 2023ರ ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ 2-0 ಏಕದಿನ ಸರಣಿಯಲ್ಲಿ ಬಾಂಗ್ಲಾದೇಶದ ಪರವಾಗಿ ಆಡಿದ್ದರು. ಇದರಲ್ಲಿ ಬಾಂಗ್ಲಾ ಸೋಲು ಕಂಡಿತ್ತು.
“ನಾನು ಬಹಳ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದೇನೆ. ಆ ಅಂತರ ಉಳಿಯುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನ ಅಧ್ಯಾಯ ಮುಗಿದಿದೆ” ಎಂದು ತಮೀಮ್ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಹೋಗಿ ರಣಜಿ ಕ್ರಿಕೆಟ್ ಆಡಿ: ವಿರಾಟ್, ರೋಹಿತ್ ವಿರುದ್ಧ ರವಿ ಶಾಸ್ತ್ರಿ ಕಿಡಿ
“ನಾನು ನಿವೃತ್ತಿ ಘೋಷಿಸುವ ಬಗ್ಗೆ ಬಹಳ ಸಮಯದಿಂದ ಯೋಚಿಸುತ್ತಿದ್ದೇನೆ. ಈಗ ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಪಂದ್ಯ ಬರುವುದರಿಂದ ನಾನು ಕೇಂದ್ರಬಿಂದುವಾಗಿರಲು ಬಯಸಲ್ಲ. ಇದು ತಂಡವು ತನ್ನ ಗಮನವನ್ನು ಕಳೆದುಕೊಳ್ಳಲು ಕಾರಣವಾಗಬಹುದು” ಎಂದು ಅಭಿಪ್ರಾಯಿಸಿದ್ದಾರೆ.
“ನಾಯಕ ನಜ್ಮುಲ್ ಹುಸೇನ್ ಶಾಂಟೊ ನಾನು ತಂಡಕ್ಕೆ ಮರಳುವಂತೆ ಒತ್ತಾಯಿಸಿದರು. ಆಯ್ಕೆ ಸಮಿತಿಯೊಂದಿಗೆ ಚರ್ಚೆಗಳು ನಡೆದವು. ನನ್ನನ್ನು ಇನ್ನೂ ತಂಡದಲ್ಲಿ ಪರಿಗಣಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ ನಾನು ನನ್ನ ಹೃದಯದ ಮಾತನ್ನು ಕೇಳುತ್ತೇನೆ” ಎಂದಿದ್ದಾರೆ.
ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ.
