ರೆಮ್ಸ್ ತಂತ್ರಾಂಶದಲ್ಲಿ ಹಾಫ್ ರಿಜೆಕ್ಷನ್ ಪರ್ಮಿಟ್ ಕ್ಯಾನ್ಸಲೇಷನ್ ಮಾಡುವಂತೆ ಚಿತ್ರದುರ್ಗ ಎಪಿಎಂಸಿ ದವಸಧಾನ್ಯ ಖರೀದಿದಾರರ ಒಕ್ಕೂಟದಿಂದ ನೀಡಿದ್ದ ಜನವರಿ 24ರಿಂದ ಅನಿರ್ದಿಷ್ಟಾವಧಿ ಮುಷ್ಕರ, ಮೆಕ್ಕಜೋಳ ಮಾರುಕಟ್ಟೆ ಬಂದ್ ಕರೆ ಹಿಂಪಡೆಯಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಕೃಷ್ಣಪ್ಪ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಪ್ರಕಟಣೆಗೆ ತಿಳಿಸಿರುವ ಅವರು, “ರೆಮ್ಸ್ ತಂತ್ರಾಂಶದಲ್ಲಿ ಹಾಫ್ ರಿಜೆಕ್ಷನ್ ಪರ್ಮಿಟ್ ಕ್ಯಾನ್ಸಲೇಷನ್ ಮಾಡುವಂತೆ ಕೋರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪುರಸ್ಕರಿಸದಿದ್ದರೆ ಇದೇ ಜನವರಿ 24ರಿಂದ ಮೆಕ್ಕಜೋಳ ಟೆಂಡರ್‌ನಲ್ಲಿ ಭಾಗವಹಿಸುವುದಿಲ್ಲ” ಎಂದು ತಿಳಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಆಟೋ ನಿಲ್ದಾಣ ತೆರವುಗೊಳಿಸದಂತೆ ಚಾಲಕರ ಮನವಿ
“ರೆಮ್ಸ್ ತಂತ್ರಾಂಶದಲ್ಲಿ ಹಾಫ್ ರಿಜೆಕ್ಷನ್ ಪರ್ಮಿಟ್ ಕ್ಯಾನ್ಸಲೇಷನ್ ಮಾಡುವಂತೆ ಸಲ್ಲಿಸಿದ್ದ ಮನವಿಗೆ, ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಸಕಾರಾತ್ಮವಾಗಿ ಸ್ಪಂದಿಸಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎಪಿಎಂಸಿಗಳಲ್ಲಿ ಮೆಕ್ಕಜೋಳ ಟೆಂಡರ್ ಹಾಗೂ ಖರೀದಿ ಎಂದಿನಂತೆ ನಡೆಯಲಿದೆ” ಎಂದು ತಿಳಿಸಿದ್ದಾರೆ.