ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಗೆ 21 ವರ್ಷ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್(ಎಫ್‌ಟಿಎಸ್‌ಟಿ-ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ)-1 ಈ ತೀರ್ಪು ನೀಡಿದೆ.
ದಾವಣಗೆರೆ ಜಿಲ್ಲೆಯ ಹೊನ್ನಳ್ಳಿಯ ಸಂತೋಷ್ ಶಾಂತಕುಮಾರ್ ಎಂಬಾತ 2021ರಲ್ಲಿ ಅಪ್ರಾಪ್ತೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ. 15 ವರ್ಷದ ಸಂತ್ರಸ್ತೆ ಶಿವಮೊಗ್ಗ ಸಖಿ ಕೇಂದ್ರಕ್ಕೆ ದಾಖಲಾಗುವ ಅಗತ್ಯ ಬಿದ್ದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ 2015ರಲ್ಲಿ ಹೊನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಶ್ರೀರಾಮ್ ನಾರಾಯಣ ಹೆಗ್ಡೆಯವರು 21 ವರ್ಷ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಮಳೆಯಿಲ್ಲದ ಬೆಳೆಯಿಲ್ಲ, ಹೆಣ್ಣು ಇಲ್ಲದ ಮನೆಯಿಲ್ಲ: ಡಾ. ನಾಗರಾಜ್
ಹೊನ್ನಳ್ಳಿ ಪೊಲೀಸ್ ಠಾಣೆಯ ಆಗಿನ ಸಿಪಿಐ ದೇವರಾಜ್ ಟಿ ವಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಪೋಕ್ಸೊ ಆರೋಪವನ್ನು ದೃಢೀಕರಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದು, ಸಂತ್ರಸ್ತೆಗೆ ಹೆಚ್ಚುವರಿ ಪರಿಹಾರವಾಗಿ ₹5 ಲಕ್ಷ ನೀಡುವಂತೆ ನ್ಯಾಯಾಧೀಶರು ಸರ್ಕಾರಕ್ಕೆ ಸೂಚನೆ ನೀಡಿದರು.