ಯುವಕನ ಮೃತದೇಹ ಎರಡು ತುಂಡಾಗಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹುಬ್ಬಳ್ಳಿ ಉಣಕಲ್ ಬಳಿಯ ರೈಲ್ವೇ ಹಳಿ ಮೇಲೆ ನಡೆದಿದೆ.
22 ವರ್ಷದ ನಾಗರಾಜ್ ಸಿದ್ದಪ್ಪ ಬಾರಕೇರ್ ಮೃತ ಯುವಕನೆಂದು ಹೇಳಲಾಗಿದ್ದು, ತಾಲೂಕಿನ ಕುಸುಗಲ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಯುವಕನ ಮೃತ ದೇಹ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದು, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ.
ಈ ವರದಿ ಓದಿದ್ದೀರಾ? ಧಾರವಾಡ | ಬಿಜೆಪಿಗರು ಅಸಲಿ ಗೋಡ್ಸೆಗಳು: ದೀಪಕ್ ಚಿಂಚೋರೆ ತಿರುಗೇಟು
ಯುವಕನ ಮೃತ ದೇಹ ರೈಲ್ವೇ ಹಳ್ಳಿಯ ಮೇಲೆ ಎರಡು ತುಂಡಾಗಿ ಬಿದ್ದಿದ್ದು, ಮೃತ ಯುವಕ ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯವಿದೆ.