ಈ ದಿನ ಸಂಪಾದಕೀಯ | ‘ರೋಹಿತ್‌ ಕಾಯ್ದೆ’ ಜಾರಿಗಾಗಿ ಆಗಬೇಕಿದೆ ‘ಜನಾಂದೋಲನ’

Date:

Advertisements
ಜಾತಿವಾದಿ ಮನಸ್ಥಿತಿಗಳು ಮತ್ತು ಮತೀಯವಾದಿ ಶಕ್ತಿಗಳು ಅಧಿಕಾರ ಕೇಂದ್ರದಲ್ಲಿ ಇದ್ದಷ್ಟು ಕಾಲ ಇಂತಹ ಕಾಯ್ದೆಯನ್ನು ಜಾರಿಗೆ ತರುವುದು ಸವಾಲಿನ ಕೆಲಸ

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದ ಸಾಂಸ್ಥಿಕ ಕಿರುಕುಳಕ್ಕೆ ಬೇಸತ್ತು ಕೊನೆಯುಸಿರೆಳೆದವರು ರೋಹಿತ್ ವೇಮುಲಾ. ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಮೇಲೆ ದ್ವೇಷಕಾರಿದ ಎಬಿವಿಪಿ, ಅದಕ್ಕೆ ಬೆಂಬಲವಾಗಿ ನಿಂತ ಆಡಳಿತ ಮಂಡಳಿ, ಪ್ರಕರಣದಲ್ಲಿ ಬಿಜೆಪಿ ನಾಯಕರ ಪ್ರವೇಶ- ಈ ಎಲ್ಲವುಗಳ ಕಾರಣ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ, ‘ನನ್ನ ಹುಟ್ಟೇ ಒಂದು ಮಾರಣಾಂತಿಕ ಆಘಾತ’ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡರು.

ವೇಮುಲಾ ಬರೆದ ಡೆತ್‌ನೋಟ್‌ನಲ್ಲಿ ಯಾರನ್ನೂ ದೂಷಿಸಲಿಲ್ಲ. ಆಂತರ್ಯದಲ್ಲಿ ಅಂತಃಕರಣವುಳ್ಳವರು ಮಾತ್ರ ಬರೆಯಬಹುದಾದ ಪತ್ರ ಅದಾಗಿತ್ತು. ವಿಜ್ಞಾನ ಲೇಖಕ ಕಾರ್ಲ್‌ ಸಗಾನನಂತೆ ಬರಹಗಾರನಾಗಬೇಕೆಂದು ಕನಸು ಕಂಡಿದ್ದ ವೇಮುಲಾ, ನಕ್ಷತ್ರವಾಗಿ ನಭ ಸೇರಿದ. ವೇಮುಲಾನ ಸಾವು ನಮ್ಮ ವ್ಯವಸ್ಥೆಯನ್ನು ಒಂದಿಂಚಾದರೂ ಅಲುಗಾಡಿಸಿತೇ? ಕ್ಯಾಂಪಸ್‌ನಲ್ಲಿ ನಡೆಯುವ ಜಾತಿ ದೌರ್ಜನ್ಯಗಳು ನಿಂತಿತೆ ಎಂದು ಪ್ರಶ್ನಿಸಿಕೊಂಡರೆ ಸಿಗುವ ಉತ್ತರ ಆಘಾತಕಾರಿಯಾಗಿರುತ್ತದೆ. ಹೀಗಾಗಿ ಕ್ಯಾಂಪಸ್ ಕಿರುಕುಳಗಳ ಕುರಿತು, ಗಂಭೀರವಾಗಿ ಯೋಚಿಸುತ್ತಿರುವ ಚಿಂತನಾ ವಲಯ, ‘ರೋಹಿತ್ ಆಕ್ಟ್’ ಜಾರಿಗಾಗಿ ಒತ್ತಾಯಿಸುತ್ತಿದೆ.

ಭಾನುವಾರ (ಜ. 19ನೇ ತಾರೀಖು) ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ಕಾಲೇಜಿನಲ್ಲಿ ನಡೆದ ‘ರೋಹಿತ್ ಆಕ್ಟ್ ಜಾರಿಗಾಗಿ ಸಮಲೋಚನಾ ಸಭೆ’ಯಲ್ಲಿ ಮಾತನಾಡಿರುವ ಹಲವು ಚಿಂತಕರು, ದಲಿತ ವಿದ್ಯಾರ್ಥಿಗಳ ಸ್ಥಿತಿಯನ್ನು, ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯಗಳನ್ನು ಗಂಭೀರವಾಗಿ ಚರ್ಚಿಸಿದ್ದಾರೆ.

