ಶಿವಮೊಗ್ಗ ನಗರದ ವಿನೋಬನಗರದ ಇಂದಿರಾ ಗಾಂಧಿ ಬಡಾವಣೆಯ 100 ಫೀಟ್ ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆ ಎದುರು ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಒಂದು ಕುಟುಂಬದ ಸದಸ್ಯರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ.
ದಲಿತ ಮಹಿಳೆಯೊಂದಿಗೆ ಅಂತರ್ಜಾತಿ ವಿವಾಹವಾಗಿ ಒಂದು ಮಟ್ಟಿಗೆ ಉತ್ತಮವಾಗಿ ಜೀವನ ಸಾಗಿಸುತ್ತಿದ್ದ ಈ ವಿದ್ಯಾವಂತ ಕುಟುಂಬದಲ್ಲಿ ಈಗ ಎಲ್ಲವೂ ನೀರವ ಮೌನದಂತಾಗಿದೆ. ಗಂಡನಿಗೆ ರಕ್ತನಾಳಗಳು ಹೆಪ್ಪುಗಟ್ಟುವಿಕೆ(ಡಿವಿಟಿ)ಯ ಖಾಯಿಲೆಯಿದ್ದು, ಇದರಿಂದ ಇವರಿಗೆ ನಿಂತು ಕೆಲಸ ಮಾಡಲು ಆಗುತ್ತಿಲ್ಲ. ಪದೇ ಪದೆ ತಲೆ ಸುತ್ತುವುದರಿಂದ ಅರೋಗ್ಯಕರವಾಗಿ ಕೆಲಸಮಾಡಲಾಗುತ್ತಿಲ್ಲ.
ಇತ್ತೀಚೆಗೆ ಕಳೆದ 5 ತಿಂಗಳಲ್ಲಿ ಹೆಂಡತಿ ಅಶ್ವಿನಿಯವರಿಗೆ ಎರಡು ಬಾರಿ ಹೃದಯಾಘಾತವಾಗಿ ಸ್ಟಂಟ್ ಅಳವಡಿಸಿದ್ದಾರೆ. ಬದುಕಿ ಉಳಿದಿರುವುದೇ ಹೆಚ್ಚು ಎನ್ನುವಂತಿದೆ. ಇನ್ನು ಇವರಿಗೆ 30 ವರ್ಷದ ಒಬ್ಬ ಮಗನಿದ್ದಾನೆ. ಇವನು ಬುದ್ಧಿಮಾಂದ್ಯತೆಯಿದ್ದು, ಶೇ.70ಕ್ಕೂ ಅಧಿಕ ಮಾನಸಿಕವಾಗಿ ದುರ್ಬಲವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೊಬ್ಬ ಮಗಳು 10ನೇ ತರಗತಿ ಓದುತ್ತಿದ್ದು, ಮಗಳಿಗೆ ವಿದ್ಯಾಭ್ಯಾಸ ಮಾಡಿಸುವುದು ತೀರಾ ಕಷ್ಟಸಾಧ್ಯವಾದ ಕೆಲಸವಾಗಿದೆ. ಎರಡನೇ ಬಾರಿ ಹೆಂಡತಿಗೆ ಹೃದಯಾಘಾತವಾದಾಗ ತುಂಬಾ ಅಸಹಾಯಕ ಪರಿಸ್ಥಿತಿಲಿದ್ದರೂ ಕೂಡಾ ಹೇಗೋ ಮಾಡಿ ಹೆಂಡತಿಯನ್ನು ಬದುಕಿಸಿಕೊಂಡಿದ್ದಾರೆ.

