ಬಿಜೆಪಿ, ಆರ್‌ಎಸ್ಎಸ್, ಹಿಂದೂ ಮಹಾಸಭಾ ಎಂದಿಗೂ ದಲಿತರ ಪರವಾಗಿ ನಿಲ್ಲುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

Date:

Advertisements

ಬಿಜೆಪಿಯವರು ದಲಿತರ ಪರವಾಗಿ ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿಯವರು, ಆರ್‌ಎಸ್ಎಸ್, ಹಿಂದೂ ಮಹಾಸಭಾದವರು ಎಂದಿಗೂ ದಲಿತರ ಪರವಾಗಿ ನಿಲ್ಲುವುದಿಲ್ಲ. ಸದಾ ದಲಿತ ವಿರೋಧಿಗಳು. ನಾವು ಬಡವರು, ರೈತರು, ಕೂಲಿ ಕಾರ್ಮಿಕರು ಕಷ್ಟದಲ್ಲಿ ಬದುಕುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳ ನಡೆಸಿದರು.

ಬೆಳಗಾವಿ ಸಿಪಿಇಡ್ ಮೈದಾನದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿ ನೆನಪಿಗಾಗಿ ಆಯೋಜಿಸಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಈ ಸರ್ಕಾರಕ್ಕೆ ಇವರ ಬಗ್ಗೆ ಚಿಂತೆಯಿಲ್ಲ. ಕನಿಷ್ಠ ಬೆಂಬಲದ ಬೆಲೆ ಬಗ್ಗೆ ಆಲೋಚನೆ ಇಲ್ಲ, ರಸಗೊಬ್ಬರ ಬೆಲೆ ಇಳಿಸುವ ಯೋಚನೆ ಮಾಡಿಲ್ಲ. ಈ ಬಗ್ಗೆ ಮೋದಿ ಅವರು ಗಮನ ಹರಿಸಿಲ್ಲ, ಹರಿಸುವುದೂ ಇಲ್ಲ” ಎಂದರು.

“ಸೋನಿಯಾ ಗಾಂಧಿ ಅವರಂತೆ ನಾವು ಕೂಡ ತ್ಯಾಗ ಮಾಡಲು ಸಿದ್ಧರಿದ್ದೇವಾ ಎಂಬ ಪ್ರಶ್ನೆ ಮಾಡಿಕೊಳ್ಳಬೇಕು. ಈ ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪ್ರಾಣತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ರಾಜಕೀಯ ತ್ಯಾಗ ಮಾಡಿದ್ದಾರೆ. ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು ಆರ್‌ಟಿಐ, ಆಹಾರ ಭದ್ರತಾ ಕಾಯ್ದೆ, ಅರಣ್ಯ ಹಕ್ಕು, ಶೈಕ್ಷಣಿಕ ಹಕ್ಕು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ಬಡವರಿಗಾಗಿ ಅವರ ಏಳಿಗಾಗಿ ಕಾರ್ಯಕ್ರಮಗಳನ್ನು ಎನ್‌ಡಿಎ ಸರ್ಕಾರ ನೀಡಿದೆಯೇ” ಎಂದು ಪ್ರಶ್ನಿಸಿದರು.

Advertisements

“ನಮ್ಮ ಯೋಜನೆ ಟೀಕಿಸಿ, ಹೀಯಾಳಿಸಿ ಅಧಿಕಾರಕ್ಕೆ ಬಂದರು. ಕಾಂಗ್ರೆಸ್ ಪಕ್ಷ ಸದಾ ಬಡವರಿಗಾಗಿ ಇದೆ. ಇಂದಿರಾ ಗಾಂಧಿ ಹತ್ತು ಅಂಶಗಳ ಕಾರ್ಯಕ್ರಮ ತಂದರು. ನಾನು ಬ್ಲಾಕ್ ಮಟ್ಟದ ಅಧ್ಯಕ್ಷನಾಗಿದ್ದೆ. ಇಂದು ಎಲ್ಲ ನಾಯಕರು ಸೇರಿ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಇದು ಕಾಂಗ್ರೆಸ್ ಗುಣ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್

ಕಾಂಗ್ರೆಸ್ ಗಟ್ಟಿಯಾಗಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ

“ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷವಾಗಿದೆ. ಆ ಸ್ಥಾನವನ್ನು ನಮ್ಮ ನಾಯಕರು ನನಗೆ ನೀಡಿರುವುದು ನನ್ನ ಪುಣ್ಯ. ಡಿ.26ರಂದು ನಡೆದ ನವಸತ್ಯಾಗ್ರಹ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಬೆಳಗಾವಿಯಲ್ಲಿ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಿತ್ತು. ದೇಶದಲ್ಲಿ ಎಲ್ಲಾದರೂ ಕಾಂಗ್ರೆಸ್ ಗಟ್ಟಿಯಾಗಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ. ನಿಮ್ಮ ಪರಿಶ್ರಮಕ್ಕೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹೇಳಿದರು.