Advertisements

ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್‌ನ ಲೇಖಾ ಅಡವಿ, ‘ಪ್ರತಿ ವಿಶ್ವವಿದ್ಯಾಲಯದಲ್ಲಿ ಎಸ್‌ಸಿ ಎಸ್‌ಟಿ ಸೆಲ್‌ ಸ್ಥಾಪಿಸಬೇಕು, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯಗಳನ್ನು ತಡೆಯಬೇಕು ಎಂದು ಯುಜಿಸಿ ಗೈಡ್‌ಲೈನ್ ಹೇಳುತ್ತದೆ. ಆದರೆ ಮಾರ್ಗಸೂಚಿಯನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತಿದೆ? ಎಂಬುದು ತಿಳಿಯದು. ಎಷ್ಟು ದೂರುಗಳು ದಾಖಲಾಗಿವೆ ಎಂಬುದರ ದತ್ತಾಂಶವನ್ನು ವಿಶ್ವವಿದ್ಯಾಲಯಗಳು ನೀಡಬೇಕೆಂದು ಸುಪ್ರೀಂಕೋರ್ಟ್‌ ಸೂಚನೆಯನ್ನೂ ನೀಡಿದೆ. ಸೆಲ್‌ನಲ್ಲಿ ಯಾರಿದ್ದಾರೆ, ದೂರು ಕೊಟ್ಟ ವಿದ್ಯಾರ್ಥಿಗಳಿಗೆ ಪ್ರತಿಸ್ಪಂದನೆ ದೊರಕಿದೆಯೇ, ಜಾತಿ ಸೂಕ್ಷ್ಮ ಇರುವವರು ಸೆಲ್‌ನಲ್ಲಿ ಇದ್ದಾರಾ ಎಂಬುದು ಪ್ರಶ್ನೆಯಾಗಿ ಕೂತಿದೆ’ ಎಂದಿದ್ದಾರೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!

‘ಅಡ್ಮಿಷನ್‌ ಮಾಡಿಕೊಳ್ಳುವಾಗಲೇ ತೊಂದರೆ ಕೊಡುವುದು, ಕೋಟಾ ಮಕ್ಕಳು ಎಂದು ಜರಿಯುವುದು, ಪ್ರವೇಶಾತಿಯ ಬಳಿಕ ಪ್ರಬಲ ಜಾತಿಗಳ ಪ್ರಾಧ್ಯಾಪಕರಿಂದ ತಾರತಮ್ಯ, ಕಿರುಕುಳಕ್ಕೆ ಹೆದರಿ ದಲಿತ, ಆದಿವಾಸಿ ವಿದ್ಯಾರ್ಥಿಗಳು ವ್ಯಾಸಂಗವನ್ನು ತೊರೆಯುವುದು ಮತ್ತು ಸಾಂಸ್ಥಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದು ನಡೆಯುತ್ತಿದೆ’ ಎನ್ನುತ್ತಾರೆ ಲೇಖಾ.

‘ಸರ್ಕಾರ, ಶೈಕ್ಷಣಿಕ ಸಂಸ್ಥೆಗಳಲ್ಲಿ 122 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಲೋಕಸಭೆಯಲ್ಲಿ ಸರ್ಕಾರವೇ ನಾಚಿಕೆ ಇಲ್ಲದೆ ಅಂಕಿ-ಅಂಶಗಳನ್ನು ನೀಡುತ್ತಿದೆ. ಆದರೆ ಇದನ್ನು ತಡೆಯಲು ಏನು ಮಾಡಬೇಕು ಎಂದು ‌ಮಾತ್ರ ಸರ್ಕಾರ ಯೋಚಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಲೇಖಕ ವಿಕಾಸ್ ಆರ್. ಮೌರ್ಯ.

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಜಾತಿ ತಾರತಮ್ಯದ ಸ್ವರೂಪಗಳು ಕಣ್ಣಿಗೆ ಕಾಣಿಸುವುದಿಲ್ಲ. ವೈವಾ ಸಂದರ್ಭಗಳಲ್ಲಿ ಬಲಾಢ್ಯ ಜಾತಿಯ ವಿದ್ಯಾರ್ಥಿಗಳಿಗಿಂತ ಕಡಿಮೆ ಸಮಯವನ್ನು ದಲಿತ ವಿದ್ಯಾರ್ಥಿಗಳಿಗೆ ಕೊಡುವುದು, ಕಠಿಣವಾದ ಪ್ರಶ್ನೆಗಳನ್ನು ಬೇಕಂತಲೇ ಕೇಳುವುದು ನಡೆಯುತ್ತದೆ. ಇದು ದಲಿತರನ್ನು ಶಿಕ್ಷಣದಿಂದ ಹೊರಹಾಕಲು ಜಾತಿವಾದಿ ಮನಸ್ಥಿತಿಗಳು ಮಾಡುವ ಹುನ್ನಾರ. ಈಗ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುವ ರೀತಿಯಲ್ಲಿ ವಿವಿಗಳಲ್ಲಿ ಜಾತೀಯತೆ, ಅಸ್ಪೃಶ್ಯತೆ ಆಚರಣೆಯಾಗುತ್ತಿದೆ. ಇದಕ್ಕಾಗಿ ಬಲಿಷ್ಠ ಕಾನೂನೊಂದು ಜಾರಿಗೆ ಬರಬೇಕಾದ ತುರ್ತು ಎದುರಾಗಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ

