ರಾಯಚೂರು | 10 ವರ್ಷಗಳಿಂದ ನಡೆಯದ ಗ್ರಾ.ಪಂ ಚುನಾವಣೆ; ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತ

Date:

Advertisements

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮ ಪಂಚಾಯಿತಿಗೆ ಹತ್ತು ವರ್ಷಗಳಿಂದ ಚುನಾವಣೆ ನಡೆಯದೆ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಸ್ಥಳೀಯರು ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುವ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಹೇಮನಾಳ ಪಂಚಾಯಿತಿಗೆ ಖಾನಾಪುರ ಹಾಗೂ ಮದರಕಲ್ ಗ್ರಾಮವು ಎರಡೂ ಒಂದೇ ಹೇಮನಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಸರ್ಕಾರದ ಸರ್ವೇ ಮೂಲಕ ಖಾನಾಪುರ ಪಂಚಾಯಿತಿಯನ್ನು ಹೇಮನಾಳ ಸೇರಿಸಿ, ಮದರಕಲ್ ಗ್ರಾಮವನ್ನು ಶಾವಂತಗೆರಾ ಪಂಚಾಯಿತಿಗೆ ಸೇರಿಸಲಾಗಿದೆ. ಇದರಿಂದ ಮನನೊಂದು ಮದರಕಲ್ ಗ್ರಾಮದವರು ಹೇಮನಾಳ ಗ್ರಾಮ ಪಂಚಾಯಿತಿಗೆ ಸೇರಿಸಬೇಕು. ಇದು ಕೇವಲ 2 ಕಿಮೀ ದೂರವಿದ್ದು, ನಮಗೆ ಅನುಕೂಲವಾಗುತ್ತದೆಂದು ನ್ಯಾಯಾಲಯಕ್ಕೆ ಮೊರೆ ಹೋದರು.

ಖಾನಾಪುರ ಗ್ರಾಮವು ಹೇಮನಾಳ ಪಂಚಾಯಿತಿಗೆ ಸರಿ ಸುಮಾರು 10 ಕಿಮೀ ಆಗುತ್ತದೆ. ಆದ್ದರಿಂದ ಅದನ್ನು ಕೈ ಬಿಟ್ಟು, ಅವರನ್ನು ಶಾವಂತಗೇರಾ ಪಂಚಾಯಿತಿಗೆ ಸೇರಿಸಬೇಕೆಂದು ಮದರಕಲ್ ಗ್ರಾಮದ ಜನರ ಬೇಡಿಕೆ. ಈ ವಾದ ವಿವಾದದಲ್ಲಿ ಅಭಿವೃದ್ಧಿ ಕಾಣದೆ ಗ್ರಾಮವು ಕತ್ತಲೆಯಾಗಿದೆಯೆಂದು ಹೇಮನಾಳ ಗ್ರಾಮದ ಜನರು ಗೋಳಾಗಿದೆ.

Advertisements
ಹೇಮನಾಳ ಗ್ರಾಮದ ಸ್ಥಿತಿ

“ಹೇಮನಾಳ ಗ್ರಾಮ ಪಂಚಾಯತಿಗೆ ಮದರಕಲ್ ಗ್ರಾಮವು 2 ಕಿಲೋಮೀಟರ್ ಇರುವುದರಿಂದ ಸಾರ್ವಜನಿಕ ಗ್ರಾಮ ಪಂಚಾಯಿತಿ ಕಾರ್ಯಾಲಯ ಹೇಮನಾಳ, ಜನರಿಗೆ ಅನುಕೂಲಕರವಾಗುತ್ತದೆ. ಮದರಕಲ್ ಗ್ರಾಮವನ್ನು ಹೇಮನಾಳ ಪಿ ಎಚ್ ಸೆಂಟರ್ ಮತ್ತು ಸುರಕ್ಷಿತ ರಸ್ತೆ ಸಂಪರ್ಕ ಇರುವುದರಿಂದ ತುಂಬಾ ಅನುಕೂಲಕರವಾಗುತ್ತದೆ” ಎಂದು ಮದರಕಲ್ ಗ್ರಾಮದ ಜನರು ಅಭಿಪ್ರಾಯ ವ್ಯಕ್ತಪಡಿಸಿದರು.

“ಶಾವಂತಗೇರಾ ಗ್ರಾಮ ಪಂಚಾಯಿತಿಗೆ ಖಾನಾಪೂರು ಗ್ರಾಮವು 4 ಕಿಲೋಮೀಟರ್ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲಕರವಾಗುತ್ತದೆ. ಖಾನಾಪೂರ ಗ್ರಾಮವು ಹೇಮನಾಳ ಪಂಚಾಯತಿಗೆ 12 ಕಿಲೋಮೀಟರ್ ದೂರವಾಗುತ್ತದೆ. ಆದಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಖಾನಾಪೂರ ಗ್ರಾಮವನ್ನು ಶಾವಂತಗೇರಾ ಪಿಎಚ್ ಸೆಂಟರ್ ಮತ್ತು ಸುರಕ್ಷಿತ ರಸ್ತೆ ಸಂಪರ್ಕ ಇರುವುದರಿಂದ ತುಂಬಾ ಅನುಕೂಲಕರವಾಗುತ್ತದೆ” ಎಂದು ತಿಳಿಸಿದರು.

ಹೇಮನಾಳ ಗ್ರಾಮದ ಸ್ಥಿತಿ 1

ಹೇಮನಾಳ ಗ್ರಾಮದ ನಿವಾಸಿ ಶಾಂತಕುಮಾರ ಹೊನ್ನಟಗಿ ಮಾತನಾಡಿ, “ಈ ಸಮಸ್ಯೆಯಿಂದ ಸುಮಾರು 10 ವರ್ಷಗಳಿಂದ ಚುನಾವಣೆಗಳು ನಡೆದಿಲ್ಲ. ಗ್ರಾಮದಲ್ಲಿ ದಿನನಿತ್ಯ ಕುಡಿಯುವ ನೀರು, ಮೂಲಭೂತ ಸೌಕರ್ಯಗಳಿಂದ ಗ್ರಾಮದ ಜನರು ವಂಚಿತರಾಗಿದ್ದಾರೆ” ಎಂದರು.

“ಚುನಾವಣೆ ನಡೆಯದೆ ಹೋದರೆ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ. ಸರ್ಕಾರದಿಂದ ಬಂದಂತಹ ಅನುದಾನವೆಲ್ಲ ಏನಾಗುತ್ತಿದೆ ಎಂಬುದರ ಕುರಿತು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಈ ಗ್ರಾ.ಪಂ.ಗಳಲ್ಲಿ ಸದಸ್ಯರಿಲ್ಲದೆ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಆದರೆ ಅಧಿಕಾರಿಗಳು ಮಾತ್ರ ನಾವು ಮಾಡಿದ್ದೇ ಸರಿ ಎನ್ನುತ್ತಿದ್ದಾರೆ” ಎಂದರು.

ಹೇಮನಾಳ ಗ್ರಾಮದ ಸ್ಥಿತಿ 2

“ಸಾರ್ವಜನಿಕರಿಗೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತ ಗ್ರಾಮವಾಗುತ್ತಿವೆ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸರಿಯಾಗಿ ಪಂಚಾಯಿತಿಗೆ ಬಾರದೆ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಾರೆ” ಎಂದು ಆರೋಪಿಸಿದರು.

“ತಾಲೂಕಿನ ಹೇಮನಾಳ ಹಾಗೂ ಶಾವಂತಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 13 ಹಳ್ಳಿಗಳು ಹೊಂದಿವೆ. ಚುನಾವಣೆ ಸಂಭ್ರಮದ ಮರೆಯಾಗಿದೆ. ಆದರೆ ಜನರು ಚುನಾವಣೆ ನಡೆಯಬೇಕು” ಎಂದು ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಆಕ್ರಮವಾಗಿ ಸೇಂದಿ ಮಾರಾಟ; ಆರೋಪಿಗಳು ಪೊಲೀಸರ ವಶ

“ಗ್ರಾಮಸ್ಥರು, ಜನಪ್ರತಿನಿಧಿಗಳು ಇಲ್ಲದ ಕಾರಣ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ಚುನಾಯಿತ ಸದಸ್ಯರಿದ್ದರೆ ಅವರ ಬಳಿ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯಬಹುದು. ಮನರೇಗಾ ಸೇರಿದಂತೆ ವಿವಿಧ ಯೋಜನೆಗಳು ಹಾಗೂ ಮೂಲಸೌಲಭ್ಯ ಪಡೆಯಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಸಭೆ ಕರೆದು ಇದನ್ನು ಬಗೆಹರಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಅಕ್ರಮ ಪ್ಲಾಸ್ಟಿಕ್ ಮಾರಾಟ: ನಗರಸಭೆ ಅಧಿಕಾರಿಗಳು ದಾಳಿ

ಚಿಕ್ಕಮಗಳೂರು ನಗರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಅಕ್ರಮವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ...

ಕೋಲಾರ | 9 ತಿಂಗಳಿನಿಂದ ವೇತನ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೊರಗುತ್ತಿಗೆ ಕಾರ್ಮಿಕರು

ಕೋಲಾರ ನಗರಸಭೆಯಲ್ಲಿ ಕೆಲಸ ಮಾಡುವ 74 ಮಂದಿ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ...

ಬೀದರ್‌ | ವಚನ ಸಾಹಿತ್ಯ, ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠದ ಕೊಡುಗೆ ಅನನ್ಯ : ಪುರಷೋತ್ತಮ ಬಿಳಿಮಲೆ

ಗಡಿಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠ...

ನಿಂದನೆ ಆರೋಪ : ಬಂಧಿತರಾಗಿದ್ದ ವಕೀಲ ಕೆ ಎನ್‌ ಜಗದೀಶ್‌ಗೆ ಜಾಮೀನು ಮಂಜೂರು

ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದ ಆರೋಪದ ಮೇಲೆ ಶುಕ್ರವಾರ ಸಂಜೆ ಬಂಧಿತರಾಗಿದ್ದ ಬಿಗ್‌...

Download Eedina App Android / iOS

X