ಬಹುತ್ವ ಸಂಸ್ಕೃತಿ ಭಾರತೋತ್ಸವ-2025ರ ಚಲೋ ಕಲಬುರಗಿ ಕಾರ್ಯಕ್ರಮದ ಅಂಗವಾಗಿ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿ, ನಡೆಸಿದ ಬೈಕ್ ರ್‍ಯಾಲಿ ಯಶಸ್ವಿಯಾಗಿದೆ.
ಬೆಳಗ್ಗೆ 11ಗಂಟೆಗೆ ದೇವಸ್ಥಾನದ ಆವರಣದಲ್ಲಿ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಶರಣಬಸಪ್ಪ ಹಾಗೂ ನಿವೃತ್ತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರು ಬಹುತ್ವ ಸಂಸ್ಕೃತಿ ಭಾರತೋತ್ಸವದ ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚಾಲನೆ ನೀಡಿ ದಾಕ್ಷಾಯಿಣಿ ಶರಣಬಸಪ್ಪ ಮಾತನಾಡಿ, “ಭವಿಷ್ಯಕ್ಕಾಗಿ ಬಹುತ್ವ ಭಾರತ ಉಳಿಸುವುದು ಅಗತ್ಯವಾಗಿದ್ದು, ಇದಕ್ಕೆ ಸಂಸ್ಥಾನ ಸಂಪೂರ್ಣ ಸಹಕಾರ ನೀಡುತ್ತದೆ” ಎಂದು ಹೇಳಿದರು.
ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡ ರ್‍ಯಾಲಿ ಸೇಂಟ್ ಮೇರಿ ಚರ್ಚ್ ಮಾರ್ಗವಾಗಿ ಸಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮಾರ್ಗ, ಜಗತ್ ವೃತ್ತದಿಂದ ಹಾಯ್ದು ಸೌಹಾರ್ದ ಸಂಕೇತವಾದ ಖಾಜಾ ಬಂದೇನವಾಜ್ ದರ್ಗಾದಲ್ಲಿ ಮುಕ್ತಾಯವಾಯಿತು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಮನೆ ಮುತ್ತಿಗೆ ಖಂಡಿಸಿ ದಸಂಸ ಪ್ರತಿಭಟನೆ
ಜಾಥಾದಲ್ಲಿ ಕೆ ನೀಲಾ, ಆರ್ ಕೆ ಹುಡಗಿ, ಮೀನಾಕ್ಷಿ ಬಾಳಿ, ಸುರೇಶ್ ಹಾದಿಮನಿ, ಮಹಮ್ಮದ್ ಅಫಜಲ್, ಅಬ್ದುಲ್ ಖಾದರ್, ಕಾಶಿನಾಥ್ ಅಂಬಲಗೆ, ಪ್ರಭು ಖಾನಾಪುರ, ಅಬ್ದುಲ್ ರಹೀಂ, ರಿಜ್ವಾನ್ ಸಿದ್ದಿಕಿ, ಶಾಹನಾಜ್ ಅಖರ್, ದತ್ತಾತ್ರೇಯ ಇಕ್ಕಳಕಿ, ಮಹಾಂತೇಶ್ ಕಲಬುರಗಿ, ಮುಬೀನ್ ಅಹ್ಮದ್, ಲವಿತ್ರಾ ರಾಜೇಂದ್ರ ರಾಜವಾಳ್, ವಸ್ತ್ರದ್, ಅರ್ಜುನ್ ಗೊಬ್ಬರ್, ಶ್ರೀನಾಥ್ ಬಿರಾದಾರ, ಗೌರಮ್ಮ ಪಾಟೀಲ್ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಇದ್ದರು.