ಬಿಜೆಪಿ ಹಾಗೂ ಆ‌ರ್‌ಎಸ್‌ಎಸ್‌ ವಿರುದ್ಧ ಹೋರಾಟ ಮಾಡುವ ಶಕ್ತಿಶಾಲಿ ಎಂದರೆ ಪ್ರಿಯಾಂಕಾ ಗಾಂಧಿ. ಯಾರಿಗೂ ಹೆದರದ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಎಂದರೆ ಪ್ರಿಯಾಂಕಾ ಗಾಂಧಿ. ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಇವರು ದೇಶದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಈ ಗಾಂಧಿ ಕುಟುಂಬದ ಬಗ್ಗೆ ಅಮಿತ್ ಶಾ, ಮೋದಿ ಹಾಗೂ ಅವರ ಚಮಚಾಗಳು ಟೀಕೆ ಮಾಡುತ್ತಾರೆ” ಎಂದು ಕುಟುಕಿದರು.

ಬೆಳಗಾವಿ ಕಾಂಗ್ರೆಸ್

“ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿ ಒಂದು ಮಾತು ಹೇಳಿದ್ದರು. ಬೆಳಗಾವಿಯಲ್ಲಿ ನನಗೆ ಸಿಕ್ಕ ಗೌರವ ಬೇರೆ ಕಡೆ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಇಲ್ಲಿ ನನಗೆ ಸಿಕ್ಕ ಗೌರವಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದರು. ನಾನು ಬದುಕಿದರೂ ಅಥವಾ ಸತ್ತರೂ ಅದು ಭಾರತಕ್ಕಾಗಿಯೇ ಎಂದು ಗಾಂಧಿ ಹೇಳಿದ್ದಾರೆ. ಅಂತಹವರನ್ನು ಈಗ ಟೀಕೆ ಮಾಡಲಾಗುತ್ತಿದೆ. ಗಾಂಧಿ ಅವರಿಗೆ ಗುಂಡಿಟ್ಟು ಕೊಂದಿದ್ದು ಗೋಡ್ಸೆ. ಗೋಡ್ಸೆ ಯಾರ ಶಿಷ್ಯ? ಸಾರ್ವಕರ್ ಶಿಷ್ಯ. ಮೋದಿ ಹಾಗೂ ಶಾ ಅವರು ಮಾತನಾಡುತ್ತಾ ಗಾಂಧಿ ಅವರ ಬಗ್ಗೆ ಕಾಳಜಿ ಇಲ್ಲ. ಗಾಂಧಿ ಗುಜರಾತಿನಲ್ಲಿ ಹುಟ್ಟಿದರೂ ಗಾಂಧಿ ಅವರನ್ನು ಅನುಸರಿಸುವುದಿಲ್ಲ, ಅವರು ಪೂಜಿಸುವುದು ಗಾಂಧಿಯವರನ್ನು ಕೊಂದ ಗೋಡ್ಸೆ ಅವರನ್ನು” ಎಂದು ಹರಿಹಾಯ್ದರು.

“ಸಾರ್ವಕರ್ ಮಾತ್ರ ನಾಯಕ ಗಾಂಧಿಯಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಬಿಜೆಪಿಯವರು ಗಾಂಧಿ ಮತ್ತು ನೆಹರೂ, ಸರ್ದಾರ್ ಪಟೇಲ್ ಹಾಗೂ ನೆಹರೂ, ಅಂಬೇಡ್ಕರ್ ಹಾಗೂ ನೆಹರೂ ಮಧ್ಯೆ ಜಗಳವಾಗಿತ್ತು ಎಂದು ಸುಳ್ಳು ಹೇಳುತ್ತಾರೆ. ಆಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಅಂಬೇಡ್ಕರ್ ಅವರು ಕೂಡ ಬೆಳಗಾವಿಯಲ್ಲಿ 1924ರಲ್ಲಿ ಸಭೆ ಮಾಡಿದ್ದರು. ಆ ಸಭೆಗೂ ನೂರು ವರ್ಷಗಳು ಪೂರ್ಣಗೊಂಡಿದೆ” ಎಂದರು.

ಅಂಬೇಡ್ಕರ್‌ ಹೆಸರಲ್ಲಿ ಜಗಳ ಹಚ್ಚುತ್ತಿದೆ ಬಿಜೆಪಿ

“ಕಾಂಗ್ರೆಸ್ ಅಂಬೇಡ್ಕರ್‌ ಅವರನ್ನು ಅಪಮಾನಿಸಿದ್ದಾರೆ ಎಂದು ಬಿಜೆಪಿ ಸುಳ್ಳು ಹೇಳುತ್ತಾರೆ. ಇದು ಸಾಧ್ಯವಿಲ್ಲ. ಸಂಸತ್ತಿನ ಎದುರು ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿದ್ದು ಇಂದಿರಾ ಗಾಂಧಿ ಅವರ ಕಾಲದಲ್ಲಿ. ಆಗ ಬಿಜೆಪಿಯವರು ಇದ್ದಾರಾ? ಆದರೆ, ಈ ಮೋದಿ ಅಂಬೇಡ್ಕರ್‌ ಅವರ ಪ್ರತಿಮೆಯನ್ನು ಸಂಸತ್ತಿನ ಮೂಲೆಯಲ್ಲಿ ಹಾಕಿದ್ದಾರೆ. ಅಂತಹ ಮನುಷ್ಯ ಸಂವಿಧಾನಕ್ಕೆ ನಮಸ್ಕಾರ ಮಾಡುವ ನಾಟಕ ಮಾಡುತ್ತಾರೆ. ಸಂವಿಧಾನಕ್ಕೆ ಬೆಂಕಿ ಇಟ್ಟಂತಹ ಜನ, ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಸುಟ್ಟವರು ಬಿಜೆಪಿ, ಆರ್ ಎಸ್ಎಸ್ ಹಾಗೂ ಹಿಂದೂ ಮಹಾಸಭಾದವರು. ಅಂಬೇಡ್ಕರ್ ವಿಚಾರದಲ್ಲಿ ನಮ್ಮಲ್ಲಿಯೇ ಜಗಳ ಹಚ್ಚಲು ಪ್ರಯತ್ನಿಸುತ್ತಿದ್ದಾರೆ” ಎಂದು ಟೀಕಿಸಿದರು.

“ಅಂಬೇಡ್ಕರ್ ಅವರನ್ನು ಯಾರು ಸೋಲಿಸಿದರು? ಎರಡು ಬಾರಿ ಅಂಬೇಡ್ಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ತಂದವರು ಕಾಂಗ್ರೆಸಿನವರು. ನೆಹರೂ ಹಾಗೂ ಗಾಂಧಿಜಿ ಅವರು ರಾಜ್ಯಸಭಾ ಸದಸ್ಯರಾಗಿದ್ದ ಎಂ.ಆರ್ ಜೈಕರ್ ಅವರಿಂದ ರಾಜೀನಾಮೆ ಕೊಡಿಸಿ ಅಂಬೇಡ್ಕರ್ ಅವರನ್ನು ಆರಿಸಲಾಗಿತ್ತು. ನೀವುಗಳು ರಾಮಲೀಲಾ ಮೈದಾನದಲ್ಲಿ ಸಂವಿಧಾನ, ಅಂಬೇಡ್ಕರ್ ಫೋಟೋ ಸುಟ್ಟವರು ನಮಗೆ ಪಾಠ ಮಾಡಬೇಡಿ. ನಾವು ಬೆಂಕಿ ಇದ್ದಂತೆ ನೀವು ನಮ್ಮನ್ನು ಕೆಣಕಿದರೆ ಸುಟ್ಟು ಹೋಗುತ್ತೀರಿ. ಜಗಳ ತಂದಿಟ್ಟು ಬದುಕಲು ಸಾಧ್ಯವಿಲ್ಲ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಸಮ್ಮಾನ ನೀಡಿದೆ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷವೋ ಅಥವಾ ಬಿಜೆಪಿಯೋ? ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಮನುಸ್ಮೃತಿಯಂತೆ ಇಲ್ಲ, ಇದನ್ನು ಒಪ್ಪಲ್ಲ, ತ್ರಿವರ್ಣ ಧ್ವಜ ಒಪ್ಪಲ್ಲ ಎಂದು ಹೇಳಿದವರು ನೀವುಗಳು” ಎಂದು ತೀವ್ರ ವಾಗ್ದಾಳಿ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

Download Eedina App Android / iOS

X