ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಇದೀಗ, ಧಾರವಾಡವನ್ನು ಅಧಿಕೃತವಾಗಿ ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ಸರ್ಕಾರ ಘೋಷಿಸಿದೆ. ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಹಲವಾರು ವರ್ಷಗಳಿಂದ ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕೆಂಬ ಒತ್ತಾಯವಿತ್ತು. ಆದರೆ, ಯಾವ ಸರ್ಕಾರವು ಆ ಬಗ್ಗೆ ಹೆಚ್ಚು ಗಮನ ವಹಿಸರಲಿಲ್ಲ. ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಎರಡೂ ನಗರಗಳು ಬೆಳೆಯುತ್ತಿದ್ದು, ನಗರಗಳು ವಿಸ್ತರಣೆಗೊಳ್ಳುತ್ತಿವೆ. ಈ ಹಿನ್ನೆಲೆ, ಎರಡೂ ನಗರಗಳನ್ನು ಪ್ರತ್ಯೇಕಿಸಿ, ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕೆಂಬ ಒತ್ತಾಯ ಮತ್ತೆ ಮುನ್ನೆಲೆ ಬಂದಿತ್ತು. ಅದರಂತೆ, ಸರ್ಕಾರ ಪಾಲಿಕೆ ವಿಂಗಡಣೆಗೆ ಸಮ್ಮತಿಸಿ, ಕಳೆದ ಸಚಿವ ಸಂಪುಟದಲ್ಲಿ ನಿರ್ಧಾರ ಅಂಗೀಕರಿಸಿತ್ತು. ಇದೀಗ, ಗೆಜೆಟ್ ನೋಟಿಫಿಕೇಷನ್ ಮೂಲಕ ಅಧಿಕೃತವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ಘೋಷಿಸಿದೆ.
ಧಾರವಾಡಕ್ಕೆ ಪ್ರತ್ಯೇಕವಾದ ಅಧಿಕೃತ ಮಹಾನಗರ ಪಾಲಿಕೆ ಘೊಷಿಸಲಾಗಿದೆ. ಈ ವಿಚಾರವಾಗಿ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದರೆ ಲಿಖಿತ ರೂಪದಲ್ಲಿ 30 ದಿನಗಳ ಒಳಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಸಲ್ಲಿಸಬೇಕು ಎಂದ ಸರ್ಕಾರ ಹೇಳಿದೆ.