- ಪ್ರಶಾಂತ್, ಶ್ರೀಕಾಂತ್ ಹಾಗೂ ವಸಂತ್ನನ್ನು ಬಂಧಿಸಿದ ಮಹದೇವಪುರ ಪೊಲೀಸರು
- ಮೇ 25 ರಂದು ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಿದ ಸಹಚರರು
ಸಹಚರರಿಗೆ ಧಮ್ಕಿ ಹಾಕಿದ ಹಿನ್ನೆಲೆ, ರೌಡಿಶೀಟರ್‌ನನ್ನು 40 ಸೆಕೆಂಡ್‌ನಲ್ಲಿ 26 ಬಾರಿ ಕೊಚ್ಚಿ ಕೊಲೆ ಮಾಡಿದ ಘಟನೆ ಮಹದೇವಪುರದಲ್ಲಿ ನಡೆದಿದೆ.
ಮೇ 25 ರಂದು ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಕೊಲೆ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ರೌಡಿಶೀಟರ್ ರೇಣುಕುಮಾರ್ ಕೊಲೆಯಾದ ವ್ಯಕ್ತಿ. ಈತನ ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿಕೊಂಡು ರೌಡಿಶೀಟರ್‌ನನ್ನು ಕೊಲೆ ಮಾಡಿದ್ದಾರೆ.
ರೌಡಿಶೀಟರ್ ರೇಣುಕುಮಾರ್ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ನಾನಾ ಪ್ರಕರಣಗಳಡಿ ಇತನು ಜೈಲು ಪಾಲಾಗಿದ್ದನು. ಕಳೆದ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು.
ರೌಡಿಶೀಟರ್ ರೇಣುಕುಮಾರ್ ಜೈಲಿನಿಂದ ಹೊರಬಂದು ತನ್ನ ಸಹಚರರಿಗೆ ‘ನಾನು ಜೈಲಿನಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಾಸ್ತಿಯಾಗಿದೆ. ನೀವು ನನ್ನ ಶಿಷ್ಯಂದಿರು, ಇನ್ಮುಂದೆ ಏನು ಮಾಡಬೇಕಾದರೂ ನನ್ನ ಅನುಮತಿ ಪಡೆಯಬೇಕು ಎಂದು ಪ್ರಶಾಂತ್ ಮತ್ತು ಶ್ರೀಕಾಂತ್ಗೆ ಧಮ್ಕಿ ಹಾಕಿದ್ದನು’ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಗಳನ್ನು ತಡವಾಗಿ ಮನೆಗೆ ಬಿಟ್ಟ ಶಾಲಾ ವಾಹನ; ಶಾಲೆಯ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು
ಇದರಿಂದ ಕೋಪಗೊಂಡ ಪ್ರಶಾಂತ್ ಮತ್ತು ಶ್ರೀಕಾಂತ್ ಪ್ಲ್ಯಾನ್ ಮಾಡಿ, ಮೇ 25ರ ರಾತ್ರಿ ಅವನ ಮೇಲೆ ಅಟ್ಯಾಕ್ ಮಾಡಿ ಕೇವಲ 40 ಸೆಕೆಂಡ್‌ನಲ್ಲಿ 26 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಸದ್ಯ ಮಹದೇವಪುರ ಪೊಲೀಸರು ಪ್ರಶಾಂತ್, ಶ್ರೀಕಾಂತ್, ವಸಂತ್ರನ್ನು ಬಂಧಿಸಿದ್ದಾರೆ.