ಐದು ವರ್ಷ ಮಗುವಿಗೆ ಚಾಕೊಲೇಟ್ ತೋರಿಸಿ, ಲೈಂಗಿಕ ಕಿರುಕುಳ ಎಸಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಭಿಕ್ಷೆ ಬೇಡುತ್ತಾ ಓಡಾಡುತ್ತಿದ್ದ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು, ಆತನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂತ್ರಸ್ತ ಬಾಲಕಿ ಮತ್ತೋರ್ವ ಬಾಲಕಿ ಜೊತೆ ಓಡಾಡುತ್ತಿದ್ದಾಗ ಆರೋಪಿ ಮಗುವಿಗೆ ಚಾಕೊಲೇಟ್ ಆಸೆ ತೋರಿಸಿದ್ದಾನೆ. ಚಾಕೊಲೇಟ್ ತೋರಿಸಿದ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ.
ಆ ವೇಳೆಗೆ, ಮಗುವನ್ನು ಹುಡುಕಿಕೊಂಡು ಬಂದ ಮತ್ತೋರ್ವ ಬಾಲಕಿಯನ್ನು ಕಂಡು ಆರೋಪಿ ಓಡಿ ಹೋಗಿದ್ದಾನೆ. ಬಳಿಕ, ಮನೆಗೆ ಮಗುವನ್ನು ಕರೆದುಕೊಂಡು ಬಂದ ಬಾಲಕಿ, ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೋಷಕರಿಗೆ ತಿಳಿಸಿದ್ಧಾಳೆ. ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.