ಜನವರಿ 12 ರಂದು ಡಾಕು ಮಹಾರಾಜ್ ಚಲನಚಿತ್ರ ಪ್ರದರ್ಶನಕ್ಕೆ ಮುನ್ನ ತಿರುಪತಿಯ ಚಿತ್ರಮಂದಿರದಲ್ಲಿ ಟಗರು ಒಂದರ ಶಿರಚ್ಛೇದ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶ ಪೊಲೀಸರು ತೆಲುಗು ನಟ ಎನ್ ಬಾಲಕೃಷ್ಣ ಅವರ ಐವರು ಅಭಿಮಾನಿಗಳನ್ನು ಬಂಧಿಸಿದ್ದಾರೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಮೇಲ್ ಮೂಲಕ ಕಳುಹಿಸಿದ ದೂರಿನ ಮೇರೆಗೆ ಟಗರು ತಲೆ ಕಡಿದು ರಕ್ತವನ್ನು ನಟ ಎನ್ ಬಾಲಕೃಷ್ಣ ಅವರ ಪೋಸ್ಟರ್ಗೆ ಹಚ್ಚಿದ ಶಂಕರಯ್ಯ, ರಮೇಶ್, ಸುರೇಶ್ ರೆಡ್ಡಿ, ಪ್ರಸಾದ್ ಮತ್ತು ಮುಖೇಶ್ ಬಾಬು ಅವರನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಕಾಟೇರ – ಕನ್ನಡ ಚಿತ್ರರಂಗಕ್ಕೆ ತೋರಿದ ಹೊಸ ದಿಕ್ಸೂಚಿ
ಜನಪ್ರಿಯ ಟಾಲಿವುಡ್ ನಟ ಮತ್ತು ಹಿಂದೂಪುರ ಶಾಸಕ ಬಾಲಕೃಷ್ಣ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಸೋದರ ಮಾವ ಆಗಿದ್ದಾರೆ.
“ಪೇಟಾದಿಂದ ಇಮೇಲ್ ಬಂದಿತ್ತು. ಅವರು ಎಸ್ಪಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ಜನವರಿ 16ರಂದು ನಾವು ವಿಚಾರಣೆ ನಡೆಸಿ ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ತಿರುಪತಿ ಪೂರ್ವ ಉಪವಿಭಾಗೀಯ ಪೊಲೀಸ್ ಅಧಿಕಾರಿ ವೆಂಕಟ್ ನಾರಾಯಣ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ನಿಗೂಢ ಕಾಯಿಲೆಗೆ ಐದು ಮಕ್ಕಳು ಸೇರಿ ಇಡೀ ಕುಟುಂಬವೇ ಬಲಿ; ನನ್ನ ಜಗತ್ತೇ ನಾಶವಾಯಿತು ಎಂದ ಅಸ್ಲಾಂ
ಈ ಪ್ರಾಣಿ ಬಲಿಯಲ್ಲಿ ಭಾಗಿಯಾಗಿದ್ದ ಶಂಕೆಯಲ್ಲಿ ಇತರ ಜನರನ್ನು ಕೂಡಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ನಾರಾಯಣ ಹೇಳಿದರು.
ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಟಗರು ಶಿರಚ್ಛೇದನದ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರ ಪ್ರಕಾರ ಜನವರಿ 12ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಟಗರನ್ನು ಬಲಿ ನೀಡಲಾಗಿದೆ. ಸದ್ಯ ಬಂಧಿತ ಐವರೂ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
