ಅರುಣಾಚಲ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದ 12 ಆನೆಗಳನ್ನು ಗುಜರಾತ್‌ನಲ್ಲಿರುವ ಅಂಬಾನಿ ಒಡೆತನದ ವಂತಾರಾ ಪ್ರಾಣಿ ಸಂರಕ್ಷಣೆ ಮತ್ತು ಆರೈಕೆ ಕೇಂದ್ರಕ್ಕೆ ರವಾನಿಸಲಾಗಿದೆ. ಆನೆಗಳನ್ನು ಆ್ಯಂಬುಲೆನ್ಸ್‌ಗಳಲ್ಲಿ ಅಸ್ಸಾಂ ಮೂಲಕ ವಂತಾರಾಗೆ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆನೆಗಳನ್ನು ವಂತಾರಾಗೆ ರವಾನೆ ಮಾಡುತ್ತಿರುವುದನ್ನು ಪ್ರಾಣಿ ಹಕ್ಕುಗಳ ಹೋರಾಟಗಾರರು ಮತ್ತು ವಿಪಕ್ಷಗಳು ವಿರೋಧಿಸಿವೆ.
ವಂತಾರಾ ಪ್ರಾಣಿ ಸಂರಕ್ಷಣೆ ಮತ್ತು ಆರೈಕೆ ಕೇಂದ್ರವು ರಾಧೇಕೃಷ್ಣ ದೇವಸ್ಥಾನ ಆನೆ ಕಲ್ಯಾಣ ಟ್ರಸ್ಟ್ ಅಡಿಯಲ್ಲಿದ್ದು, ಅದರನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿದ್ದಾರೆ. ಸೆರೆ ಹಿಡಿಯಲಾದ ಆನೆಗಳನ್ನು ಅರುಣಾಚಲ ಪ್ರದೇಶದ ನಮಸಾಯಿಯಿಂದ ಗುಜರಾತ್‌ನ ಜಾಮ್ ನಗರದಲ್ಲಿರುವ ವಂತಾರಾ ಕೇಂದ್ರಕ್ಕೆ ಕರೆದೊಯ್ದಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆನೆಗಳನ್ನು ಸುಮಾರು 3,500 ಕಿಮೀ ದೂರ ಸಾಗಿಸಲಾಗಿದೆ.
ಅಪ್ಪರ್ ಅಸ್ಸಾಂ ಮತ್ತು ಪೂರ್ವ ಅರುಣಾಚಲ ಪ್ರದೇಶದ ಹಚ್ಚ ಹಸಿರಿನ ಜೀವವೈವಿಧ್ಯತೆಯುಳ್ಳು ಪ್ರದೇಶದಿಂದ ಆನೆಗಳನ್ನು ಸೆರೆ ಹಿಡಿದು ಜಾಮ್‌ನಗರದ ಮರುಭೂಮಿ ಪ್ರದೇಶಕ್ಕೆ ಆನೆಗಳನ್ನು ಸಾಗಿಸಲಾಗಿದೆ. ಆನೆಗಳ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. 3,500 ಕಿ.ಮೀ ಸಾಗಾಟವು ಪ್ರಕೃತಿಯ ಮೇಲಿನ ಶೋಷಣೆಯನ್ನು ಎತ್ತಿ ತೋರಿಸುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
From lush biodiversity in Upper Assam & Eastern Arunachal to the arid deserts of Jamnagar—30 Schedule I #Elephants are being uprooted for the whims of the richest Indian’s son.
— Sayantani (@SayantaniINC) January 20, 2025
This road journey of 3500km highlights the exploitation of nature for privilege. @narendramodi… pic.twitter.com/LjgT9gPYkp
ಆನೆಗಳನ್ನು ಗುಜರಾತ್‌ಗೆ ಸಾಗಿಸಲು ಅವಕಾಶ ನೀಡಿದ ಅಸ್ಸಾಂನ ಬಿಜೆಪಿ ಸರ್ಕಾರದ ವಿರುದ್ಧ ಪ್ರಾಣಿ ಹಕ್ಕುಗಳ ಹೋರಾಟಗಾರರು ಮತ್ತು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. “ಪ್ರಾಣಿಗಳನ್ನು ತಮ್ಮ ಪ್ರಾಂತ್ಯದಿಂದ ಬೇರೆಲ್ಲಿಗೂ ರವಾನೆ ಮಾಡಲು ಅವಕಾಶ ನೀಡಬಾರದು. ಕೊಂಡೊಯ್ದಿರುವ ಆನೆಗಳನ್ನು ಮರಳಿ ತರಬೇಕು. ಅವುಗಳ ರಕ್ಷಣೆ ಮತ್ತು ಆರೈಕೆಯ ಜವಾಬ್ದಾರಿಯನ್ನು ಅಸ್ಸಾಂ ಸರ್ಕಾರವೇ ಹೊತ್ತುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.