ದುಷ್ಕರ್ಮಿಗಳ ತಂಡವೊಂದು ಬಂದೂಕು ತೋರಿಸಿ ಹಾಡಹಗಲ್ಲೇ ಬ್ಯಾಂಕ್ ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ನಡೆದಿದೆ.
ತಲಪಾಡಿಯ ಕೆ.ಸಿ ರೋಡ್ ಬಳಿಯ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ನಡೆದಿದೆ. ಐವರು ದುಷ್ಕರ್ಮಿಗಳ ತಂಡವು ಬಂದೂಕು ಹಿಡಿದು ಬ್ಯಾಂಕ್‌ಗೆ ನುಗ್ಗಿದೆ. ಬೆದರಿಕೆಯೊಡ್ಡಿ ಚಿನ್ನದ ಒಡವೆ, ನಗದನ್ನು ದರೋಡೆ ಮಾಡಿದ್ದಾರೆ.
ಫಿಯಟ್ ಕಾರಿನಲ್ಲಿ ಬಂದ ತಂಡ ಕೃತ್ಯ ಎಸಗಿದ್ದು, ದರೋಡೆ ಮಾಡಿ ಪರಾರಿಯಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಗುರುವಾರ ಬೆಳಗ್ಗೆ, ಬೀದರ್‌ನಲ್ಲಿ ದುಷ್ಕರ್ಮಿಗಳು ದುಂಡಿನ ದಾಳಿ ನಡೆಸಿ ಎಟಿಎಂ ದರೋಡೆ ಮಾಡಿದ್ದರು. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಆ ದುಷ್ಕರ್ಮಿಗಳಿಗಾಗಿ ಪೊಲೀಸ್ ತಂಡ ಶೋಧ ನಡೆಸುತ್ತಿದೆ. ಈ ಬೆನ್ನಲ್ಲೇ ತಲಪಾಡಿಯಲ್ಲೂ ದರೋಡೆ ನಡೆದಿದೆ.