ಕದನವಿರಾಮ ಎಂಬುದು ಕದನಕ್ಕೆ ವಿರಾಮವೇ ವಿನಾ ಶಾಂತಿಯಲ್ಲ. ಆದರೆ ಈಗಾಗಲೆ ಇಡೀ ಪ್ಯಾಲೆಸ್ತೀನನ್ನು ಧ್ವಂಸಗೊಳಿಸಿ ಮಸಣವಾಗಿಸಿರುವ ಇಸ್ರೇಲ್ ದುರಾಕ್ರಮಣದ ವಿರಾಮ ಶಾಂತಿ ಕುರಿತ ಆಶಾವಾದಕ್ಕೆ ಮೊದಲ ಮೆಟ್ಟಿಲು. ಇಸ್ರೇಲ್ ಮತ್ತು ಹಮಾಸ್ ಪರಸ್ಪರ ಹಗೆಯನ್ನು ತತ್ಕಾಲಕ್ಕೆ ಸ್ಥಗಿತಗೊಳಿಸಲು ಒಪ್ಪಿವೆ. ತಿಂಗಳುಗಟ್ಟಲೆ ನಡೆದ ಸಂಧಾನ ಕದನವಿರಾಮದ ಗೆರೆ ಎಳೆದಿದೆ. ಅತ್ಯಂತ ಬರ್ಬರ ಮತ್ತು ಭಯಾನಕ ನರಮೇಧಕ್ಕೆ ಬಲಿಯಾಗಿರುವ ಪ್ಯಾಲೆಸ್ತೀನೀಯರಿಗೆ ಈ ಕದನವಿರಾಮ ಸ್ವಾಗತಾರ್ಹ ಪರಿಹಾರ. ಹದಿನೈದು ತಿಂಗಳ ಕಾಲ ನಿತ್ಯ ಬಾಂಬು ದಾಳಿ, ಹತ್ಯೆಗಳು, ಬೆದರಿಕೆಗಳು, ಸೆರೆವಾಸ, ಉಪವಾಸ,…

ಡಿ ಉಮಾಪತಿ
ಹಿರಿಯ ಪತ್ರಕರ್ತರು