ಅಲೆಮಾರಿ ಸಮುದಾಯಗಳಿಗೆ 3% ಮೀಸಲಾತಿ ಕಲ್ಪಿಸಿ ; ಮಹಾಸಭಾ ಮನವಿ

Date:

Advertisements

ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳನ್ನು ಒಳಮೀಸಲಾತಿಗೆ ಒಳಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರಿಗೆ ಮನವಿ ಮಾಡಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಲ್.ಹನುಮಂತಪ್ಪ, “ಇಂದಿಗೂ ಶಿಕ್ಷಣ, ಆರೋಗ್ಯ, ವಸತಿ ಮತ್ತು ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯದೆ ಟೆಂಟು, ಗುಡಾರ, ಗುಡಿಸಲುಗಳಲ್ಲಿ ಅಲೆಮಾರಿಗಳು ವಾಸಿಸುತ್ತಿದ್ದಾರೆ. ಇಂದಿನವರೆಗೂ ಕೂಡ ಅಲೆಮಾರಿ ಸಮುದಾಯಕ್ಕೆ ಸರ್ಕಾರ ಯಾವುದೇ ರೀತಿಯ ಸವಲತ್ತು ನೀಡಿಲ್ಲ. ಸದ್ಯಕ್ಕೆ ಕರ್ನಾಟಕ ಪರಿಶಿಷ್ಟ ಜಾತಿಯಲ್ಲಿನ ಪಟ್ಟಿಯಲ್ಲಿರುವ ನೂರು ಸಮುದಾಯಗಳಲ್ಲಿ 49 ಸಮುದಾಯಗಳು ಅಲೆಮಾರಿಗಳಾಗಿದ್ದಾರೆ. ಪರಿಶಿಷ್ಟ ಜಾತಿಯಲ್ಲಿರುವ ನೂರೊಂದು ಸಮುದಾಯಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಈಗಾಗಲೇ ಸರ್ಕಾರ ಮುಂದಾಗಿದೆ. ಹಾಗಾಗಿ, ಸಮೀಕ್ಷೆ ಮಾಡಿ ಒಳಮೀಸಲಾತಿಯಲ್ಲಿರುವ ಜಾತಿಗಳ ವರ್ಗಿಕರಣ ಮಾಡಿ ಸರ್ಕಾರಕ್ಕೆ ಸಲಹೆ ನೀಡುವಾಗ ಪರಿಶಿಷ್ಟ ಜಾತಿಯಲ್ಲಿನ ಅಲೆಮಾರಿ ಸಮುದಾಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಿ” ಎಂದು ಮನವಿ ಮಾಡಿದ್ದಾರೆ.

“ಕೇಂದ್ರ ಸರ್ಕಾರ ಅಲೆಮಾರಿಗಳ ಕುರಿತಂತೆ 2008ರಲ್ಲಿ ನೇಮಿಸಿದ್ದ ಬಾಲಕೃಷ್ಣ ರೇಣುಕೆ ರಾಷ್ಟ್ರೀಯ ಆಯೋಗಗಳ ಪ್ರಕಾರ ಕರ್ನಾಟಕದಲ್ಲಿ 10% ಅಲೆಮಾರಿ ಸಮುದಾಯಗಳಿರುವುದು ದಾಖಲಾಗಿದೆ. ಹಾಗಾಗಿ, ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳ ಅಧಿಕೃತ ದತ್ತಾಂಶ, ದ್ವಿತೀಯ ಮೂಲದ ಮಾಹಿತಿ ಮತ್ತು ಕುಲಶಾಸ್ತ್ರೀಯ ಅಧ್ಯಯನದ ಕನಿಷ್ಠ ಮಾಹಿತಿ ಅಲೆಮಾರಿ ಸಮುದಾಯಗಳದ್ದು ಮಾತ್ರ ಇದೆ. ಎಸ್‌.ಸಿ, ಎಸ್.ಟಿ ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿಗಳ ಅಸ್ಮಿತೆಗಾಗಿ ‘ಅಲೆಮಾರಿ ಬುಡಕಟ್ಟು ಆಯೋಗ’ವನ್ನು ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರ ಕೂಡ ನಮ್ಮ ಮನವಿಗೆ ಓಗೊಟ್ಟು ಇಡೀ ಅಲೆಮಾರಿಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನದಲ್ಲಿದೆ. ಈ ಕಾರಣಕ್ಕೆ ನಾವು 7% ಮೀಸಲಾತಿ ಕೇಳಿದ್ದೇವೆ. ಹಾಗೇನಾದರೂ ಎಸ್‌.ಸಿ ಅಲೆಮಾರಿಗಳನ್ನು ಮಾತ್ರ ತಾವು ಪರಿಗಣಿಸುವುದಾದರೆ ಕನಿಷ್ಠ 3% ಮೀಸಲಾತಿ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

