ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಕನಿಷ್ಠ 17 ಜೀವಗಳನ್ನು ಬಲಿ ಪಡೆದಿರುವ ‘ನಿಗೂಢ ಕಾಯಿಲೆ’ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಡುವೆ ತಜ್ಞರು ‘ಆರ್ಗನೊಫಾಸ್ಫರಸ್’ ವಿಷವು ಈ ಕಾಯಿಲೆಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.
ಆರ್ಗನೊಫಾಸ್ಫರಸ್ ವಿಷವನ್ನು ಎದುರಿಸಲು ಪ್ರತಿವಿಷವನ್ನು ನೀಡಲಾಗಿದೆ, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯದ ಮೇಲೆ ಇದು ಉತ್ತಮವಾದ ಪ್ರಭಾವ ಬೀರಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ನಿಗೂಢ ಕಾಯಿಲೆಗೆ 17 ಬಲಿ; ‘ಕಂಟೈನ್ಮೆಂಟ್ ಝೋನ್’ ಘೋಷಣೆ, ವೈದ್ಯರ ರಜೆ ರದ್ದು
“ನಾವು ಅಟ್ರೋಪಿನ್ ಪ್ರತಿವಿಷವನ್ನು ಬಳಿಸಿದ್ದೇವೆ. ಅದು ಚೆನ್ನಾಗಿ ಕೆಲಸ ಮಾಡಿದೆ. ವಿಷದ ನಿಖರವಾದ ಸ್ವರೂಪವನ್ನು ನಿರ್ಧರಿಸಿದ ನಂತರ ನಾವು ರೋಗಿಗಳಿಗೆ ಅಟ್ರೋಪಿನ್ ನೀಡಿದ್ದೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಬಾಧಾಲ್ ಗ್ರಾಮದಲ್ಲಿ ಸಾವುಗಳ ಹಿಂದೆ ಸಾಂಕ್ರಾಮಿಕ ರೋಗ ಅಥವಾ ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳು ಕಾರಣವಲ್ಲ ಎಂಬುದು ಪ್ರಯೋಗಾಲಯದಲ್ಲಿ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಕಾರಣವನ್ನು ಪತ್ತೆ ಹಚ್ಚುವುದು ಅತೀ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಹಾಗಾಗಿ ನಿಗೂಢ ಕಾಯಿಲೆ ಎಂದೇ ಕರೆಯಲಾಗಿತ್ತು.
ಭಾರತದ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರವು ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರ ಆರೋಗ್ಯ ಇಲಾಖೆಗೆ ಪರೀಕ್ಷೆಯಲ್ಲಿ ಆರ್ಗನೊಫಾಸ್ಫರಸ್ ಕಂಡುಬಂದಿದೆ. ಅದು ಸಾವಿಗೆ ಕಾರಣ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ನಿಗೂಢ ಕಾಯಿಲೆಗೆ ಐದು ಮಕ್ಕಳು ಸೇರಿ ಇಡೀ ಕುಟುಂಬವೇ ಬಲಿ; ನನ್ನ ಜಗತ್ತೇ ನಾಶವಾಯಿತು ಎಂದ ಅಸ್ಲಾಂ
“ಆಹಾರ ಮತ್ತು ನೀರಿನಲ್ಲಿ ಆರ್ಗನೊಫಾಸ್ಫರಸ್ ಬಳಕೆಯು ನರಹತ್ಯೆಯೇ ಅಥವಾ ಆಕಸ್ಮಿಕವೇ ಎಂಬುದು ಈಗ ತನಿಖೆಯ ವಿಷಯವಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಾವುಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ಅಥವಾ ಎಸ್‌ಐಟಿಯನ್ನು ರಚಿಸಿದ್ದಾರೆ.
ಕಳೆದ ವಾರ, ಅಧಿಕಾರಿಗಳು ಗ್ರಾಮವನ್ನು ಕಂಟೈನ್‌ಮೆಂಟ್ ವಲಯವೆಂದು ಘೋಷಿಸಿ 200ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಿದರು. ಇದರ ಹೊರತಾಗಿ, ಗ್ರಾಮಸ್ಥರು ಉಪಯೋಗಿಸುತ್ತಿದ್ದ ನೀರಿನ ಮೂಲದಲ್ಲಿ ಕೀಟನಾಶಕಗಳು ಕಂಡುಬಂದಿದೆ. ತನಿಖೆಗಾಗಿ ಸದ್ಯ ಅದನ್ನೂ ಮುಚ್ಚಲಾಗಿದೆ. ಗ್ರಾಮಸ್ಥರು ಬಳಸಿದ ಆಹಾರ ಪದಾರ್ಥಗಳನ್ನು ಸಹ ಪರೀಕ್ಷಿಸಲಾಗಿದೆ.
