ಸುಮಾರು 20-25 ವರ್ಷದಿಂದ ಹಾಸನ ಜಿಲ್ಲೆ, ಹಾಸನ ತಾಲ್ಲೂಕಿನ ಕಸಬ ಹೋಬಳಿಯ ದೊಡ್ಡ ಬಾಗನಹಳ್ಳಿ ಸಮೀಪವಿರುವ ಅಗಿಲೆ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಯ್ಯ ಕುಟುಂಬದವರು ವಾಸವಾಗಿದ್ದಾರೆ.

ಸುತ್ತಮುತ್ತಲಿನ ಸವರ್ಣೀಯರು ಕೃಷ್ಣಯ್ಯ ಅವರ ಜಮೀನು ಅಳತೆ ಮಾಡಲು ಹಾಗೂ ಬೆಳೆ ಬೆಳೆಯಲು ಬಿಡುತ್ತಿರಲಿಲ್ಲ. ಕುಟುಂಬದವರಿಗೆ 1981-82 ರಲ್ಲಿ ಸರ್ಕಾರದಿಂದ ಸರ್ವೇ ನಂ. 226/1ರಲ್ಲಿ 2 ಎಕರೆ 6 ಗುಂಟೆ ಜಮೀನು ದರಖಾಸ್ತು ಯೋಜನೆಯಲ್ಲಿ ಮಂಜೂರಾಗಿರುತ್ತದೆ.
ಈ ಜಮೀನನ್ನು ಅಳತೆ ಮಾಡಿ ಹದ್ದು ಬಸ್ತು ಮಾಡಿಸಲು ಅರ್ಜಿ ನೀಡಿದ್ದು, ಪರವಾನಗಿ ಭೂಮಾಪಕರು ಸ್ಥಳಕ್ಕೆ ಬಂದು ಭೂಮಿಯನ್ನು ಅಳತೆ ಮಾಡಲು ಮುಂದಾದಾಗ, ಅಲ್ಲಿ ಮುಳ್ಳಿನ ಗಿಡ ಗಂಟೆಗಳು ಬೆಳೆದಿದ್ದು ಭೂಮಿಯನ್ನು ಅಳತೆ ಮಾಡಲು ಸಾಧ್ಯವಾಗಿರಲಿಲ್ಲವೆಂದು ಅರ್ಜಿಯನ್ನು ವಿಲೆವಾರಿ ಮಾಡಿದರು ಎಂದು ಕುಟುಂಬಸ್ಥರು ಮಾಹಿತಿ ತಿಳಿಸಿದರು.

ಕಳೆದ ತಿಂಗಳು ಅಂದರೆ ದಿನಾಂಕ:-06-11-2024 ರಂದು ಜಮೀನಿನಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ತೆರವುಗೊಳಿಸುತ್ತಿರುವ, ಸಂಧರ್ಭದಲ್ಲಿ ಅಕ್ಕ ಪಕ್ಕದ ಜಮೀನಿನವರು ಈ ಜಾಗ ಸರ್ಕಾರಿ ಜಮೀನು ಇದನ್ನೇಕೆ ತೆರವುಗೊಳಿಸುತ್ತಿರುವೆ ಎಂದು ಜಮೀನು ಮಾಲೀಕರಾದ ಕೃಷ್ಣಯ್ಯ ಅವರ ಮೇಲೆ ಐದಾರು ಜನ ಹಲ್ಲೆ ಮಾಡಿದ್ದರು ಎಂದು ಕುಟುಂಬದವರು ಈದಿನ.ಕಾಮ್ ಗೆ ಮಾಹಿತಿ ನೀಡಿದರು.

ಇದರಿಂದ ಮನನೊಂದ ಕುಟುಂಬದವರು ಅಂದಿನ ದಿನವೇ ಭೀಮ್ ಆರ್ಮಿ ಸಂಘಟನೆಗೆ ಮನವಿ ಸಲ್ಲಿಸಿದ್ದರು. ಆ ದಿನವೇ ಸಂಘಟನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹಲ್ಲೆ ಮಾಡಿರುವವರನ್ನು ಬಂಧಿಸಲಾಗಿತ್ತು. ಈಗ ಎರಡ್ಮೂರು ತಿಂಗಳಲ್ಲಿ ಭೀಮ್ ಆರ್ಮಿ ಸಂಘಟನೆ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಜಮೀನು ಅಳತೆ ಮಾಡಲು ಯಶಸ್ವಿಗೊಂಡಿದೆ.
ಇದನ್ನೂ ಓದಿದ್ದೀರಾ?ಹಾಸನ | ಗೊಟ್ರುವಳ್ಳಿ ಗ್ರಾಮದ ಖಾತೆ ಸಂಖ್ಯೆ 97/112ರ ನಿವೇಶನ ಮರುಸರ್ವೇಗೆ ಜಿಲ್ಲಾಧಿಕಾರಿ ಆದೇಶ
ಇದಕ್ಕೆ ಸಂಭಂದಿಸಿದಂತೆ ಹಲ್ಲೆ ಮಾಡಿದವರ ಮೇಲೆ ಕೇಸು ದಾಖಲಾಗಿ ವಿಚಾರಣೆ ಹಂತದಲ್ಲಿದ್ದಾಗ, ಕೆಲವು ದಿನಗಳಿಂದ ಅಕ್ಕಪಕ್ಕದ ಜಮೀನಿನವರು ಯಾವುದೇ ತೊಂದರೆ ನೀಡುವುದಿಲ್ಲ ಎಂದಾಗ, ಕೃಷ್ಣಯ್ಯ ಅವರ ಜಮೀನನ್ನು ಅಳತೆ ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೊಂದಿಗೆ, ಜಮೀನನ್ನು ಅಳತೆ ಮಾಡಿಸಲಾಗಿದೆ ಎಂದು ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಈದಿನ.ಕಾಮ್ ಜೊತೆ ಮಾಹಿತಿ ನೀಡಿದರು.
ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಸಮಾಜದಲ್ಲಿ ಜನರು ಎಲ್ಲರೂ ಒಂದಾಗಿ ಕೂಡಿ ಬಾಳಿದರೆ ಈ ರೀತಿಯ ಘಟನೆಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಬಹುದು.
ಹೊಳಲ್ಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆ ರಾಮಗಿರಿ ವ್ಯಾಪ್ತಿಯಲ್ಲಿ ಬರುವ ಅಂಬ್ಲಿಹಳ್ಳಿ ವ್ಯಾಪ್ತಿಯಲ್ಲಿ ಬರುವ ಮಾದೇಗೌಡ್ರ ಜಾಮೀನು ಅಳತೆ ಮಾಡಿಸಿದಾಗ ಪಕ್ಕದ ಜಮೀನಿನ ಜಾಗವು ಬಂದಿರುತ್ತದೆ ,ಪಕ್ಕದ ಜಮೀನಿನ ಮಾಲಿಕರೂ ಅಳತೆ ಮಾಡಿಸಿದಾಗಲೂ ಸಹ ಅವರ ಜಮೀನಿನ ಜಾಗ ಬಂದಿದ್ದರೂ ಬಿಟ್ಟುಕೊಡುತ್ತಿಲ್ಲ