ಧಾರವಾಡ | ದಣಿವರಿಯದ ಜೀವಗಳ ಸ್ವಾಭಿಮಾನಿ ಬದುಕಿಗೆ ‘ಲಿಂಬು ಸೋಡಾ’ ಆಸರೆ

Date:

Advertisements
  • 40 ವರ್ಷದಿಂದ ಲಿಂಬು ಸೋಡಾ ಮಾರಿ ಜೀವನ ಸಾಗಿಸುತ್ತಿರುವ ವೃದ್ಧ ದಂಪತಿ
  • ತಳ್ಳುಗಾಡಿಯಲ್ಲಿ ದುಡಿದು ತಿನ್ನುತ್ತಿರುವ ಅಜ್ಜ-ಅಜ್ಜಿಗೆ ಬೇಕಿದೆ ಸರ್ಕಾರದ ನೆರವು

”ಆವ ಕಾಯಕವಾದರೂ ಸ್ವಕಾಯಕ ಮಾಡಿ” ಎಂಬ ಶರಣರ ವಾಣಿಯಂತೆ ಸುಮಾರು 40 ವರ್ಷಗಳಿಂದ ದಣಿವರಿಯದೆ ಸತ್ಯ ಶುದ್ಧವಾದ ಕಾಯಕದಲ್ಲಿ ನಿರತರಾದವರು ಮೆಹಬೂಬಸಾಬ್ ಮತ್ತು ರಾಜಬಿ ಎಂಬ ವೃದ್ಧ ದಂಪತಿ.

ಧಾರವಾಡ ನಗರದ ಹೃದಯಭಾಗದ ಓಸವಾಲ್ ಟವರ್ ಮುಂದೆ ತಳ್ಳುವ ಗಾಡಿಯಲ್ಲಿ ಲಿಂಬು ಸೋಡಾ ವ್ಯಾಪಾರ ಮಾಡುವ ಇವರು, ತಮ್ಮ ಮೂವರು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಕೆಲವು ವರ್ಷಗಳ ನಂತರ ಮಕ್ಕಳು ಬೇರೆ ಮನೆ ನಿರ್ಮಿಸಿಕೊಂಡು ಪ್ರತ್ಯೇಕವಾಗಿ ವಾಸವಿದ್ದಾರೆ. ಅಂದಿನಿಂದ ಈವರೆಗೂ ‘ಒಲವೆ ಜೀವನ ಸಾಕ್ಷಾತ್ಕಾರ’ ಎಂಬಂತೆ ಈ ದಂಪತಿ ಬದುಕು ಸಾಗಿಸುತ್ತಿದ್ದಾರೆ.

ತಮ್ಮ ಹೊಟ್ಟೆಗೆ ಅನ್ನ ನೀಡಿದ ಲಿಂಬು ಸೋಡಾ ವ್ಯಾಪಾರವನ್ನೆ ಮುಂದುವರಿಸಿಕೊಂಡು ಜೀವನ ಸಾಗಿಸುತಿದ್ದಾರೆ. ’ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂಬ ದ. ರಾ. ಬೇಂದ್ರೆ ಅವರ ಪ್ರಸಿದ್ಧ ಕವಿತೆಗೆ ಸಾಕ್ಷಿಯಾಗಿರುವ ಇವರ ಬದುಕೇ ಇಂದಿನ ಯುವ ಪೀಳಿಗೆಗೆ ಸದಾ ಮಾದರಿಯಾಗಿ ನಿಲ್ಲುತ್ತದೆ. ದುಡಿಯದೆ ತಿನ್ನಬೇಕೆಂಬ ಸೋಮಾರಿಗಳು ಈ ಅಜ್ಜ-ಅಜ್ಜಿಯ ದುಡಿಮೆಯ ಮುಂದೆ ತಲೆ ತಗ್ಗಿಸಬೇಕಿದೆ.