ಎರಡನೇ ಬಾರಿ ಹೃದಯಘಾತ ಆಗುವುದಕ್ಕು ಕಾರಣ ಔಷಧಿ ತರಲು ಹಣವಿಲ್ಲದೆ ಔಷದಿ ಬಿಟ್ಟಿದ್ದರು. ವೈದ್ಯರು ಬರೆದ ಎಲ್ಲ ಔಷಧಿ ಇವರಿಗೆ ಉಚಿತವಾಗಿ ಸಿಗದಂತಾಯಿತು. ಹಣ ಇಲ್ಲ ಮನೆ ಬಾಡಿಗೆ ಕಟ್ಟಿಲ್ಲ. ಕಳೆದ 5 ತಿಂಗಳಿಂದ ಮನೆ ಮಾಲೀಕ ಮನೆ ಬಾಡಿಗೆ ನೀಡಿ, ಮಗಳ ವಿದ್ಯಾಭ್ಯಾಸ ಮುಗಿಸಿ ಮಾರ್ಚ್ ನಂತರ ಮನೆ ಬಾಡಿಗೆ ಸಂಪೂರ್ಣ ಪಾವತಿ ಮಾಡಿ ಮನೆ ಖಾಲಿ ಮಾಡಲು ತಿಳಿಸಿದ್ದಾರೆ” ಎಂದು ಅವಲತ್ತುಕೊಂಡಿದ್ದಾರೆ.
“ಕಳೆದ 15 ದಿನದಿಂದ ಮನೆ ಮುಂದೆ ಕುರ್ಚಿ ಹಾಗೂ ಒಂದು ಟೇಬಲ್ ಮೇಲೆ ಮಂಡಕ್ಕಿ, ಬಜ್ಜಿ ಹಾಕಿ ಸಂಜೆವೇಳೆ ಮಾರುತ್ತಿದ್ದರೂ ಇಲ್ಲಿ ಇವೆಲ್ಲ ಮಾರಬೇಡಿ ಎಂದು ಕೆಲವರು ಕಾಟ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ ಮನೆಯವರಿಗೆಲ್ಲ ಆರಾಮಿಲ್ಲೆ ಕಾರಣ ಕಳೆದ ಕೆಲವು ತಿಂಗಳು ಹಿಂದೆ ಔಷಧಿ ಮತ್ತು ಮನೆಗೆ ಕೆಲವು ಮನೆ ಸಾಮಗ್ರಿ ತರಲೆಂದು ಮಾನಸಿಕ ಅಸ್ವಸ್ತ ಮಗನಿಗೆ ಹಣ ನೀಡಿ ಕಳುಹಿಸಲಾಗಿತ್ತು. ಆದರೆ ಮಗ ಎಷ್ಟೊತ್ತಾದರೂ ಮನೆಗೆ ಬಾರದಿರುವ ಕಾರಣ ಭಯಗೊಂಡ ತಂದೆ ಮಗನ ಹುಡುಕಾಟಕ್ಕೆ ಹೋದಾಗ ರಾತ್ರಿ 11ರ ಸಮಯ ಆದಿ ಚುಂಚನಗಿರಿ ಶಾಲೆ ಫುಟ್‌ಪಾತ್ ಬಳಿ ಮೂರ್ಛೆ ಹೋಗಿ ಬಿದ್ದಿದ್ದು ಕಂಡುಬಂದಿತ್ತು. ರಾತ್ರಿವೇಳೆಯಲ್ಲಿ ಕೂಡಲೇ ಮಗನನ್ನು ಆಸ್ಪತ್ರೆ ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೇವೆ. ಮಗಳ ಮುಂದಿನ ಭವಿಷ್ಯ, ಹಾಗೂ ಉತ್ತಮವಾಗಿ ಓದುತ್ತಿರುವ ಅವಳ ವ್ಯಾಸಂಗ ಖರ್ಚು ಭರಿಸಲು ಪರಿತಪಿಸುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಬಿಕ್ಕಿ ಬಿಕ್ಕಿ ಅತ್ತರು ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ. ಹೇಗೋ ಔಷಧಿ, ಮನೆ ಬಾಡಿಗೆ, ಮನೆ ಮುಂದೆ ಒಂದು ಗಾಡಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವಷ್ಟು