ದಲಿತ, ಶೋಷಿತ ಸಮುದಾಯಗಳ ನಾಯಕ ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಎಚ್.ಆಂಜನೇಯ ಅಭಿಮಾನಿ ಬಳಗದ ಕಮಲಾಕರ ಎಲ್.ಹೆಗಡೆ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಅಖಿಲ ಕರ್ನಾಟಕ ಎಚ್. ಆಂಜನೇಯ ಅಭಿಮಾನಿ ಬಳಗದ ರಾಜ್ಯಧ್ಯಕ್ಷ ದೇವದಾಸ ಎಮ್. ಚಿಂತಲಗೇರಾ ಅವರ ಆದೇಶದ ಮೇರೆಗೆ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಮೀಸಲಾತಿ ಜಾರಿಗೆ ತಂದು ಗುತ್ತೆಗೆದಾರರ ಪಾಲಿನ ಅನ್ನದಾತರಾಗಿದ್ದಾರೆ. ಆಂಜನೇಯ ಅವರು ರಾಜ್ಯದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಎಚ್.ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಸುಮಾರು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಪಕ್ಷದ ಏಳಿಗಾಗಿ ಶ್ರಮಿಸಿದ್ದಾರೆ. ನಗರಸಭೆ ಸದಸ್ಯ ಸ್ಥಾನದಿಂದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗುವವರೆಗೆ ನಿರಂತರವಾಗಿ ಪಕ್ಷ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಆದರೆ ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ರಾಜಕೀಯ ಪಿತೂರಿಯಿಂದ ಅಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಇಂತಹ ಪಕ್ಷನಿಷ್ಠೆ ಹಾಗೂ ಸರ್ವ ಸಮುದಾಯವನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ರಾಜ್ಯದಾದ್ಯಂತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳು, ಅಂಬೇಡ್ಕರ್ ಭವನ, ಸೇವಾಲಾಲ ಭವನ, ಜಗಜೀವನರಾಂ ಭವನ, ಕನಕ ಭವನ, ವಾಲ್ಮೀಕಿ ಭವನ ನಿರ್ಮಿಸಿದ್ದಲ್ಲದೆ, ಒಳಮೀಸಲಾತಿ ಜಾರಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಆಂಜನೇಯ ಅವರಿಗೆ ಎಂಎಲ್‌ಸಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜಕಾರಣಿಗಳು ಹೇಳಿದಂತೆ ಮಠಾಧೀಶರು ಕೇಳುವ ಸ್ಥಿತಿಯಿದೆ : ಸಾಣೇಹಳ್ಳಿ ಶ್ರೀ
ಅಖಿಲ ಕರ್ನಾಟಕ ಹೆಚ್.ಆಂಜನೇಯ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಅಶೋಕ ಕಾರಪೆಂಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಪಿವನರಾಜ ನೀಲನೊರ, ತಾಲೂಕಾ ಅಧ್ಯಕ್ಷ ವಿನೋದ ನಾಗನಕೇರಾ, ಕಾಂಗ್ರೆಸ ಮುಖಂಡ ಹರೀಶ ಗಾಯಕವಾಡ, ಸಮಾಜದ ಮುಖಂಡರಾದ ರಾಜಕುಮಾರ ಶಾಪುರಕರ, ಸಾಲೋಮನ ಭಂಗೆ, ಸಾಗರ ಅಲೀಪುರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.