ತುಮಕೂರು | ರೈತರ ಜಾನುವಾರು ವಾಹನ ತಡೆದ ಬಜರಂಗದಳ ಕಾರ್ಯಕರ್ತರ ವಿರುದ್ಧ ಪ್ರತಿಭಟನೆ

Date:

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಜೋಡುಗಟ್ಟೆ ಗ್ರಾಮದಲ್ಲಿ ಸೋಮವಾರ ದನಗಳ ಸಂತೆಯಲ್ಲಿ ರೈತರು ಖರೀದಿಸಿದ್ದ ಜಾನುವಾರು ಸಾಗಿಸುತ್ತಿದ್ದ ವಾಹನ ತಡೆದ ಬಜರಂಗದಳ ಕಾರ್ಯಕರ್ತರು, ವಾಹನ ಸಹಿತ ರೈತರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಶಾಸಕ ಎಂ.ಟಿ.ಕೃಷ್ಣಪ್ಪ ಬಜರಂಗದಳದ ಕಾರ್ಯಕರ್ತರನ್ನು ವಿರೋಧಿಸಿ ಅವರು ಪೊಲೀಸ್‌ ಠಾಣೆ ಎದುರು ರೈತರೊಂದಿಗೆ ಪ್ರತಿಭಟನೆ ನಡೆಸಿದರು. ರೈತರ ಮೇಲೆ ದೌರ್ಜನ್ಯ ನಡೆಸಿದ ಪಿಎಸ್‌ಐ ಹೊನ್ನೇಗೌಡ ಅವರ ವರ್ಗಾವಣೆಗೆ ಪಟ್ಟು ಹಿಡಿದರು. 

ಘಟನೆ ಹಿನ್ನಲೆ:

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

‌ಸಂತೆಯಲ್ಲಿ ಖರೀದಿಸಿದ 15 ಎತ್ತು ಮತ್ತು ಹಸುಗಳನ್ನು ರೈತರು ಬಾಡಿಗೆ ವಾಹನದಲ್ಲಿ ಗ್ರಾಮಗಳಿಗೆ ಸಾಗಿಸುತ್ತಿದ್ದರು. ಮಾಯಸಂದ್ರ ಬಳಿ ವಾಹನ ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು ಎಂದು ಹೇಳಿಕೊಂಡ 10–12 ಜನರ ಗುಂಪು ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಆಕ್ಷೇಪ ಎತ್ತಿದರು.

ಫೋನ್‌ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡ ಬಜರಂಗದಳದ ಕಾರ್ಯಕರ್ತರು ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ದೂರಿದರು. ವಾಹನವನ್ನು ತುರುವೇಕೆರೆ ಪಟ್ಟಣದ ಪೊಲೀಸ್‌ ಠಾಣೆಗೆ ಕರೆದೊಯ್ದು, ರೈತರ ವಿರುದ್ಧ ದೂರು ಸಲ್ಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೈತರನ್ನು ವಶಕ್ಕೆ ಪಡೆದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ

ವಿಷಯ ತಿಳಿದು ಠಾಣೆಗೆ ಆಗಮಿಸಿದ ಶಾಸಕ ಎಂ ಟಿ ಕೃಷ್ಣಪ್ಪ, ರೈತರು ಮತ್ತು ಜಾನುವಾರುಗಳನ್ನು ಬಿಡುವಂತೆ ಒತ್ತಾಯಿಸಿ ಪೊಲೀಸ್‍ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಬಜರಂಗದಳದ ಕಾರ್ಯಕರ್ತರ ಮಾತು ಕೇಳಿ ರೈತರ ಮೇಲೆ ದೌರ್ಜನ್ಯ ನಡೆಸಿದ ಪಿಎಸ್‌ಐ ಹೊನ್ನೇಗೌಡ ಮತ್ತು ಸಿಬ್ಬಂದಿಯನ್ನು  ವರ್ಗಾವಣೆ ಮಾಡುವಂತೆ ಪಟ್ಟು ಹಿಡಿದರು.

ಹಿರಿಯ ಪೊಲೀಸ್‌ ಅಧಿಕಾರಿಗಳ ಸೂಚನೆ ಬಳಿಕ ರೈತರು ಮತ್ತು ಜಾನುವಾರುಗಳನ್ನು ಬಿಟ್ಟು ಕಳಿಸಲಾಯಿತು. 

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ: ಓರ್ವ ಮೃತ್ಯು; ಮತ್ತೋರ್ವ ಗಂಭೀರ

ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟು, ಸಹ ಸವಾರ ಗಂಭೀರ...

ಗುಬ್ಬಿ | ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿಯ ಎಸ್.ರಘು ಅವರಿಗೆ ‘ಉದ್ಯೋಗದಾತ’ ಬಿರುದು ಪ್ರದಾನ

ಗ್ರಾಮೀಣ ಭಾಗದ ಕನಿಷ್ಠ ವಿದ್ಯಾಭ್ಯಾಸದ ಯುವಕ ಯುವತಿಯರಿಗೆ ಕಂಪ್ಯೂಟರ್ ತರಬೇತಿ...

ಹಾವೇರಿ | ಕನ್ನಡದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ ಬೇಕೇ ಹೊರತು ರಾಜಕಾರಣಿಗಳ ಭಾಷಣಗಳಲ್ಲ: ಬಸವರಾಜ ಪೂಜಾರ

ನಮ್ಮ ರಾಜ್ಯದ ಮಾತೃ ಭಾಷೆ ಕನ್ನಡ ಉಳಿವಿಗಾಗಿ, ಅಭಿವೃದ್ಧಿಗಾಗಿ ಕನ್ನಡಿಗರಿಗೆ ಶಿಕ್ಷಣ...

ಸಾಗರ | ಆಟೋ-ಕಾರು ಮುಖಾಮುಖಿ ಡಿಕ್ಕಿ: ಇಬ್ಬರು ಮೃತ್ಯು

ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದಲ್ಲಿ ಆಟೋ ಹಾಗೂ ಕಾರಿನ ನಡುವೆ ಭೀಕರ...