ಸದ್ಯದ ಅಟ್ರಾಸಿಟಿ ಕಾಯ್ದೆಯು ಕಣ್ಣಿಗೆ ಕಾಣುವ ದೌರ್ಜನ್ಯ, ಹಿಂಸೆ ಅಥವಾ ಅಪರಾಧ ಚಟುವಟಿಕೆಗಳನ್ನು ಪಟ್ಟಿ ಮಾಡುತ್ತದೆ. ಅಪರಾಧ ಎನಿಸದ, ಆದರೆ ವ್ಯಕ್ತಿಗತವಾಗಿ ದೌರ್ಜನ್ಯವನ್ನು ಉಂಟು ಮಾಡುವ ಮನೋಭಾವ ಅಥವಾ ಸ್ವಭಾವಗಳನ್ನು ಈ ಕಾಯ್ದೆ ಒಳಗೊಳ್ಳುವುದಿಲ್ಲ. ಕಾನೂನಿನ ಭಯ ಇಲ್ಲದ ಪ್ರಸ್ತುತ ಯುಜಿಸಿ ಮಾರ್ಗಸೂಚಿಗಳು ಹಲ್ಲಿಲ್ಲದ ಹುಲಿಯೇ ಸರಿ. ಈ ಎಲ್ಲ ಕಾರಣಗಳಿಗಾಗಿ ‘ರೋಹಿತ್ ಆಕ್ಟ್’ ಜಾರಿಯ ಆಗ್ರಹ ಬಂದಿದೆ.

ರೋಹಿತ್ ವೇಮುಲಾನ ಸಾಂಸ್ಥಿಕ ಹತ್ಯೆಯ ನಂತರ ತೆಲಂಗಾಣ ರಾಜ್ಯ ಕಾಂಗ್ರೆಸ್ ಸಮಿತಿ ಹಾಗೂ ನ್ಯಾಷನಲ್ ಕ್ಯಾಂಪೇನ್‌ ಆನ್ ದಲಿತ್ ಹ್ಯೂಮನ್ ರೈಟ್ಸ್ ವತಿಯಿಂದ ರೋಹಿತ್ ಕಾಯಿದೆಗೆ ಸಂಬಂಧಿಸಿದಂತೆ ಎರಡು ಕರಡುಗಳನ್ನು ರೂಪಿಸಲಾಗಿತ್ತು. ಆದರೆ ಅವುಗಳು ಕಾನೂನಾಗಿ ಜಾರಿಗೆ ತರಲೇ ಇಲ್ಲ. ಆ ಕರುಡುಗಳಲ್ಲಿನ ಅಂಶಗಳ ಕುರಿತು ಸುದೀರ್ಘ ಚರ್ಚೆಯಾಗುತ್ತಲೇ ಇದೆ.

ಜಾತಿವಾದಿ ಮನಸ್ಥಿತಿಗಳು ಮತ್ತು ಮತೀಯವಾದಿ ಶಕ್ತಿಗಳು ಅಧಿಕಾರ ಕೇಂದ್ರದಲ್ಲಿ ಇದ್ದಷ್ಟು ಕಾಲ ಇಂತಹ ಕಾಯ್ದೆಯನ್ನು ಜಾರಿಗೆ ತರುವುದು ಸವಾಲಿನ ಕೆಲಸ. ಆದರೆ ದಲಿತರ ಪರವಾಗಿ ನೀತಿಗಳು, ಕಾಯ್ದೆಗಳು ಅಷ್ಟು ಸುಲಭವಾಗಿ ಜಾರಿಗೆ ಬರುವುದಿಲ್ಲ. ಶೋಷಿತ ಸಮುದಾಯಗಳು ಅಷ್ಟೋ ಇಷ್ಟೋ ತಮ್ಮ ಹಕ್ಕನ್ನು ಪಡೆದುಕೊಂಡಿದ್ದರೆ, ಅದರಲ್ಲಿ ಚಳವಳಿ ಪಾತ್ರ ದೊಡ್ಡದಿದೆ. ರೋಹಿತ್ ಆಕ್ಟ್ ಜಾರಿಗೆ ಬರಬೇಕಾದರೆ ಎಲ್ಲ ಪ್ರಗತಿಪರ ಮತ್ತು ದಲಿತ ಚಳವಳಿಗಳು ಒಂದಾಗಿ ಒಕ್ಕೂಟ ಸರ್ಕಾರವನ್ನು ಆಗ್ರಹಿಸಬೇಕಿದೆ. ದೊಡ್ಡ ಜನಾಂದೋಲನ ಇಲ್ಲದೆ ರೋಹಿತ್ ಕಾಯ್ದೆ ಕನಸಿನ ಮಾತೇ ಆಗಿ ಉಳಿಯುತ್ತದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X