Advertisements

ಧಾರವಾಡದ ಈ ವೃದ್ಧ ದಂಪತಿ ಯಾರ ಆಸರೆ ಇಲ್ಲದೆ ಪ್ರಾಮಾಣಿಕವಾಗಿ ದುಡಿದು ತಿನ್ನಬೇಕೆಂಬ ಸ್ವಾಭಿಮಾನಿಗಳು. ಕಲಾಭವನ (ಕಡಪಾ ಮೈದಾನ)ದ ಪಕ್ಕದಲ್ಲಿ ತಲೆಯೆತ್ತಿ ನಿಂತಿರುವ ಓಸವಾಲ್ ಟವರ್ ಮುಂದೆಯೆ ತಳ್ಳುವ ಗಾಡಿಯಲ್ಲಿ ಸುಮಾರು 40 ವರ್ಷಗಳಿಂದ ಸೋಡಾ ಮಾರಿ ಜೀವನ ಸಾಗಿಸಿದ ಇವರಿಗೆ ಇತ್ತೀಚಿನ ಬೆಲೆ ಏರಿಕೆಯ ದಿನಗಳಲ್ಲಿ ಬದುಕು ಬಹಳಷ್ಟು ದುಸ್ತರವಾಗಿದೆ. ಸ್ವಂತ ಮನೆಯಿಲ್ಲದ ಕಾರಣ ಬಾಡಿಗೆ ಮನೆಯಲ್ಲಿಯೆ ಜೀವನ ಸಾಗಿಸುತ್ತಿರುವ ಇವರ ಬದುಕಿಗೆ ಬೆಳಕಾಗಿ ಸರ್ಕಾರವು ಸಹಾಯಹಸ್ತ ಚಾಚುವುದು ಅವಶ್ಯವಾಗಿದೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ

ಸರ್ಕಾರದಿಂದ ಏನು ಸಹಾಯ ಅಪೇಕ್ಷಿಸುತ್ತೀರಿ? ಎಂದು ವೃದ್ಧ ದಂಪತಿಗಳನ್ನು ಪ್ರಶ್ನಿಸಿದಾಗ “ನಮಗೆ ವಾಸಿಸಲು ಒಂದು ಸಣ್ಣ ಮನೆ ಕೊಡಿಸಿದರೆ ಸಾಕು’ ಎಂದು ಮುಗ್ದ ಮನಸ್ಸಿನಿಂದ ಹೇಳುತ್ತಾರೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ರ ವರೆಗೆ ದುಡಿಯಲೇಬೇಕು. ಪತ್ನಿ ರಾಜಬಿ ಮೆಹಬೂಬಸಾಬ್ ಬಕಾರಿ ಅವರೆ ಸೋಡಾ ತಯಾರಿಕೆಗೆ ಬೇಕಾಗುವ ಲಿಂಬು, ಪಾಚಕ್, ಜೀರಿಗೆ, ಉಪ್ಪು ಇತರೆ ಸಾಮಗ್ರಿಗಳನ್ನು ತರುವುದು ಮೆಹಬೂಬಸಾಬ್ ಅವರೆ, ಲಿಂಬು ಸೋಡಾ ತಯಾರಿಸುವುದು ಕೂಡ ಅವರೆ.

ತಿಂಗಳ ಅಂತ್ಯ ಸಮೀಪ ಬರುತ್ತಿದ್ದಂತೆ ಬಾಡಿಗೆ ಕಟ್ಟುವುದೇ ಬಹುದೊಡ್ಡ ಚಿಂತೆ. ಮಕ್ಕಳು ಬಿಟ್ಟು ಹೋದಮೇಲೆ ’ನಿನಗೆ ನಾನು, ನನಗೆ ನೀನು’ ಎಂದು ನಡೆದ ವೃದ್ಧ ಶ್ರಮಜೀವಿಗಳಿಗೆ ಸರ್ಕಾರದ ಸಹಾಯ ಬೇಕೆ ಬೇಕು. ಇವರ ಅದಮ್ಯ ದುಡಿಮೆಯ ಛಲದ ಮುಂದೆ ವಯಸ್ಸು ಕೂಡಾ ಬೆದರಿ ನಿಂತಿರುವುದು ಸೋಜಿಗ.

– ಶರಣಪ್ಪ ಗೊಲ್ಲರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X