ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಆಶ್ವಾಸನೆ ನೀಡಿದ್ದರು. ಆದರೆ ಅದಾವುದನ್ನು ಮಾಡಿಲ್ಲ. ಕಾರ್ಖಾನೆಗಳಿಂದ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಿ ಕಬ್ಬು ಬೆಳೆಗಾರರಿಗೆ ಕೊಡಬೇಕು” ಎಂದು ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ ಒತ್ತಾಯಿಸಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕಳೆದ ವರ್ಷದ ಕಬ್ಬಿನ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
“ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರರವರು ಹಾಗೂ ಜಿಲ್ಲಾಧಿಕಾರಿಗಳು ಕಾರ್ಖಾನೆಗಳಿಂದ ಬರಬೇಕಾಗಿದ್ದ ಬಾಕಿ ಹಣದ ಕುರಿತು ರೈತರು ಹಾಗೂ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಮಧ್ಯಸ್ಥಿಕೆ ವಹಿಸಿ, ಡಿಸೆಂಬರ್ ಡಿ. 31 ರೊಳಗಾಗಿ ಹಣ ಪಾವತಿಸುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.ಹೇಳಿದ ಮಾತನ್ನು ಉಳಿಸಿಕೊಳ್ಳಿ” ಎಂದು ಆಗ್ರಹಿಸಿದರು.
“ನಿರಾಣಿ ಕಾರ್ಖಾನೆ ಬಾಕಿ ಹಣದಲ್ಲಿ ಒಂಬತ್ತು ಕೋಟಿ ಮತ್ತು ಗುಡಗುಂಟಿ ಕಾರ್ಖಾನೆಯ ಮೂರು ಕೋಟಿಯಷ್ಟು ನೀಡಿದ್ದಾರೆ. ರೈತರ ಉಳಿದ ಬಾಕಿ ಹಣವನ್ನು ನೀಡಿಲ್ಲ. ಜನವರಿ ಹದಿನೈದು ಆದರೂ ರೈತರಿಗೆ ಬಾಕಿ ಹಣ ಕಾರ್ಖಾನೆಯವರು ಪಾವತಿಸಿರುವುದಿಲ್ಲ. ಆದ್ದರಿಂದ ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು” ಎಂದು ಬಸವಂತ ಕಾಂಬಳೆ ಹೇಳಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ದುಂಡಪ್ಪ ಯರಗಟ್ಟಿ ಮಾತನಾಡಿ, “ಈ ಕುರಿತು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದರೆ, ಎಫ್ ಆರ್ ಪಿ ಪ್ರಕಾರ ಮಾತ್ರ ತಾವು ನಡೆದುಕೊಳ್ಳಲು ಸಾಧ್ಯವೆಂದು ತಿಳಿಸಿದ್ದಾರೆ. ಅಲ್ಲದೇ ಎಫ್ ಆರ್ ಪಿ ಕಾಯ್ದೆ ಪ್ರಕಾರ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಹದಿನಾಲ್ಕು ದಿನಗಳ ಒಳಗೆ ಬಿಲ್ ಪಾವತಿಸಬೇಕು. ತಪ್ಪಿದಲ್ಲಿ ಶೇ ಹದಿನೆಂಟರಷ್ಟು ಬಡ್ಡಿ ಸಮೇತ ಬಿಲ್ ಪಾವತಿಸಬೇಕಾಗುತ್ತದೆ. ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಮನೆ ಮುತ್ತಿಗೆ ಖಂಡಿಸಿ ದಸಂಸ ಪ್ರತಿಭಟನೆ
ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡ ಸುಭಾಷ ಶಿರಭೂರ, ಮಹೇಶ ಪಾಟೀಲ, ಹನಮಂತಗೌಡ ಪಾಟೀಲ, ಕಲ್ಮೇಶ ಹಣಗುಜಿ ಅನೇಕರು ಉಪಸ್ಥಿತರಿದ್ದರು.
