ತುಮಕೂರು | ಎಸ್‌ಸಿ, ಎಸ್‌ಟಿ ಕಾಲೋನಿಗಳಿಗೆ ಸರಳ ಖಾತಾ ಆಂದೋಲನ ಸಭೆ : ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಭೆ ಬಹಿಷ್ಕಾರ

Date:

Advertisements

 ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ ಗಳಲ್ಲಿರುವ ಎಸ್‌ಸಿ, ಎಸ್‌ಟಿ ಸಮುದಾಯಗಳು ವಾಸಿಸುವ ಕಾಲೋನಿಗಳ ನಿವೇಶನ, ಕಟ್ಟಡ, ಆಸ್ತಿ ಸಂಖ್ಯೆ ಕುರಿತು ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆ ನಿರ್ಣಯದಂತೆ ಇಂದು ಮಹಾನಗರ ಪಾಲಿಕೆ ಆಯುಕ್ತರು ದಲಿತ ಸಂಘಟನೆಗಳ ಮತ್ತು ಮುಖಂಡರ ಸಭೆಯನ್ನು ಇಂದು ಪಾಲಿಕೆಯ ಸಭಾಂಗಣದಲ್ಲಿ ಕರೆದಿದ್ದರು, ಸಭೆ  11.45 ಆದರೂ ಪ್ರಾರಂಭವಾಗಲಿಲ್ಲ. ಆಯುಕ್ತರು ಕಾರ್ಯನಿಮಿತ್ತ ಬೆಂಗಳೂರು ಸಭೆಗೆ ತೆರಳಿದ್ದು ಅವರ ಅನುಪಸ್ಥಿತಿಯಲ್ಲಿ ಕಾಟಾಚಾರಕ್ಕೆ ನಗರಪಾಲಿಕೆ ಕಂದಾಯ ಉಪ ಆಯುಕ್ತ ರುದ್ರಮುನಿ, ವಲಯ ಆಯುಕ್ತ ನಾಗಭೂಷಣ್, ಶಿವಾನಂದ್ ಹಾಜರಾಗಿ ಸರಳಖಾತೆ ಮಾಡಲು ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದರು, ಸಭೆಗೆ ಯಾವುದೇ ಪೂರ್ವ ತಯಾರಿ ಇಲ್ಲದೆ ಕಾಟಾಚಾರಕ್ಕೆ ಈ ಸಭೆಯನ್ನು ಕರೆದಿರುವುದು ಎಸ್‌ಸಿ, ಎಸ್‌ಟಿ ಸಮುದಾಯವನ್ನು ಅಪಮಾನಿಸಿದಂತೆ ಆಯುಕ್ತರು ಉಪಸ್ಥಿತಿಯಲ್ಲೇ ಕರೆದು 2007ರಲ್ಲಿ ಮತ್ತು 2016-17ರಲ್ಲಿ ಆಗಿರುವ ಕ್ರಿಯಾಯೋಜನೆಯಡಿ ಸರಳಖಾತೆ ಆಂದೋಲನದ ಮಾಹಿತಿ ಮತ್ತು ಇ-ಸ್ವತ್ತು ಮುಂದುವರಿಸುವ ನಿರ್ಣಯದೊಂದಿಗೆ ಬರಬೇಕೆಂದು ಸಂಘಟನೆಗಳ ಮುಖಂಡರು ಪಟ್ಟು ಹಿಡಿದರು, ಉಪಆಯುಕ್ತರ ಬೇಜವಾಬ್ದಾರಿ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದು ಮಹಾ ನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಸಭೆಯನ್ನು ಬಹಿಷ್ಕರಿಸಲಾಯಿತು. 

