ದಾವಣಗೆರೆ | ಸಿದ್ಧಗಂಗಾ ಶ್ರೀಗಳ ತ್ರಿವಿಧ ದಾಸೋಹ ಮಾನವ ಕುಲಕ್ಕೆ ಮಾದರಿ: ಜಯಮೃತ್ಯುಂಜಯ ಶ್ರೀ

Date:

Advertisements

ತುಮಕೂರಿನ ಸಿದ್ಧಗಂಗಾ ಮಠದ ನಡೆದಾಡುವ ದೇವರು ಶ್ರೀ ಶಿವಕುಮಾರ ಶ್ರೀಗಳ ತ್ರಿವಿಧ ದಾಸೋಹ, ಅವರ ಆದರ್ಶ ಜೀವನ ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ತಿಳಿಸಿದರು.

ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಶ್ರೀಗಳ ಆರನೇ ವರ್ಷದ ಸ್ಮರಣೋತ್ಸವ, ಪುತ್ಥಳಿ ಅನಾವರಣ ಹಾಗೂ ದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ವಿವಿಧ ಪೀಠದ ಶ್ರೀಗಳಿಗೆ, ಶರಣರಿಗೆ ಗೌರವ ಮರ್ಯಾದೆಗಳು ದೊರೆಯುತ್ತಿದೆ ಎಂದರೆ ಅದಕ್ಕೆ ತ್ರಿವಿಧ ದಾಸೋಹಿ ಎಂದೇ ಪ್ರಸಿದ್ಧಿ ಹೊಂದಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳು ಮಾಡಿದ ಸೇವೆ ಹಾಗೂ ಅವರು ಹಾಕಿಕೊಟ್ಟ ಜೀವನ ಮಾರ್ಗವೇ ಕಾರಣ ಎಂದು ಅಭಿಪ್ರಾಯಪಟ್ಟರು.

WhatsApp Image 2025 01 21 at 6.24.10 PM 1

ಕಾರ್ಯಕ್ರಮದಲ್ಲಿ ದಾವಣಗೆರೆ ವಿರಕ್ತಪೀಠದ ಬಸವಕುಮಾರ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಮರುಳ ಶಂಕರ ಗುರುಪೀಠದ ಸಿದ್ದ ಬಸವ ಕಬೀರ ಶ್ರೀಗಳು, ಚಿತ್ರದುರ್ಗ ಐಮಂಗಲದ ಹರಳಯ್ಯ ಪೀಠದ ಶ್ರೀ ಬಸವ ಹರಳಯ್ಯ ಶ್ರೀಗಳು, ಬೆಂಗಳೂರಿನ ಸರ್ವಧರ್ಮ ಸಮನ್ವಯಪೀಠದ ಸಂಗಮಾನಂದ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.

Advertisements

ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಜ. 30ರಂದು ದೇಶಕ್ಕಾಗಿ ಮಡಿದ ಹುತಾತ್ಮರ ನೆನಪಿನ ದಿನಾಚರಣೆ

ಮಾಜಿ ಸಂಸದ ಜಿ ಎಂ ಸಿದ್ದೇಶ್ವರ, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಯಶವಂತ ರಾವ್ ಜಾಧವ್, ಕಾಂಗ್ರೆಸ್ ಮುಖಂಡ ಬಕ್ಕೇಶ್, ದೂಡಾ ಸದಸ್ಯ ವಾಣಿ ಬಕ್ಕೇಶ್, ಬಿಜೆಪಿ ಮುಖಂಡ ಪುಲಾಯ್, ನವೀನ್ ಕುಮಾರ್, ಮಂಜುನಾಥ್ ಪಿಬಿ, ವೀರೇಶ್ ಹೆಚ್ ಎಸ್, ಜೆಎಚ್ ಪಟೇಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮುಸ್ತಫಾ, ದಾವಣಗೆರೆಯ ಸಿದ್ಧಗಂಗಾ ಶಿವಕುಮಾರ ಸರ್ಕಲ್ ಯುವಕರ ಸಂಘದ ಅಧ್ಯಕ್ಷ ಶಂಕರ್ ಶಿರೇಕರ್, ಸಮಿತಿಯ ಸದಸ್ಯರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp Image 2025 01 21 at 6.24.11 PM
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X