ಸಹಾಯ ಮಾಡಿದರೆ ಸಾಕೆಂಬ ನಿರೀಕ್ಷಿಯಲ್ಲಿದ್ದೇವೆ. ಮತ್ತೆ ನಾಡಿದ್ದು ಹೆಂಡತಿಯ ಹೃದಯ ಸಂಬಂಧ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಬೇಕಿದೆ. ಆದರೆ, ಕೈಯಲ್ಲ ಹಣವಿಲ್ಲ. ಸಂಜೆ ಮಾಡುವ ಮಂಡಕ್ಕಿ ಬೋಂಡಾ ಉಳಿದರೆ ಅದೇ ಮನೆಯಲ್ಲಿ ಎಲ್ಲರಿಗೂ ಊಟ. ಇನ್ನೂರು ಮುನ್ನೂರು ರೂಪಾಯಿ ವ್ಯಾಪಾರವಾದರೆ ಅದೇ ಹೆಚ್ಚು ಎನ್ನುವಂತಾಗಿದೆ. ಬಂದ ಹಣದಲ್ಲಿ ಮತ್ತೆ ಮಾರನೇ ದಿನದ ವ್ಯಾಪಾರಕ್ಕೆ ತರಕಾರಿ, ಕೆಲವು ದಿನಸಿ ಪದಾರ್ಥಗಳನ್ನು ತರಬೇಕು. ಇಂತಹ ಶೋಚನಿಯ ಪರಿಸ್ಥಿತಿಲಿ ಬದುಕು ದೂಡುವಂತಾಗಿದೆ” ಎಂದು ಕಣ್ಣೀರಿಟ್ಟರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟ | ದಲಿತಪರ ಸಂಘಟನೆಗಳ ಒಕ್ಕೂಟ: ಜ. 20ರಂದು ಬಾಗಲಕೋಟೆ ಬಂದ್ ಕರೆ
ಈ ದಿನ ಮಾಧ್ಯಮ ಮೂಲಕ ನಮ್ಮ ಓದುಗರಲ್ಲಿ ಕೇಳಿಕೊಳ್ಳುವುದೇನೆಂದರೆ ಯಾರಾದರೂ ನಿಮ್ಮಲ್ಲಿ ಸಹಾಯ ಮಾಡುವ ಮನಸಿದ್ದರೆ
ಈ ಕೆಳಗಿನ ಬ್ಯಾಂಕ್ ಅಕೌಂಟ್‌ಗೆ ಹಣ ಪಾವತಿಸಬಹುದಾಗಿದೆ. ಹಾಗೆ ಒಮ್ಮೆ ಆ ಕುಟುಂಬವನ್ನು ಭೇಟಿಯಾಗ ಬಯಸಿದಿರೆ ಅವರ ಮನೆಯ ವಿಳಾಸವನ್ನೂ ನೀಡಲಾಗಿದೆ. Phonepe/Googlepe/ಬ್ಯಾಂಕ್ ಟ್ರಾನ್ಸ್ಫರ್ ಮುಖಾಂತರ ಹಣ ನೀಡಬಹುದು.
ಸಹಾಯ ಮಾಡ ಬಯಸುವರು ಈ ಒಂದು ಕಡು ಬಡವರ ಕುಟುಂಬಕ್ಕೆ ನಿಮ್ಮ ಕೈಯಲ್ಲಾಗುವ ಸಹಾಯ ಮಾಡಬಹುದು.

Account Name : ASHWINI BORA W/O LALITH’S BORA
Account Number : 89270100025267
IFSC : BARBOUJSHSR
MICR Code:577012204
Branch Name: Bank of Baroda
SR RASHTE, SHIMOGA, TIPPESWAMY, COMPLEX SR RASTHE SHIMOGA, SHIMOGA, KARNATAKA, INDIA
Branch Email ID :vjster@barkofbaroda.com
NO.69 2ND CROSS VINDBHA NAGARA
ಮೊಬೈಲ್ ಸಂಖ್ಯೆ : 9008685482