ಇಂಡೋನೇಷ್ಯಾ ಭಾರತದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಅನೇಕ ಇಂಡೋನೇಷ್ಯಾದ ಹೆಸರುಗಳು ಸಂಸ್ಕೃತ ಮೂಲದ್ದಾಗಿದೆ. ನನಲ್ಲಿ ಭಾರತೀಯ ಡಿಎನ್‌ಎ ಇದೆ ಎಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಹೇಳಿದ್ದಾರೆ.
ಭಾರತದ 76ನೇ ಗಣರಾಜ್ಯೋತ್ಸವದಲ್ಲಿ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಇಂಡೋನೇಷ್ಯಾ ಅಧ್ಯಕ್ಷರು, ಭಾರತದೊಂದಿಗೆ ತಮ್ಮ ದೇಶದ ಸಾಂಸ್ಕೃತಿಕ ಸಂಬಂಧಗಳನ್ನು ಉಲ್ಲೇಖಿಸಿದರು. “ನಾನು ಭಾರತೀಯ ಸಂಗೀತವನ್ನು ಕೇಳಿದಾಗಲೆಲ್ಲಾ ನೃತ್ಯ ಮಾಡಲು ಪ್ರಾರಂಭಿಸುತ್ತೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? 76ನೇ ಗಣರಾಜ್ಯೋತ್ಸವಕ್ಕೆ 10,000 ಗಣ್ಯರಿಗೆ ಆಹ್ವಾನ: ಮೆರವಣಿಗೆಯಲ್ಲಿ ರಾಜ್ಯದ ಲಕ್ಕುಂಡಿ ಶಿಲ್ಪಕಲೆಯ ಸ್ತಬ್ಧಚಿತ್ರ ಭಾಗಿ
“ಕೆಲವು ದಿನಗಳವರೆಗೆ ನಾನು ಭಾರತಕ್ಕೆ ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಕಾರ್ಯಕ್ರಮಗಳು ಮತ್ತು ಬಡತನವನ್ನು ನಿವಾರಿಸುವ ಬದ್ಧತೆಯಿಂದ ನಾನು ಬಹಳಷ್ಟು ಕಲಿತೆ” ಎಂದು ಹೇಳಿದರು.
“ನಮ್ಮ ಭಾಷೆಯ ಒಂದು ಪ್ರಮುಖ ಭಾಗವು ಸಂಸ್ಕೃತದಿಂದ ಬಂದಿದೆ. ನಮ್ಮ ಹೆಸರುಗಳು ಇಂಡೋನೇಷ್ಯಾದ ಅನೇಕ ಹೆಸರುಗಳು ವಾಸ್ತವವಾಗಿ ಸಂಸ್ಕೃತ ಹೆಸರುಗಳಾಗಿವೆ. ನಮ್ಮ ದೈನಂದಿನ ಜೀವನದಲ್ಲಿ ಪ್ರಾಚೀನ ಭಾರತೀಯ ನಾಗರಿಕತೆಯ ಪ್ರಭಾವವು ತುಂಬಾ ಪ್ರಬಲವಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ
“ನನ್ನ ಆನುವಂಶಿಕ ಅನುಕ್ರಮ ಪರೀಕ್ಷೆ, ನನ್ನ ಡಿಎನ್‌ಎ ಪರೀಕ್ಷೆಯನ್ನು ಮಾಡಲಾಗಿತ್ತು ಮತ್ತು ನನಗೆ ಭಾರತೀಯ ಡಿಎನ್‌ಎ ಇದೆ ಎಂದು ತಿಳಿದುಬಂದಿದೆ. ಇದನ್ನು ನಾನು ಅಧ್ಯಕ್ಷರು, ಪ್ರಧಾನಿ, ಉಪಾಧ್ಯಕ್ಷರಿಗೆ ತಿಳಿಸಲು ಬಯಸುತ್ತೇನೆ” ಎಂದು ತಿಳಿಸಿದರು.
“ಆರೋಗ್ಯ, ಔಷಧ, ಶಿಕ್ಷಣ, ಸಂಸ್ಕೃತಿ, ಸಾಮರ್ಥ್ಯ ವೃದ್ಧಿ, ರಕ್ಷಣೆ, ಭದ್ರತೆ, ಡಿಜಿಟಲ್ ಸಹಕಾರ, ಕಡಲ ಸುರಕ್ಷತೆ ಮತ್ತು ಭದ್ರತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ನಾವು ಮಾತುಕತೆ ನಡೆಸಿದ್ದೇವೆ. ನಮ್ಮ ಎಲ್ಲಾ ಮಹತ್ವದ ಒಪ್ಪಂದಗಳನ್ನು ನಾವು ಜಾರಿಗೆ ತರಲು ಬಯಸುತ್ತೇವೆ” ಎಂದು ತಿಳಿಸಿದರು.