Advertisements

ಅಲೆಮಾರಿ

“ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಪಟ್ಟಿ ಕಲ್ಪಸಿ ಕನಿಷ್ಠ 3% ಮೀಸಲಾತಿಯನ್ನ ಕಲ್ಪಿಸಬೇಕು. ಅತ್ಯಂತ ಕೆಳದರ್ಜೆಯಲ್ಲಿರುವ ಅತಿಸೂಕ್ಷ್ಮ ಜಾತಿಗಳಾದ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳಿಗೆ ಈವರೆಗೆ ಯಾವುದೇ ಸೌಲಭ್ಯ ದೊರಕಿಲ್ಲ. ಸದ್ಯ ಸಮುದಾಯಗಳ ಸ್ಥಿತಿಗತಿಯನ್ನ ಗಮನಿಸಿ, ಸಮುದಾಯದ ಶ್ರೇಯೋಭಿವೃದ್ಧಿಗೆ ನ್ಯಾಯ ಒದಗಿಸಬೇಕು. 49 ಜಾತಿಗಳಿಗೆ ಮೀಸಲಾತಿ ಬೇಕು ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಮನವಿ ಮಾಡಿದ್ದೇವೆ. ಅಲೆಮಾರಿ ಸಮುದಾಯಗಳು ಬಹಳ ಕಷ್ಟದಲ್ಲಿವೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕೂಡ ಈ ಸಮುದಾಯಗಳಿಗೆ ಏನೂ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೂ ಕೂಡ ಮನವಿ ನೀಡುತ್ತೇವೆ. 49 ಎಸ್‌.ಸಿ ಸಮುದಾಯಗಳಿಗೆ ಇಲ್ಲಿಯವರೆಗೂ ಭೂಮಿ, ನಿವೇಶನ ಇಲ್ಲ. ಸರ್ಕಾರದ ಯಾವುದೇ ಟಿಎಸ್‌ಪಿ, ಎಸ್‌ಪಿ ಲೋನ್ ಸಿಗುತ್ತಿಲ್ಲ. ಎಲ್ಲ ಬಲಿಷ್ಠ ಸಮುದಾಯಗಳ ಪಾಲಾಗುತ್ತಿದೆ. ಅನುದಾನ ಬಲಾಡ್ಯ ಜಾತಿಗಳ ಪಾಲಾಗುತ್ತಿದೆ. ಮೀಸಲಾತಿ ನೀಡಿದರೇ, ಈ ಜನಾಂಗಕ್ಕೆ ಅನುಕೂಲವಾಗುತ್ತದೆ. ಹೊಸ ಜನಗಣತಿ ಬಿಡುಗಡೆ ಮಾಡಿ ಎಲ್ಲ ವರದಿಗಳನ್ನ ಆಧರಿಸಿ ಮೀಸಲಾತಿ ನೀಡಬೇಕು. ಕಳೆದ ನಾಲ್ಕು ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕಳೆದ 75ವ ವರ್ಷದಿಂದ ಮೀಸಲಾತಿಗಾಗಿ ಕಾದಿದ್ದೇವೆ” ಎಂದು ಹೇಳಿದ್ದಾರೆ.

ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜು ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನದಾಸ್ ಅವರಿಗೆ ಅಲೆಮಾರಿ ಸಮುದಾಯಗಳಿಗೂ ಕೂಡ ಒಳಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ. 3% ಇರುವ ಬಲಾಢ್ಯ ಸಮುದಾಯಗಳು 10% ಮೀಸಲಾತಿಯನ್ನು ಕಬಳಿಸುತ್ತಿವೆ. 10% ಇರುವ ಸಮುದಾಯಗಳಿಗೆ 3% ಮೀಸಲಾತಿಯನ್ನಾದರೂ ಕೊಡಲಿ ಎಂಬುದು ನಮ್ಮ ಮನವಿ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಂಡೆನ್ ಬರ್ಗ್ ರಿಸರ್ಚ್ ಸಂಸ್ಥೆಯನ್ನು ಸ್ಥಗಿತಗೊಳಿಸಿದ ಸ್ಥಾಪಕ ನಾಥನ್ ಆಂಡರ್ಸನ್

“ನಾವು ಹಳ್ಳಿಜೋಗದ ಕುಟುಂಬದವರು. ನಮಗೆ ಯಾವುದೇ ರೀತಿಯ ಮೀಸಲಾತಿ ಸಿಗುತ್ತಿಲ್ಲ. ಸರ್ಕಾರದಿಂದ ವಸತಿ, ಶೌಚಾಲಯ, ಕರೆಂಟ್ ಸೇರಿದಂತೆ ಯಾವುದೇ ರೀತಿಯ ಸೌಲಭ್ಯ, ಮೀಸಲಾತಿ ಸಿಗುತ್ತಿಲ್ಲ. ಬಡವರನ್ನ ಕರೆದು ಅವರ ಕುಂದು-ಕೊರತೆಗಳನ್ನ ಕೇಳಬೇಕು. ಆದರೆ, ನಮ್ಮ ಸಮಸ್ಯೆ ಬಗ್ಗೆ ಕೇಳುತ್ತಿಲ್ಲ. ನಮ್ಮ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ನಮ್ಮನ್ನ ಕಡೆಗಣಿಸುತ್ತಿದೆ. ಸರ್ಕಾರದ ಜಾಗ ಇದ್ದರೂ ನಮಗೆ ಕೊಡಲ್ಲ. ಸರ್ಕಾರ ನಮ್ಮನ್ನು ಯಾವತ್ತೂ ಮೇಲೆತ್ತಿಲ್ಲ” ಎಂದು ಚಿಕ್ಕಗಂಗಮ್ಮ ಆರೋಪಿಸಿದ್ದಾರೆ.

ಸುಡುಗಾಡು ಸಿದ್ಧ ಸಮುದಾಯದ ಧನಂಜಯ್ ಮಾತನಾಡಿ, “ಸರ್ಕಾರ ಭಿಕ್ಷಾಟನೆ ನಿಲ್ಲಿಸಿದ ಮೇಲೆ ಜನರೂ ಕೂಲಿಗೆ ಹೋಗುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ರೀತಿಯ ಕೂಲಿ ಕೆಲಸ ಸಿಗುತ್ತಿಲ್ಲ. ಪ್ರತಿಯೊಬ್ಬರು ಬಡತನದಲ್ಲಿ ಬದುಕುತ್ತಿದ್ದಾರೆ. ಕಷ್ಟದಲ್ಲಿದ್ದೇವೆ. ಸರ್ಕಾರ 3% ಮೀಸಲಾತಿಯನ್ನು ನೀಡಿದರೆ, ಉದ್ಯೋಗ, ಶಿಕ್ಷಣಕ್ಕೆ ಅನುಕೂಲವಾಗುತ್ತದೆ” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

Download Eedina App Android / iOS

X