ಸಭೆ ಬಹಿಷ್ಕರಿಸಿ ಮಾತನಾಡಿದ ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ  ಇಂದಿನ ಸಭೆಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಮುಖಂಡರು ಬಂದಿದ್ದೇವೆ 2 ದಶಕಗಳ ನಿರಂತರ ಬೇಡಿಕೆಗೆ ನಗರಪಾಲಿಕೆ ತಾರ್ಕಿಕ ಅಂತ್ಯವನ್ನು ನೀಡುತ್ತಿಲ್ಲ, 35 ವಾರ್ಡ್ಗಳಲ್ಲಿ 28ಕ್ಕೂ ಹೆಚ್ಚು ಎಸ್‌ಸಿ/ಎಸ್‌ಟಿ ಕಾಲೋನಿಗಳಿದ್ದು ಇಲ್ಲಿ ಬಹುತೇಕವಾಗಿ ತಾತ ಮುತ್ತಾತರ ಹೆಸರಿನಲ್ಲಿ ಖಾತೆಯಿದ್ದು ಇವುಗಳನ್ನು ಸ್ಥಳ ಪರಿಶೀಲನೆ ಮಾಡಿ ಪೌತಿ ವಾರಸುದಾರಿಕೆ ಮೇರೆಗೆ ವಿಶೇಷ ಪ್ರಕರಣದಡಿಯಲ್ಲಿ ಆಸ್ತಿ ಸಂಖ್ಯೆ ನೀಡಿರುವ ಸ್ವತ್ತನ್ನು ಇ-ಸ್ವತ್ತಿಗೆ ಪರಿವರ್ತಿಸಿ ಕೊಡಬೇಕು, ಒಟ್ಟಾರೆ ಎಸ್‌ಸಿ/ಎಸ್‌ಟಿಗಳಿಗೆ ಈ ಸಭೆ ಅಪಮಾನಿಸಿದೆ, ಏಕೇಂದರೇ ತುಮಕೂರು ಮಹಾನಗರ ಪಾಲಿಕೆ ನಗರದ ನಾಗರೀಕರಿಗೆ ಸೇವೆ ನೀಡಲು ಇರುವ ಸ್ವಾಯತ್ತ ಸಂಸ್ಥೆ ಈ ನಾಗರೀಕರಲ್ಲಿ ಎಸ್‌ಸಿ/ಎಸ್‌ಟಿಗಳು ನಾಗರೀಕರಲ್ಲವೇ..? ಹಾಗಾಗಿ ಆಯುಕ್ತರು ಈ ಬಗ್ಗೆ 7 ದಿನಗಳಲ್ಲಿ ಸಭೆ ಕರೆದು ಖುದ್ದು ಈ ಸಮಸ್ಯೆಗೆ ಪರಿಹಾರ ಕಂಡುಕೊಡಬೇಕೆಂದು ಆಗ್ರಹಿಸಿದರು. 

ದಲಿತ ಸಂಘಟನೆಯ ಪಿ.ಎನ್ ರಾಮಯ್ಯ ಮಾತನಾಡಿ ದಲಿತರ ಕುಂದು ಕೊರತೆ ಸಭೆ ಕರೆದು ಅಧಿಕಾರಿಗಳು ಯಾರು ಸಭೆಗೆ ಬಂದಿರುವುದಿಲ್ಲ ಇದು ಅಕ್ಷಮ್ಯ, ಇಂತಹ ದಲಿತ ವಿರೋಧಿ ಅಧಿಕಾರಿಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹೋರಾಟ ರೂಪಿಸಲಾಗುವುದೆಂದು ಆಗ್ರಹಿಸಿದರು. 

Advertisements

ಛಲವಾದಿ ಮಹಾಸಭಾದ ರಂಗಯ್ಯ ಮತ್ತು ನಾಗೇಶ್ ಮಾತನಾಡಿ ಎಸ್‌ಸಿಪಿ/ಟಿಎಸ್‌ಪಿ ಅನುಧಾನದಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳನ್ನು ಮಾಡದೇ ನಿರ್ಲಕ್ಷö್ಯವಹಿಸಿದ್ದಾರೆ, ದಲಿತ ಕಾಲೋನಿಗಳಲ್ಲಿ ಹಲವಾರು ಸಮಸ್ಯೆಗಳಿವೆ ಇವುಗಳ ಪರಿಹಾರಕ್ಕೆ ಆಯುಕ್ತರು ಮುಂದಾಗಬೇಕೆAದರು ತಪ್ಪಿದಲ್ಲಿ ಪರಿಶಿಷ್ಟ ಜಾತಿ/ಪಂಗಡ ನಿರ್ಲಕ್ಷö್ಯ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುವುದು ಎಂದರು.

ಮಾಜಿ ನಗರಸಭೆ ಉಪಾಧ್ಯಕ್ಷ ಹನುಮಂತರಾಯಪ್ಪ, ದಲಿತ ಸೇನೆಯ ಗಣೇಶ್, ಚರ್ಮ ಕುಶಲಕರ್ಮಿ ಸಂಘದ ಗೋಪಾಲ್, ಅಂಬೇಡ್ಕರ್ ಸಂಘದ ಮೂರ್ತಿ, ಮಾದಿಗ ದಂಡೋರ ಸಂಘಟನೆಯ ಲಕ್ಷ್ಮೀ ದೇವಮ್ಮ, ತುಮಕೂರು ಸ್ಲಂ ಸಮಿತಿಯ ಅರುಣ್, ಕೃಷ್ಣಮೂರ್ತಿ, ಮನೋಜ್, ಎನ್,ಆರ್ ಕಾಲೋನಿ ಬಾಬು ಜಗಜೀವನ್‌ರಾಂ ಸಂಘದ ಕಿರಣ್, ಒನಕೆ ಓಬ್ಬವ್ವನ ಸಂಘದ ವಿಜಯಲಕ್ಷ್ಮೀ , ಛಲವಾದಿ ಮಹಾಸಭಾದ ಶೇಖರ್, ಹೆಗ್ಗೆರೆ ಕೃಷ್ಣಮೂರ್ತಿ, ವಿ.ನಾಗೇಶ್ ಮುಂತಾದವರು ಭಾಗವಹಿಸಿದ್ದರು.  

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X