ವಿದ್ಯಾರ್ಥಿಗಳು ತಮ್ಮ ನಿತ್ಯದ ಓದಿನೊಂದಿಗೆ ಕಾನೂನು ಅರಿವು ಹಾಗೂ ಹಕ್ಕುಗಳ ಬಗ್ಗೆ ಜ್ಞಾನ ಹೊಂದಿರುವುದು ಅಗತ್ಯವಾಗಿದೆ ಎಂದು ಡಿವೈಎಸ್‌ಪಿ ಬಲ್ಲಪ್ಪ ನಂದಗಾಂವ್ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದೌರ್ಜನ್ಯ ಸಮಿತಿಯ ಜಿಲ್ಲಾ ಸದಸ್ಯ ಬೀಜ್ಜುರೊ ಗ್ರಾಮದ ಮಲ್ಲು ತಳವಾರ ಅವರ ಮನವಿ ಮೇರೆಗೆ ಸ್ಪಂದಿಸಿ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಕಾನೂನು ಅರಿವು ಹಾಗೂ ಹಕ್ಕುಗಳ ಕುರಿತು ಮಾತನಾಡಿದರು.
“ಕೇವಲ ಪುಸ್ತಕದ ಚಟುವಟಿಕೆಗಳಿಗೆ ಒತ್ತುಕೊಡದೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಿನ ಅರಿವು ಅಗತ್ಯವಿದೆ. ಇತ್ತೀಚಿನ ಬದಲಾದ ಸ್ಥಿತಿಯಲ್ಲಿ ಕಾನೂನು ಹಾಗೂ ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪೋಕ್ಸೊ ಕಾಯಿದೆ. ಮೂಲಭೂತ ಹಕ್ಕುಗಳು, ಮಾನವ ಕಳ್ಳ ಸಾಗಣೆ, ಸಮಾಜದಲ್ಲಿ ಉಂಟಾಗುವ ಅಶಾಂತಿಯಂತ ಘಟನೆಗಳನ್ನು ತಡೆಯುವಲ್ಲಿ ಕಾನೂನಿನಲ್ಲಿ ಏನು ಹೇಳಲಾಗಿದೆ ಎನ್ನುವ ಅರಿವು ಮೂಡಿಸಿಕೊಳ್ಳಬೇಕು. ಮಕ್ಕಳು ಶೈಕ್ಷಣಿಕವಾಗಿಯೂ ಒಂದು ಹೆಜ್ಜೆ ಮುಂದುಬಂದು ಶಾಲೆಯಲ್ಲಿ ಹಿಂದಿನ ವರ್ಷದ ಫಲಿತಾಂಶದ ದಾಖಲೆಯನ್ನು ಮುರಿಯುತ್ತೇನೆ ಎನ್ನುವ ಛಲದಿಂದ ಮುನ್ನುಗ್ಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ತೋಟಗಾರಿಕೆ ಬೆಳೆ ಜತೆಗೆ ಉಪಕಸಬು ಮಾಡಿ ಆದಾಯ ವೃದ್ಧಿಸಿಕೊಳ್ಳಬೇಕು: ಡಾ. ರವೀಂದ್ರ ಬೆಳ್ಳಿ
ದೌರ್ಜನ್ಯ ಸಮಿತಿಯ ಜಿಲ್ಲಾ ಸದಸ್ಯರಾದ ಮಲ್ಲು ತಳವಾರ, ಗಿಮಠ, ಗೀತಾ ಹೂಗಾರ, ಎಸ್ ಎಚ್ ಲಮಾಣಿ, ಫಾರೂಕ್ ಇನಾಮ್‌ದಾರ್, ಎಸ್ ಐ ಸಜ್ಜನ, ಪ್ರಕಾಶ ಕಡಕೋಳ, ಎಸ್ ಪಿ ಹಂಡರಗಲ್, ಜೆ ಎನ್ ಚೌಧರಿ, ಕೆ ಆರ್ ಜಾಧವ್, ಎ ಕೆ ಹಿರೇಮಠ ಸೇರಿದಂತೆ ಇತರರು ಇದ್ದರು.